ಯುರೋಪಿಯನ್ ಯೂನಿಯನ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದ 'ಗೇಮ್ ಚೇಂಜರ್' ಆಗಲಿದೆ: ಜೈಶಂಕರ್
ಭಾರತ-ಯುರೋಪಿಯನ್ ಯೂನಿಯನ್(ಇಯು) ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಒಂದು ಗೇಮ್ ಚೇಂಜರ್ ಆಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
Published: 28th February 2023 11:14 PM | Last Updated: 03rd March 2023 02:08 PM | A+A A-

ಜೈ ಶಂಕರ್
ನವದೆಹಲಿ: ಭಾರತ-ಯುರೋಪಿಯನ್ ಯೂನಿಯನ್(ಇಯು) ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಒಂದು ಗೇಮ್ ಚೇಂಜರ್ ಆಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ವ್ಯಾಪಾರ ಒಪ್ಪಂದಗಳಿಗೆ ಭಾರತದ ಹೊಸ ವಿಧಾನವು ಗುಣಮಟ್ಟಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಬೆಳವಣಿಗೆಯನ್ನು ಮುಂದುವರಿಸುವ ಏಕೈಕ ಪ್ರಮುಖ ಆರ್ಥಿಕತೆ ಭಾರತವಾಗಲಿದೆ ಎಂದು ಜೈಶಂಕರ್ ಹೇಳಿದರು.
ನಮ್ಮ ದ್ವಿಪಕ್ಷೀಯ ಪಾಲುದಾರಿಕೆ ಕುರಿತು ಚರ್ಚಿಸಲು ನನಗೆ ಅವಕಾಶ ಸಿಕ್ಕಿದೆ ಎಂದು ಕೇಂದ್ರ ಸಚಿವರು ಹೇಳಿದರು. ಸುಸ್ಥಿರತೆಗೆ ಚಾಲನೆ ನೀಡುವಲ್ಲಿ ವ್ಯಾಪಾರಗಳು ಪ್ರಾಥಮಿಕ ಪಾತ್ರವನ್ನು ಹೊಂದಿವೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಬಹು-ಧ್ರುವೀಯ, ಭೌಗೋಳಿಕ ರಾಜಕೀಯ ಮತ್ತು ಭದ್ರತಾ ಕಾಳಜಿಗಳನ್ನು ಹಂಚಿಕೊಳ್ಳುತ್ತವೆ. ನಿಗದಿತ ಸಮಯಕ್ಕಿಂತ ಮೊದಲೇ ನಾವು ನಮ್ಮ ಶಾಶ್ವತ ಗುರಿಗಳನ್ನು ತಲುಪುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: GDP: 3ನೇ ತ್ರೈಮಾಸಿಕ ನಿಧಾನಗತಿಯಲ್ಲಿ ಜಿಡಿಪಿ; ಡಿಸೆಂಬರ್ ಕ್ವಾರ್ಟರ್ನಲ್ಲಿ ಶೇ. 4.4 ದರಕ್ಕೆ ಆರ್ಥಿಕತೆ ಸೀಮಿತ
ಇತ್ತೀಚಿನ ವರ್ಷಗಳಲ್ಲಿ ಭಾರತ-ಇಯು ಪಾಲುದಾರಿಕೆ ಭವಿಷ್ಯದಲ್ಲಿ ಕೇಂದ್ರವು ಸಾಕಷ್ಟು ಸಂಪನ್ಮೂಲಗಳ ಮೇಲೆ ಹೂಡಿಕೆ ಮಾಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದರು. ಭಾರತವು ಇಂದು 100ಕ್ಕೂ ಹೆಚ್ಚು ಯುನಿಕಾರ್ನ್‌ಗಳನ್ನು ಹೊಂದಿದೆ ಎಂದರು.
ನಮ್ಮ ತಂತ್ರಜ್ಞಾನದ ಕಥೆ ಇದಕ್ಕಿಂತ ಹೆಚ್ಚು, ನಾವು ಎಲ್ಲಾ ಜನರ ಜೀವನವನ್ನು ಮುಟ್ಟಿದ್ದೇವೆ. ಡಿಜಿಟಲ್ ವಹಿವಾಟುಗಳಿಗೆ ನಮ್ಮ ಆಧಾರ್ ಮತ್ತು ಯುಪಿಐ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವಲ್ಲಿ ಅದ್ಭುತವಾಗಿದೆ. ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್‌ಗಳಲ್ಲಿ ಒಂದಾಗಿ ಮುಂದುವರಿಯುತ್ತದೆ ಎಂದು ಸಚಿವರು ಹೇಳಿದರು. EU-ಭಾರತ ಪಾಲುದಾರಿಕೆಗೆ ಶುದ್ಧ ಶಕ್ತಿ ಮತ್ತು ಹಸಿರು ಪರಿವರ್ತನೆ ಅತ್ಯಗತ್ಯ. ಹಸಿರು ರೂಪಾಂತರವು ನಮ್ಮ ಸುಸ್ಥಿರ ಗುರಿಗಳ ಕೇಂದ್ರವಾಗಿದೆ. ಜಿ20 ಕಾರ್ಯಸೂಚಿಯಲ್ಲಿದೆ ಎಂದು ಅವರು ಹೇಳಿದರು.