ಪ್ಯಾಕ್ ನಲ್ಲಿ ಒಂದು ಬಿಸ್ಕೇಟ್ ಕಡಿಮೆ: ಗ್ರಾಹಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲು ಐಟಿಸಿಗೆ ಆದೇಶ!
ಸನ್ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕ್ ನಲ್ಲಿ ಒಂದು ಬಿಸ್ಕೇಟ್ ಕಡಿಮೆ ಇದ್ದ ಪರಿಣಾಮ ಗ್ರಾಹಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲು ಐಟಿಸಿಗೆ ತಮಿಳುನಾಡಿನ ತಿರುವಳ್ಳುವರ್ ನ ಗ್ರಾಹಕ ಆಯೋಗ ಆದೇಶ ನೀಡಿದೆ.
Published: 06th September 2023 06:46 PM | Last Updated: 06th September 2023 07:19 PM | A+A A-

ಸನ್ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್
ತಿರುವಳ್ಳುವರ್: ಸನ್ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕ್ ನಲ್ಲಿ ಒಂದು ಬಿಸ್ಕೇಟ್ ಕಡಿಮೆ ಇದ್ದ ಪರಿಣಾಮ ಗ್ರಾಹಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲು ಐಟಿಸಿಗೆ ತಮಿಳುನಾಡಿನ ತಿರುವಳ್ಳುವರ್ ನ ಗ್ರಾಹಕ ಆಯೋಗ ಆದೇಶ ನೀಡಿದೆ.
ಕಾರ್ಪೊರೇಟ್ ಸಂಸ್ಥೆಯ ಬಿಸ್ಕೆಟ್ ಪೊಟ್ಟಣದಲ್ಲಿ ಮುದ್ರಿಸಲಾಗಿದ್ದ ಬಿಸ್ಕೆಟ್ ಸಂಖ್ಯೆಗಿಂತ ಒಂದು ಬಿಸ್ಕೆಟ್ ಕಡಿಮೆ ಇದೆ, ಇದು ಅನ್ಯಾಯದ ವ್ಯಾಪಾರ ಎಂದು ಗ್ರಾಹಕರು ಆರೋಪಿಸಿ ಆಯೋಗದ ಮೆಟ್ಟಿಲೇರಿದ್ದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಇತ್ತೀಚಿನ ಆದೇಶದಲ್ಲಿ, ನಿರ್ದಿಷ್ಟ ಅನುಮೋದನೆಯೊಂದಿಗೆ ಬ್ಯಾಚ್ ನಂ.0502C36 ರಲ್ಲಿ ವಿವಾದಿತ ಬಿಸ್ಕೇಟ್ 'ಸನ್‌ಫೀಸ್ಟ್ ಮೇರಿ ಲೈಟ್' ಮಾರಾಟವನ್ನು ನಿಲ್ಲಿಸುವಂತೆ ಕಂಪನಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಸಿನಿಮಾ ಕಲಾವಿದಗೆ ತಪ್ಪು ವರದಿ: ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ದಂಡ ವಿಧಿಸಿದ ಗ್ರಾಹಕ ಆಯೋಗ
ಬಿಸ್ಕೆಟ್ ತೂಕಕ್ಕೆ ಸಂಬಂಧಿಸಿದಂತೆ, ಗ್ರಾಹಕಕ್ರು ಮಾಡಿದ ಆರೋಪ ಅನ್ವಯಿಸುವುದಿಲ್ಲ ಎಂಬ ಕಂಪನಿಯ ಸಮರ್ಥನೆಯನ್ನು ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ತಳ್ಳಿಹಾಕಿದೆ.
ಸಂಸ್ಥೆ ಒಂದು ಬಿಸ್ಕೇಟ್ ಪ್ಯಾಕ್ ನಲ್ಲಿ 16 ಬಿಸ್ಕೆಟ್‌ಗಳಿರಲಿದೆ ಎಂದು ಮುದ್ರಿಸಿ ಪ್ರಚಾರ ಮಾಡಿತ್ತು ಆದರೆ ಪೊಟ್ಟಣದಲ್ಲಿ ಕೇವಲ 15 ಬಿಸ್ಕತ್‌ಗಳು ಮಾತ್ರ ಇದ್ದವು ಎಂದು ದೂರುದಾರ ಚೆನ್ನೈನ ಪಿ ದಿಲ್ಲಿಬಾಬು ಆರೋಪಿಸಿದ್ದರು