ಟೆಕ್ ದೈತ್ಯ ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜಿನಾಮೆ, ಟೆಕ್ ಮಹೀಂದ್ರಾಗೆ ಸೇರ್ಪಡೆ
ಬೆಂಗಳೂರು: ದೇಶದ ಟೆಕ್ ದೈತ್ಯ ಸಂಸ್ಥೆ ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಷಿ ರಾಜಿನಾಮೆ ನೀಡಿದ್ದು, ಮತ್ತೊಂದು ಟೆಕ್ ಸಂಸ್ಛೆ ಟೆಕ್ ಮಹೀಂದ್ರಾಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು.. ಐಟಿ ಕಂಪನಿ ಟೆಕ್ ಮಹೀಂದ್ರಾ ಶನಿವಾರದಂದು ಮಾಜಿ ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಅವರನ್ನು ಎಂಡಿ ಮತ್ತು ಸಿಇಒ ನಿಯೋಜಿತರಾಗಿ ನೇಮಕ ಮಾಡುವುದಾಗಿ ಘೋಷಿಸಿದ್ದು, ಅವರು ಈ ವರ್ಷ ಡಿಸೆಂಬರ್ 19 ರಂದು ನಿವೃತ್ತರಾದ ನಂತರ ಸಿ ಪಿ ಗುರ್ನಾನಿ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪತಿ ನಾರಾಯಣಮೂರ್ತಿ, ಅಳಿಯ ಯುಕೆ ಪ್ರಧಾನಿ ರಿಷಿ ಸುನಕ್, ಮಗಳು ಅಕ್ಷತಾಗೆ ಸುಧಾ ಮೂರ್ತಿ ನೀಡಿದ 4 ಸಲಹೆಗಳಿವು!
ಫಿನಾಕಲ್ (ಇನ್ಫೋಸಿಸ್‌ನ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್) ಮತ್ತು ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕೃತಗೊಂಡ ಪೋರ್ಟ್‌ಫೋಲಿಯೊವನ್ನು ಒಳಗೊಂಡಿರುವ ಜಾಗತಿಕ ಹಣಕಾಸು ಸೇವೆಗಳು ಮತ್ತು ಆರೋಗ್ಯ ಮತ್ತು ಸಾಫ್ಟ್‌ವೇರ್ ವ್ಯವಹಾರಗಳ ಸಂಸ್ಛೆ ಇನ್ಫೋಸಿಸ್ ಅನ್ನು ಜೋಶಿ ತೊರೆದಿದ್ದು, ಅವರ ರಾಜಿನಾಮೆ ಕುರಿತು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಮೋಹಿತ್ ಅವರು 19ನೇ ಡಿಸೆಂಬರ್ 2023 ರಂದು ಸಿ ಪಿ ಗುರ್ನಾನಿ ನಿವೃತ್ತರಾದಾಗ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಅವರು ಸಾಕಷ್ಟು ಪರಿವರ್ತನೆಯ ಸಮಯವನ್ನು ಅನುಮತಿಸಲು ಆ ದಿನಾಂಕದ ಮೊದಲು ಟೆಕ್ ಮಹೀಂದ್ರಾಗೆ ಸೇರುತ್ತಾರೆ" ಎಂದು ಟೆಕ್ ಮಹೀಂದ್ರಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತ್ಯೇಕವಾಗಿ, ಇನ್ಫೋಸಿಸ್ ಸಂಸ್ಥೆ ಕೂಡ ಜೋಶಿ ಕಂಪನಿಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದೆ. ಅವರು ಮಾರ್ಚ್ 11, 2023 ರಿಂದ ರಜೆಯಲ್ಲಿದ್ದು, ಕಂಪನಿಯೊಂದಿಗೆ ಅವರ ಕೊನೆಯ ದಿನಾಂಕ ಜೂನ್ 9, 2023 ಆಗಿರುತ್ತದೆ ಎಂದು ತಿಳಿಸಿದೆ.
ಜೋಶಿ ಅವರು ಭಾರತೀಯ ಐಟಿ ವಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಗುರ್ನಾನಿ ಅವರ ಸ್ಥಾನವನ್ನು ತುಂಬಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ