ಗೂಗಲ್ ನಿಂದ 12,000 ಉದ್ಯೋಗಿಗಳ ವಜಾ; 'ಕ್ಷಮಿಸಿ' ಎಂದ ಸುಂದರ್ ಪಿಚೈ

ಟೆಕ್ ದೈತ್ಯ ಮೈಕ್ರೋಸಾಫ್ಟ್ ಸೇರಿದಂತೆ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆಸಿದ್ದು, ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ 12,000 ಉದ್ಯೋಗಗಳನ್ನು ತೆಗೆದುಹಾಕುವುದಾಗಿ ಶುಕ್ರವಾರ ಘೋಷಿಸಿದೆ.
ಗೂಗಲ್ ಸಾಂದರ್ಭಿಕ ಚಿತ್ರ
ಗೂಗಲ್ ಸಾಂದರ್ಭಿಕ ಚಿತ್ರ

ಬೆಂಗಳೂರು: ಟೆಕ್ ದೈತ್ಯ ಮೈಕ್ರೋಸಾಫ್ಟ್ ಸೇರಿದಂತೆ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆಸಿದ್ದು, ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ 12,000 ಉದ್ಯೋಗಗಳನ್ನು ತೆಗೆದುಹಾಕುವುದಾಗಿ ಶುಕ್ರವಾರ ಘೋಷಿಸಿದೆ.

ಜನವರಿ 18 ರಂದು ಮೈಕ್ರೋಸಾಫ್ಟ್ ಕಂಪನಿ 10,000 ಉದ್ಯೋಗ ಕಡಿತಗೊಳಿಸುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಈಗ ಗೂಗಲ್ ನ ಆಲ್ಫಾಬೆಟ್ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ, "ಕಳೆದ ಎರಡು ವರ್ಷಗಳಲ್ಲಿ ನಾವು ನಾಟಕೀಯ ಬೆಳವಣಿಗೆಯ ಅವಧಿಗಳನ್ನು ನೋಡಿದ್ದೇವೆ. ಆ ಬೆಳವಣಿಗೆಯನ್ನು ಸರಿಪಡಿಸಲು. ನಮ್ಮ ಗಮನವನ್ನು ತೀಕ್ಷ್ಣಗೊಳಿಸಲು ಮತ್ತು ನಮ್ಮ ವೆಚ್ಚದ ವ್ಯವಹಾರಗಳನ್ನು ಪುನರ್‌ ರೂಪಿಸಲು ಹಾಗೂ ನಮ್ಮ ಪ್ರತಿಭೆ ಮತ್ತು ಬಂಡವಾಳವನ್ನು ನಮ್ಮ ಅತ್ಯುನ್ನತ ಆದ್ಯತೆಗಳಿಗೆ ನಿರ್ದೇಶಿಸಲು ಪ್ರಮುಖ ಸಂದರ್ಭ ಇದಾಗಿದೆ ಎಂದು ಹೇಳಿದ್ದಾರೆ.

"ಕಂಪನಿಯ ಈ ನಿರ್ಧಾರಕ್ಕಾಗಿ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಈ ಬದಲಾವಣೆಗಳು ಗೂಗ್ಲರ್‌ಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂಬ ಅಂಶ ನನಗೂ ಅತ್ಯಂತ ಭಾರವಾಗಿದೆ ಎಂದು ಪಿಚೈ ತಿಳಿಸಿದ್ದಾರೆ.

ಕಂಪನಿಯು ಪೂರ್ಣ ಅಧಿಸೂಚನೆಯ ಅವಧಿಯಲ್ಲಿ(ಕನಿಷ್ಠ 60 ದಿನಗಳು) ಉದ್ಯೋಗಿಗಳಿಗೆ ವೇತನ ಪಾವತಿಸುತ್ತದೆ. ಗೂಗಲ್‌ನಲ್ಲಿ ಪ್ರತಿ ಹೆಚ್ಚುವರಿ ವರ್ಷಕ್ಕೆ 16 ವಾರಗಳ ಸಂಬಳ ಮತ್ತು ಎರಡು ವಾರಗಳಿಂದ ಪ್ರಾರಂಭವಾಗುವ ಬೇರ್ಪಡಿಕೆ ಪ್ಯಾಕೇಜ್ ಅನ್ನು ಗೂಗಲ್‌ ನೀಡುತ್ತದೆ ಮತ್ತು ಕನಿಷ್ಠ 16 ವಾರಗಳ ಜಿಎಸ್‌ಯು ವೆಸ್ಟಿಂಗ್ ಅನ್ನು ನೀಡಲಾಗುತ್ತದೆ ಎಂದು ಪಿಚೈ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com