ಭಾರತದಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಅಮೇರಿಕಾ ಚಿಪ್ ಉತ್ಪಾದಕ ಸಂಸ್ಥೆ AMD ಮುಂದು

ಅಮೇರಿಕಾದ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (ಎಎಂ) ಭಾರತದಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. 
ಚಿಪ್ ಉತ್ಪಾದಕ ಸಂಸ್ಥೆ
ಚಿಪ್ ಉತ್ಪಾದಕ ಸಂಸ್ಥೆ

ನವದೆಹಲಿ: ಅಮೇರಿಕಾದ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (ಎಎಂಡಿ) ಭಾರತದಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. 

ಮುಂದಿನ 5 ವರ್ಷಗಳಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಭಾರತದಲ್ಲಾಗಲಿದ್ದು, ಬೆಂಗಳೂರಿನಲ್ಲಿ ಅತಿ ದೊಡ್ಡ ಡಿಸೈನ್ ಕೇಂದ್ರ ಸ್ಥಾಪಿಸುವುದಾಗಿ ಸಂಸ್ಥೆ ತಿಳಿಸಿದೆ. ಎಎಂಡಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮಾರ್ಕ್ ಪೇಪರ್ ಮಾಸ್ಟರ್ ಸೆಮಿಕಂಡಕ್ಟರ್ ಕಾನ್ಫರೆನ್ಸ್ ನಲ್ಲಿ  ಪ್ರಧಾನಿ ಮೋದಿ ಸಮ್ಮುಖದಲ್ಲಿ ಈ ಘೋಷಣೆ ಮಾಡಿದ್ದಾರೆ.

ಈ ನಡುವೆ ಮೈನಿಂಗ್ ಅನಿಲ್ ಅಗರ್ವಾಲ್ ವೇದಾಂತ ಸಂಸ್ಥೆಯ ಚಿಪ್ ತಯಾರಿಕಾ ಯೋಜನೆ ಇನ್ನೆರಡು ವರ್ಷ 6 ತಿಂಗಳಲ್ಲಿ ಸಿದ್ಧವಾಗಿರಲಿದೆ ಎಂದು ಹೇಳಿದ್ದಾರೆ.

ಫಾಕ್ಸ್‌ಕಾನ್ ಎಂದೂ ಕರೆಯಲ್ಪಡುವ ಹಾನ್ ಹೈ ಟೆಕ್ನಾಲಜಿ ಗ್ರೂಪ್, ಈ ತಿಂಗಳ ಆರಂಭದಲ್ಲಿ ವೇದಾಂತದೊಂದಿಗೆ ಚಿಪ್‌ಮೇಕಿಂಗ್ ಜಂಟಿ ಉದ್ಯಮದಿಂದ ಹೊರಬಂದಿತ್ತು ಮತ್ತು ಸರ್ಕಾರದ ಸೆಮಿಕಂಡಕ್ಟರ್ ಉತ್ಪಾದನಾ ಯೋಜನೆಯಡಿಯಲ್ಲಿ ಪ್ರೋತ್ಸಾಹಕ್ಕಾಗಿ ಅರ್ಜಿ ಸಲ್ಲಿಸಲು ಉದ್ದೇಶಿಸಿದೆ. ದೇಶದಲ್ಲಿ ಚಿಪ್ ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸುವ ಘಟಕಗಳಿಗೆ ಸರ್ಕಾರ $ 10 ಬಿಲಿಯನ್ ಹಣಕಾಸಿನ ಪ್ರೋತ್ಸಾಹವನ್ನು ನೀಡಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com