ಟ್ವಿಟರ್ ಗೆ ಸಡ್ಡು; ಮತ್ತೊಂದು ಸಾಮಾಜಿಕ ಮಾಧ್ಯಮ ಆ್ಯಪ್ ತಯಾರಿಸಲು ಮೆಟಾ ಮುಂದು!
ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್ ಗೆ ಸಡ್ಡು ಹೊಡೆಯಲು ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಮುಂದಾಗಿದ್ದು, ಟ್ವಿಟರ್ ಮಾದರಿಯ ಸಾಮಾಜಿಕ ಮಾಧ್ಯಮ ಆ್ಯಪ್ ತಯಾರಿಕೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
Published: 11th March 2023 12:35 PM | Last Updated: 11th March 2023 03:54 PM | A+A A-

ಟ್ವಿಟರ್ ಗೆ ಮೆಟಾ ಸಡ್ಡು
ವಾಷಿಂಗ್ಟನ್: ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್ ಗೆ ಸಡ್ಡು ಹೊಡೆಯಲು ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಮುಂದಾಗಿದ್ದು, ಟ್ವಿಟರ್ ಮಾದರಿಯ ಸಾಮಾಜಿಕ ಮಾಧ್ಯಮ ಆ್ಯಪ್ ತಯಾರಿಕೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
ಹೌದು.. ಟೆಕ್ಸ್ಟ್ ಆಧರಿತ ಕಂಟೆಂಟ್ ಪೋಸ್ಟ್ ಮಾಡುವವರಿಗಾಗಿ ಟ್ವಿಟರ್ ಮಾದರಿಯ ಮೊಬೈಲ್ ಆ್ಯಪ್ ರಚಿಸಲು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಮುಂದಾಗಿದ್ದು, ಈ ಯೋಜನೆಗೆ 'P92' ಎಂದು ಕೋಡ್ ನೇಮ್ ಇಡಲಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಲಾಗಿನ್ ಮಾಹಿತಿಯನ್ನೇ ಬಳಸಿಕೊಂಡು ಬಳಕೆದಾರರು ಇದಕ್ಕೆ ಲಾಗಿನ್ ಆಗಬಹುದಾಗಿದೆ ಎಂದು ಮೆಟಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಟೆಕ್ ದೈತ್ಯ ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜಿನಾಮೆ, ಟೆಕ್ ಮಹೀಂದ್ರಾಗೆ ಸೇರ್ಪಡೆ
ವರದಿಯಲ್ಲಿರುವಂತೆ, 'ಟೆಕ್ಸ್ಟ್ ಅಪ್ಡೇಟ್‌ಗಳನ್ನು ಹಾಕುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗಾಗಿ ಸ್ವತಂತ್ರ ವಿಕೇಂದ್ರೀಕೃತ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ಥಾಪಿಸುತ್ತಿದ್ದೇವೆ. ಸಮಾಜದ ಜನಪ್ರಿಯ ವ್ಯಕ್ತಿಗಳು ಮತ್ತು ಕಂಟೆಂಟ್ ಸೃಷ್ಟಿಕರ್ತರು ತಮ್ಮ ಆಸಕ್ತಿಗೆ ತಕ್ಕಂತೆ ಅಪ್ಡೇಟ್‌ಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯ ಅಗತ್ಯವಿದೆ ಎಂದು ನಾವು ನಂಬಿದ್ದೇವೆ’ ಎಂದು ಕಂಪನಿ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಂ ಮೊಸ್ಸೊರಿ ಅವರು, ಈ ಯೋಜನೆಯ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದ್ದು, ಆದರೆ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿಲ್ಲ. ಆದರೆ, ಕಾನೂನು ಮತ್ತು ನಿಯಂತ್ರಣ ತಂಡಗಳು ಆ್ಯಪ್‌ಗೆ ಸಂಬಂಧಿಸಿದ ಪ್ರೈವಸಿ ವಿಷಯಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಾರ್ಷಿಕ ಆರ್ಥಿಕ ಆದಾಯ ಗುರಿ ತಲುಪಲು ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ!
ಹೊಸ ಮೆಟಾ ಅಪ್ಲಿಕೇಶನ್ 2016 ರಲ್ಲಿ ಪ್ರಾರಂಭವಾದ ಟ್ವಿಟರ್ ತರಹದ ಸೇವೆಯಾದ ಮಾಸ್ಟೋಡಾನ್ ಅನ್ನು ಶಕ್ತಿಯುತಗೊಳಿಸುವ ಚೌಕಟ್ಟನ್ನು ಆಧರಿಸಿದೆ - ಮತ್ತು ಅದರೊಂದಿಗೆ ಪರಸ್ಪರ ಕಾರ್ಯನಿರ್ವಹಿಸುತ್ತದೆ ಮತ್ತು ಕಳೆದ ಅಕ್ಟೋಬರ್‌ನಲ್ಲಿ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಈ ಮಾಸ್ಟೋಡಾನ್ ಆ್ಯಪ್ ನ ಜನಪ್ರಿಯತೆ ಹೆಚ್ಚಾಗತೊಡಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ‘ನೋಟ್ಸ್’ ಎಂಬ ಹೊಸ ಫೀಚರ್ ಅನ್ನು ಇನ್‌ಸ್ಟಾಗ್ರಾಂ ಪರಿಚಯಿಸಿತ್ತು. ಇದರಲ್ಲಿ ಕೇವಲ 60 ಅಕ್ಷರಗಳ ಟೆಕ್ಸ್ಟ್ ಮತ್ತು ಎಮೊಜಿ ಬಳಸಿಕೊಂಡು ಪೋಸ್ಟ್ ಮಾಡಬಹುದಾಗಿದೆ.