Gold rate today: ಚಿನ್ನದ ಬೆಲೆ ಮತ್ತೆ ಗಗನಕ್ಕೆ, ಬೆಳ್ಳಿ ಇಳಿಕೆ; 73 ಸಾವಿರ ಗಡಿ ದಾಟಿದ ಹಳದಿ ಲೋಹ!

ಯುಗಾದಿ ಹಬ್ಬದ ಬಳಿಕ ಚಿನ್ನದ ದರ ಏರಿಕೆ ಕ್ರಮೇಣ ಮುಂದುವರೆದಿದ್ದು, ಶುಕ್ರವಾರವೂ ಕೂಡ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಚಿನ್ನ ಮತ್ತೆ ಗಗನಕ್ಕೆ
ಚಿನ್ನ ಮತ್ತೆ ಗಗನಕ್ಕೆ

ಮುಂಬೈ: ಯುಗಾದಿ ಹಬ್ಬದ ಬಳಿಕ ಚಿನ್ನದ ದರ ಏರಿಕೆ ಕ್ರಮೇಣ ಮುಂದುವರೆದಿದ್ದು, ಶುಕ್ರವಾರವೂ ಕೂಡ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಹೌದು.. ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಶುಕ್ರವಾರ ಕೂಡ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ದರ 73 ಸಾವಿರ ರೂ ಗಡಿ ದಾಟಿದೆ.

ಚಿನ್ನ ಮತ್ತೆ ಗಗನಕ್ಕೆ
Gold rate today: ಚಿನ್ನ-ಬೆಳ್ಳಿ ದರದಲ್ಲಿ ಬುಧವಾರವೂ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಏಷ್ಟು? ಇಲ್ಲಿದೆ ಮಾಹಿತಿ!

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಕಳೆದ ಭಾನುವಾರ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಆದರೆ ಸೋಮವಾರದಿಂದ ಹಳದಿ ಲೋಹದ ಬೆಲೆಯಲ್ಲಿ ಕ್ರಮೇಣ ಏರಿಕೆ ಕಂಡು ಬರುತ್ತಿದೆ.

ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 22 ಕ್ಯಾರಟ್‌ ಚಿನ್ನದ ದರದಲ್ಲಿ ಬರೊಬ್ಬರಿ 100 ರೂ ಏರಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 109 ರೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನ 6,720ರೂ ಇದ್ದು, 24 ಕ್ಯಾರಟ್ ಚಿನ್ನದರ 7,331 ರೂಗೆ ಏರಿಕೆಯಾಗಿದೆ.

ಚಿನ್ನದ ದರ
ಚಿನ್ನದ ದರ

ಬೆಳ್ಳಿ ದರ ಇಳಿಕೆ

ಅತ್ತ ಚಿನ್ನ ಗಗನಮುಖಿಯಾಗಿದ್ದರೂ ಬೆಳ್ಳಿ ದರಗಳು ಮಾತ್ರ ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಯ (Silver rate today) ಬೆಲೆಯಲ್ಲಿ 25ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರ 84.25ನಷ್ಟಿದೆ.

ಬೆಳ್ಳಿ ದರ ಇಳಿಕೆ
ಬೆಳ್ಳಿ ದರ ಇಳಿಕೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com