ಇಸ್ರೇಲ್ ಪ್ರತೀಕಾರಕ್ಕೆ ಮುಂದಾದರೆ 'ಬಲವಾದ ಪ್ರತಿಕ್ರಿಯೆ'- ಇರಾನ್ ಎಚ್ಚರಿಕೆ; ಪಾಶ್ಚಿಮಾತ್ಯ ರಾಯಭಾರಿಗಳಿಗೆ ಸಮನ್ಸ್

ವಿಶ್ವ ನಾಯಕರು ಸಂಯಮ ಕಾಯ್ದುಕೊಳ್ಳಲು ಒತ್ತಾಯಿಸುತ್ತಿರುವಂತೆಯೇ ತನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಇಸ್ರೇಲ್ ಯಾವುದೇ ಪ್ರತೀಕಾರಕ್ಕೆ ಮುಂದಾದರೆ ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಪ್ರತಿಭಟನಾಕಾರರು
ಇರಾನ್ ಪ್ರತಿಭಟನಾಕಾರರು

ಜೆರುಸಲೇಂ: ವಿಶ್ವ ನಾಯಕರು ಸಂಯಮ ಕಾಯ್ದುಕೊಳ್ಳಲು ಒತ್ತಾಯಿಸುತ್ತಿರುವಂತೆಯೇ ತನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಇಸ್ರೇಲ್ ಯಾವುದೇ ಪ್ರತೀಕಾರಕ್ಕೆ ಮುಂದಾದರೆ ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲಿ ಪ್ರದೇಶದ ಮೇಲೆ ಇರಾನ್ ತನ್ನ ಮೊಟ್ಟಮೊದಲ ನೇರ ದಾಳಿಯನ್ನು ಪ್ರಾರಂಭಿದೆ. ಇದು ಪ್ರಾದೇಶಿಕ ವೈರಿಗಳ ನಡುವಿನ ದೀರ್ಘಾವಧಿಯ ಶೀತಲ ಸಮರ ಈಗ ನೇರ ಘರ್ಷಣೆಗೆ ಕಾರಣವಾಗಿದ್ದು, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿಗಳ ನಡುವಿನ ಹೋರಾಟವು ವ್ಯಾಪಕವಾದ ಸಂಘರ್ಷದ ಭಯವನ್ನು ಹುಟ್ಟುಹಾಕಿದೆ.

ಡಮಾಸ್ಕಸ್‌ನಲ್ಲಿರುವ ಇರಾನ್‌ನ ಕಾನ್ಸುಲೇಟ್ ಕಟ್ಟಡದ ಮೇಲೆ ಏಪ್ರಿಲ್ 1 ರಂದು ನಡೆದ ಮಾರಣಾಂತಿಕ ಮೈಮಾನಿಕ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಇರಾನ್ ಪದೇ ಪದೇ ಬೆದರಿಕೆ ಹಾಕುತಿತ್ತು. ಇತ್ತೀಚಿಗೆ ಅಮೆರಿಕ ಕೂಡಾ ಎಚ್ಚರಿಕೆ ನೀಡಿತ್ತು.

ಇರಾನ್ ಪ್ರತಿಭಟನಾಕಾರರು
ಸಿರಿಯಾ ದಾಳಿಗೆ ಪ್ರತೀಕಾರ: ಇಸ್ರೇಲ್​ ಮೇಲೆ ಡ್ರೋಣ್​, ಕ್ಷಿಪಣಿ ಮಳೆಗೆರೆದ ಇರಾನ್, ದೂರ ಇರುವಂತೆ ಅಮೆರಿಕಾಗೆ ಎಚ್ಚರಿಕೆ!

ಶನಿವಾರ ತಡರಾತ್ರಿ ಇರಾನ್ ಇಸ್ರೇಲ್ ಕಡೆಗೆ 300 ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು ಕ್ಷಿಪಣಿ ದಾಳಿ ನಡೆಸಿರುವುದರಿಂದ 12 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ಸೇನೆ ತಿಳಿಸಿದೆ. ಆದರೆ ಯುನೈಟೆಡ್ ಸ್ಟೇಟ್ಸ್, ಜೋರ್ಡಾನ್ ಮತ್ತು ಇತರ ಮಿತ್ರರಾಷ್ಟ್ರಗಳ ಸಹಾಯದಿಂದ ಇಸ್ರೇಲ್ ತಲುಪುವ ಮೊದಲೇ ಬಹುತೇಕ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ತಡೆಹಿಡಿಯಲಾಗಿದ್ದು, ಇರಾನ್ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಘೋಷಿಸಿದ್ದಾರೆ.

ಇಸ್ರೇಲ್ ತಲುಪುವ ಮೊದಲೇ 170 ಡ್ರೋನ್‌ಗಳು ಮತ್ತು 30 ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಆದರೆ 110 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಕೆಲವು ಹಾದುಹೋದವು ಎಂದು ಇಸ್ರೇಲಿ ಸೇನೆ ಹೇಳಿದೆ. ದಕ್ಷಿಣ ಇಸ್ರೇಲಿ ಪಟ್ಟಣವಾದ ಅರಾದ್ ಬಳಿ ಗಾಯಗೊಂಡಿರುವ 12 ವರ್ಷದ ಬಾಲಕಿ ತೀವ್ರ ನಿಗಾವಣೆಯಲ್ಲಿರುವುದಾಗಿ ವೈದ್ಯಕೀಯ ಕೇಂದ್ರವು ತಿಳಿಸಿದೆ.

ಇರಾನ್ ಪ್ರತಿಭಟನಾಕಾರರು
Iran attacks Israel: 'ಇಸ್ರೇಲ್ ರಕ್ಷಣೆಗೆ ಬದ್ಧ'; ಇರಾನ್ ಗೆ ಎಚ್ಚರಿಕೆ ನೀಡಿ G-7 ನಾಯಕರ ಸಭೆ ಕರೆದ ಅಮೆರಿಕ

ಇಸ್ರೇಲ್ ಅಥವಾ ಅದರ ಮಿತ್ರ ರಾಷ್ಟ್ರಗಳು ಅಜಾಗರೂಕ ವರ್ತನೆ ಪ್ರದರ್ಶಿಸಿದರೆ ಅವರು ನಿರ್ಣಾಯಕ ಮತ್ತು ಹೆಚ್ಚು ಬಲವಾದ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ ಎಂದು ಇರಾನ್‌ನ ಅಧ್ಯಕ್ಷ ರೈಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಲವಾರು ದೇಶಗಳು ದಾಳಿಯನ್ನು ಖಂಡಿಸಿವೆ ಮತ್ತು ವಿಶ್ವಸಂಸ್ಥೆ ಭದ್ರತಾ ಸಂಸ್ಥೆ ಭಾನುವಾರದಂದು ತುರ್ತು ಸಭೆಯನ್ನು ನಡೆಸಲಿದೆ.ಹಲವಾರು ದೇಶಗಳು ದಾಳಿಯನ್ನು ಖಂಡಿಸಿದ ನಂತರ, ಇರಾನ್ ವಿದೇಶಾಂಗ ಸಚಿವಾಲಯವು ಫ್ರೆಂಚ್, ಬ್ರಿಟಿಷ್ ಮತ್ತು ಜರ್ಮನ್ ರಾಯಭಾರಿಗಳಿಗೆ ಸಮನ್ಸ್ ನೀಡಿದೆ.

ಈ ಮಧ್ಯೆ ಗಾಜಾದಲ್ಲಿ ಹೋರಾಟ ಮುಂದುವರೆದಿದೆ. ಇಸ್ರೇಲ್‌ ವಿರುದ್ಧ ಹಮಾಸ್‌ನಿಂದ ಅಕ್ಟೋಬರ್ 7 ರಂದು ಅಭೂತಪೂರ್ವ ದಾಳಿಯೊಂದಿಗೆ ಯುದ್ಧವು ಪ್ರಾರಂಭವಾಯಿತು. ಇದರ ಪರಿಣಾಮವಾಗಿ 1,170 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬಹುತೇಕರು ಇಸ್ರೇಲ್ ನಾಗರಿಕರು ಆಗಿದ್ದಾರೆ. ಹಮಾಸ್ ನ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾದಲ್ಲಿ ಕನಿಷ್ಠ 33,729 ಜನರು ಹತ್ಯೆಗೀಡಾಗಿದ್ದಾರೆ. ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com