ಇರಾನ್-ಇಸ್ರೇಲ್ ಸಂಘರ್ಷ: ಟೆಲ್ ಅವೀವ್ ಗೆ ತಾತ್ಕಾಲಿಕವಾಗಿ ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ!

ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೆಲ್ ಅವೀವ್‌ಗೆ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಏರ್ ಇಂಡಿಯಾ ಕಂಪನಿ ಭಾನುವಾರ ನಿರ್ಧರಿಸಿದೆ.
ಏರ್ ಇಂಡಿಯಾ ವಿಮಾನದ ಸಾಂದರ್ಭಿಕ ಚಿತ್ರ
ಏರ್ ಇಂಡಿಯಾ ವಿಮಾನದ ಸಾಂದರ್ಭಿಕ ಚಿತ್ರ

ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೆಲ್ ಅವೀವ್‌ಗೆ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಏರ್ ಇಂಡಿಯಾ ಕಂಪನಿ ಭಾನುವಾರ ನಿರ್ಧರಿಸಿದೆ.

ದೆಹಲಿ ಮತ್ತು ಟೆಲ್ ಅವೀವ್ ನಡುವಿನ ನೇರ ವಿಮಾನ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ ಇಂಡಿಯಾ ವಿಮಾನದ ಸಾಂದರ್ಭಿಕ ಚಿತ್ರ
ಇಸ್ರೇಲ್ ಪ್ರತೀಕಾರಕ್ಕೆ ಮುಂದಾದರೆ 'ಬಲವಾದ ಪ್ರತಿಕ್ರಿಯೆ' ಇರಾನ್ ಎಚ್ಚರಿಕೆ; ಪಾಶ್ಚಿಮಾತ್ಯ ರಾಯಭಾರಿಗಳಿಗೆ ಸಮನ್ಸ್

ದೆಹಲಿ ಮತ್ತು ಇಸ್ರೇಲಿನ ಟೆಲ್ ಅವೀವ್ ನಗರದ ನಡುವೆ ವಾರಕ್ಕೆ ನಾಲ್ಕು ಏರ್ ಇಂಡಿಯಾ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಟಾಟಾ ಸಮೂಹ-ಮಾಲೀಕತ್ವದ ವಿಮಾನಯಾನ ಕಂಪನಿ ಸುಮಾರು ಐದು ತಿಂಗಳ ಅಂತರದ ನಂತರ ಮಾರ್ಚ್ 3 ರಂದು ಟೆಲ್ ಅವಿವ್‌ಗೆ ಸೇವೆಗಳನ್ನು ಮರುಪ್ರಾರಂಭಿಸಿತು. ಇಸ್ರೇಲಿ ನಗರದ ಮೇಲೆ ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 7, 2023 ರಿಂದ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಏರ್ ಇಂಡಿಯಾ ಸ್ಥಗಿತಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com