
ಫೇಸ್ ಬುಕ್-ಮೆಟಾ
ವಾಷಿಂಗ್ಟನ್: c ಮಾತೃಸಂಸ್ಥೆ ಮೆಟಾ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, 10,000 ಕಾರ್ಮಿಕರನ್ನು ವಜಾಗೊಳಿಸಲಿದೆ ಎಂದು ವರದಿಯೊಂದು ತಿಳಿಸಿದೆ.
ಮೆಟಾ ಸಂಸ್ಥೆಯಲ್ಲಿ 5,000 ಓಪನ್ ಉದ್ಯೋಗಗಳನ್ನು ಸಹ ಭರ್ತಿ ಮಾಡುವುದಿಲ್ಲ ಎಂದು ಎಪಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಇದನ್ನು ಓದಿ: ಟ್ವಿಟರ್ ಗೆ ಸಡ್ಡು; ಮತ್ತೊಂದು ಸಾಮಾಜಿಕ ಮಾಧ್ಯಮ ಆ್ಯಪ್ ತಯಾರಿಸಲು ಮೆಟಾ ಮುಂದು!
ಮೆಟಾ ಪ್ಲಾಟ್‌ಫಾರ್ಮ್, ಮುಂದಿನ ಕೆಲವು ತಿಂಗಳುಗಳಲ್ಲಿ ಹಲವಾರು ಸುತ್ತುಗಳಲ್ಲಿ ಹೆಚ್ಚುವರಿ ಉದ್ಯೋಗ ಕಡಿತ ಮಾಡಲು ಯೋಜಿಸುತ್ತಿದೆ ಎಂದು ಮಾರ್ಚ್ 11 ರಂದು, ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.