ಬೆಂಗಳೂರು: ಟೈಮ್ ನಿಯತಕಾಲಿಕ ಬಿಡುಗಡೆ ಮಾಡಿದ ವಿಶ್ವದ 100 ಅತ್ಯುತ್ತಮ ಕಂಪನಿಗಳು 2023ರ ಪಟ್ಟಿಯಲ್ಲಿ ಭಾರತದ ಏಕೈಕ ಕಂಪನಿ ಇನ್ಫೋಸಿಸ್ ಸ್ಥಾನ ಪಡೆದಿದೆ.
ಬೆಂಗಳೂರು ಮೂಲದ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ 88.38 ಅಂಕಗಳೊಂದಿಗೆ ಪಟ್ಟಿಯಲ್ಲಿ 64ನೇ ಸ್ಥಾನದಲ್ಲಿದೆ.
"ಟೈಮ್ ವರ್ಲ್ಡ್ಸ್ ಬೆಸ್ಟ್ ಕಂಪನಿಗಳು 2023 ಪಟ್ಟಿಯಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ. ನಾವು ಟಾಪ್ 3 ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಗಳಲ್ಲಿ ಒಬ್ಬರಾಗಿದ್ದೇವೆ ಮತ್ತು ಟಾಪ್ 100 ವಿಶ್ವದ ಕಂಪನಿಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕಂಪನಿ ಆಗಿದ್ದೇವೆ” ಎಂದು ಇನ್ಫೋಸಿಸ್ ಟ್ವೀಟ್ ಮಾಡಿದೆ.
ಮೈಕ್ರೋಸಾಫ್ಟ್ ಸಂಸ್ಥೆ 96.46 ಅಂಕಗಳೊಂದಿಗೆ ವಿಶ್ವದ ಅತ್ಯುತ್ತಮ ಸಂಸ್ಥೆ ಎಂದು ಪರಿಗಣಿತವಾಗಿದೆ. ಟೈಮ್ ಮ್ಯಾಗಜೀನ್ ಮತ್ತು ಸ್ಟಾಟಿಶಿಯಾ ಸಂಸ್ಥೆಗಳು ಸೇರಿ ವಿಶ್ವದ ಒಟ್ಟು 750 ಬೆಸ್ಟ್ ಕಂಪನಿಗಳ ಪಟ್ಟಿ ತಯಾರಿಸಿವೆ. ಇದರಲ್ಲಿ ಮೊದಲ ನಾಲ್ಕು ಕಂಪನಿಗಳು ಅಮೆರಿಕದ ಟೆಕ್ ದೈತ್ಯ ಸಂಸ್ಥೆಗಳೇ ಆಗಿವೆ.
ಮೈಕ್ರೋಸಾಫ್ಟ್, ಆ್ಯಪಲ್, ಆಲ್ಫಬೆಟ್ (ಗೂಗಲ್) ಮತ್ತು ಮೆಟಾ ಪ್ಲಾಟ್ಫಾರ್ಮ್ಸ್(ಫೇಸ್ಬುಕ್) ಕಂಪನಿಗಳು ಪಟ್ಟಿಯಲ್ಲಿ ಟಾಪ್-4 ಸ್ಥಾನ ಪಡೆದಿವೆ.
ಉದ್ಯೋಗಿ ಸಂತುಷ್ಟಿ, ಆದಾಯ ಹೆಚ್ಚಳ, ಸುಸ್ಥಿರತೆ, ಪರಿಸರ, ಸಾಮಾಜಿಕ ಮತ್ತು ಕಾರ್ಪೊರೇಟ್ ಕಳಕಳಿಯ ಆಡಳಿತ(ಇಎಸ್ಜಿ), ಈ ನಾಲ್ಕು ಅಂಶಗಳನ್ನು ಆಧರಿಸಿ ಟೈಮ್ ಮ್ಯಾಗಜೀನ್ ಈ ಪಟ್ಟಿಯನ್ನು ಸಿದ್ಧಪಡಿಸಿದೆ.
Advertisement