2023-24: ಭಾರತದಲ್ಲಿ iPhone ಉತ್ಪಾದನೆ ಮತ್ತಷ್ಟು ಹೆಚ್ಚಳ; ಚೀನಾ ದೂರವಿಡಲು ಯುಎಸ್ ತಂತ್ರ!

ದೇಶೀಯ ಮೊಬೈಲ್ ತಯಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ ಅಮೇರಿಕಾದ ಟೆಕ್ ದೈತ್ಯ ಸಂಸ್ಥೆ ಆಪಲ್ 2023-24ನೇ ಸಾಲಿನಲ್ಲಿ ತನ್ನ ಶೇ.14 ರಷ್ಟು ಮೊಬೈಲ್ ಫೋನ್ ಗಳನ್ನು ಭಾರತದಲ್ಲಿ ಜೋಡಣೆ ಮಾಡಿದೆ.
ಆಪಲ್ ಐಫೋನ್
ಆಪಲ್ ಐಫೋನ್

ನವದೆಹಲಿ: ದೇಶೀಯ ಮೊಬೈಲ್ ತಯಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ ಅಮೇರಿಕಾದ ಟೆಕ್ ದೈತ್ಯ ಸಂಸ್ಥೆ ಆಪಲ್ 2023-24ನೇ ಸಾಲಿನಲ್ಲಿ ತನ್ನ ಶೇ.14 ರಷ್ಟು ಮೊಬೈಲ್ ಫೋನ್ ಗಳನ್ನು ಭಾರತದಲ್ಲಿ ಜೋಡಣೆ ಮಾಡಿದೆ.

14 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಮೊಬೈಲ್ ಗಳ ಜೋಡಣೆ 2023-24 ರಲ್ಲಿ ಭಾರತದಲ್ಲಿ ನಡೆದಿದ್ದು, ಇದು ಆಪಲ್ ನ ಜಾಗತಿಕ ಐಫೋನ್ ಉತ್ಪಾದನೆಯ ಶೇ.14ರಷ್ಟಾಗಿದೆ. ಅಂದರೆ ಈಗ ಆಪಲ್ ನ ಪ್ರತಿ 7 ಮೊಬೈಲ್ ಗಳಲ್ಲಿ ಒಂದನ್ನು ಭಾರತದಲ್ಲಿ ತಯರಿಸಲಾಗುತ್ತಿದೆ.

ಅಮೇರಿಕಾ-ಚೀನಾ ನಡುವಿನ ಜಿಯೋಪೊಲಿಟಿಕಲ್ ಚೀನಾದಿಂದ ತನ್ನ ಉತ್ಪಾದನಾ ನೆಲೆಗಳನ್ನು ಬೇರೆಡೆಗೆ ವರ್ಗಾವಣೆ ಮಾಡುವುದರೆಡೆಗಿನ ಸಂಸ್ಥೆಯ ಕಾರ್ಯತಂತ್ರವನ್ನು ಈ ಬೆಳವಣಿಗೆ ತೋರುತ್ತಿದೆ. 2025 ರ ವೇಳೆಗೆ ಆಪಲ್ ಸಂಸ್ಥೆ ತನ್ನ ಒಟ್ಟು ಐಫೋನ್ ಉತ್ಪಾದನೆಯ ಶೇ.25ನ್ನು ಭಾರತದಲ್ಲಿ ಪ್ರಾರಂಭಿಸಲಿದೆ ಎಂದು ಕಳೆದ ವರ್ಷ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಉಲ್ಲೇಖಿಸಿದ್ದರು.

ಆಪಲ್ ಐಫೋನ್
ಆಪಲ್ ಭದ್ರತಾ ಎಚ್ಚರಿಕೆ ಕುರಿತು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದ ಮಹುವಾ; ರಕ್ಷಣೆ ನೀಡುವಂತೆ ಮನವಿ

ಆಪಲ್ ಕಂಪನಿ 2017 ರಲ್ಲಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು ಮತ್ತು ನಂತರ ಉತ್ಪಾದನೆಯನ್ನು ಹೆಚ್ಚಿಸಿದೆ. ಪ್ರಸ್ತುತ, ಆಪಲ್ ದೇಶದಲ್ಲಿ ಲೆಗಸಿ 12 ರಿಂದ ತನ್ನ ಇತ್ತೀಚಿನ iPhone 15 ವರೆಗೆ ಐಫೋನ್‌ಗಳನ್ನು ಜೋಡಣೆ ಮಾಡುತ್ತಿದೆ, ಆದರೆ ಹೆಚ್ಚಿನ-ಸ್ಪೆಕ್ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳನ್ನು ಜೋಡಣೆ/ ತಯಾರಿ ಮಾಡುತ್ತಿಲ್ಲ.

ಭಾರತದಲ್ಲಿ, ಐಫೋನ್ ನ್ನು ಫಾಕ್ಸ್‌ಕಾನ್, ಪೆಗಾಟ್ರಾನ್ ಕಾರ್ಪ್ ಮತ್ತು ಟಾಟಾ ಗ್ರೂಪ್ (ಹಿಂದೆ ವಿಸ್ಟ್ರಾನ್ ಕಾರ್ಪೊರೇಷನ್) ತಯಾರಿಸುತ್ತಿದ್ದಾರೆ. ವರದಿಯ ಪ್ರಕಾರ, ಫಾಕ್ಸ್‌ಕಾನ್ ಅತಿದೊಡ್ಡ ತಯಾರಕ ಸಂಸ್ಥೆಯಾಗಿದ್ದು ಇದು ಸುಮಾರು 67% ರಷ್ಟನ್ನು ಜೋಡಿಸುತ್ತದೆ, ಆದರೆ ಪೆಗಾಟ್ರಾನ್ ಕಾರ್ಪೊರೇಶನ್ ಭಾರತದಲ್ಲಿ ನಿರ್ಮಿತ ಐಫೋನ್‌ಗಳಲ್ಲಿ ಸುಮಾರು 17% ನ್ನು ತಯಾರಿಸುತ್ತದೆ.

ಆಪಲ್ ಐಫೋನ್
TATA ತೆಕ್ಕೆಗೆ ವಿಸ್ಟ್ರಾನ್: ಟಾಟಾ ಗ್ರೂಪ್ ಈಗ ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಕ

ಐಫೋನ್ ಉತ್ಪಾದನೆಯ ಏರಿಕೆ ಆಪಲ್ ಭಾರತದಿಂದ ರಫ್ತುಗಳನ್ನು ಹೆಚ್ಚಿಸುತ್ತದೆ. ಇಂಡಿಯನ್ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಪ್ರಕಾರ, ಭಾರತದ ಮೊಬೈಲ್ ಫೋನ್ ರಫ್ತು ಈ ಹಣಕಾಸು ವರ್ಷದ ಕೊನೆಯಲ್ಲಿ 1.2 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ. ಈಗ, ಮೊಬೈಲ್ ಫೋನ್‌ಗಳು ಭಾರತದ ಐದನೇ ಅತಿದೊಡ್ಡ ರಫ್ತು ಸರಕುಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com