Iran attacks Israel: ಇಸ್ರೇಲ್ ರಕ್ಷಣೆಗೆ ಬದ್ಧ- ಇರಾನ್ ಗೆ ಅಮೆರಿಕ ಎಚ್ಚರಿಕೆ; G-7 ನಾಯಕರ ಸಭೆಗೆ ಆಗ್ರಹ

ಇಸ್ರೇಲ್ ಮೇಲಿನ ಇರಾನ್ ಡ್ರೋನ್, ಕ್ಷಿಪಣಿ ದಾಳಿಯನ್ನು ಬಲವಾಗಿ ಖಂಡಿಸಿರುವ ಅಮೆರಿಕ ಶತಾಗತಾಯ ಇಸ್ರೇಲ್ ರಕ್ಷಣೆಗೆ ಬದ್ಧ ಎಂದಿರುವ ಅಮೆರಿಕ G-7 ನಾಯಕರ ಸಭೆಗೆ ಆಗ್ರಹಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್: ಇಸ್ರೇಲ್ ಮೇಲಿನ ಇರಾನ್ ಡ್ರೋನ್, ಕ್ಷಿಪಣಿ ದಾಳಿಯನ್ನು ಬಲವಾಗಿ ಖಂಡಿಸಿರುವ ಅಮೆರಿಕ ಶತಾಗತಾಯ ಇಸ್ರೇಲ್ ರಕ್ಷಣೆಗೆ ಬದ್ಧ ಎಂದಿರುವ ಅಮೆರಿಕ G-7 ನಾಯಕರ ಸಭೆಗೆ ಆಗ್ರಹಿಸಿದೆ.

ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಲು ಸನ್ನದ್ಧ ಸ್ಥಿತಿಯಲ್ಲಿರುವಂತೆಯೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಪ್ರತಿಕ್ರಿಯೆ ನೀಡಿ ಇರಾನ್ ಮುಂದುವರೆಯದಂತೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್
ಸಿರಿಯಾ ದಾಳಿಗೆ ಪ್ರತೀಕಾರ: ಇಸ್ರೇಲ್​ ಮೇಲೆ ಡ್ರೋಣ್​, ಕ್ಷಿಪಣಿ ಮಳೆಗೆರೆದ ಇರಾನ್, ದೂರ ಇರುವಂತೆ ಅಮೆರಿಕಾಗೆ ಎಚ್ಚರಿಕೆ!

ನಾಗರಿಕ ಹಕ್ಕುಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಬಳಿಕ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್, 'ದಾಳಿ ಮಾಡಬೇಡಿ ಎಂದು ಇರಾನ್ ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಇಸ್ರೇಲ್ ಅನ್ನು ರಕ್ಷಿಸಲು ಅಮೆರಿಕ ಬದ್ಧವಾಗಿದೆ. ನಾವು ಇಸ್ರೇಲ್ ರಕ್ಷಣೆಗೆ ಬದ್ಧರಾಗಿದ್ದೇವೆ. ನಾವು ಇಸ್ರೇಲ್ ಅನ್ನು ಬೆಂಬಲಿಸುತ್ತೇವೆ. ನಾವು ಇಸ್ರೇಲ್ ಅನ್ನು ರಕ್ಷಿಸಲು ಸಹಾಯ ಮಾಡುತ್ತೇವೆ ಮತ್ತು ಇರಾನ್ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ. ಸುರಕ್ಷಿತ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದರು.

G-7 ನಾಯಕರ ಸಭೆ ಕರೆದ ಅಮೆರಿಕ

ಇದೇ ವೇಳೆ ಇಸ್ರೇಲ್ ಮೇಲಿನ ಇರಾನ್ ದಾಳಿಯನ್ನು ಖಂಡಿಸಿರುವ ಬೈಡನ್ ಜಾಗತಿಕ ಸಂಘಟಿತ ಪ್ರತಿಕ್ರಿಯೆಗಾಗಿ G-7 ನಾಯಕರ ಸಭೆ ಕರೆಯಬೇಕು ಎಂದು ಹೇಳಿದ್ದಾರೆ. ಇರಾನ್ ಉಡಾಯಿಸಿದ 200 ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ತಾನು ಮತ್ತು ತನ್ನ ಮಿತ್ರರಾಷ್ಟ್ರಗಳು ಯಶಸ್ವಿಯಾಗಿ ಹೊಡೆದುರುಳಿಸಿವೆ. ಯೆಮೆನ್, ಸಿರಿಯಾ ಮತ್ತು ಇರಾಕ್‌ನಿಂದ ಕಾರ್ಯನಿರ್ವಹಿಸುತ್ತಿರುವ ಇರಾನ್ ಮತ್ತು ಅದರ ಪ್ರಾಕ್ಸಿಗಳು ಇಸ್ರೇಲ್‌ನಲ್ಲಿನ ಮಿಲಿಟರಿ ಸೌಲಭ್ಯಗಳ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿವೆ. ಈ ದಾಳಿಗಳನ್ನು ನಾನು ಪ್ರಬಲವಾದ ಪದಗಳಲ್ಲಿ ಖಂಡಿಸುತ್ತೇನೆ ಎಂದು ಹೇಳಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್
17 ಭಾರತೀಯ ನಾವಿಕರಿದ್ದ ಇಸ್ರೇಲಿ ಹಡಗನ್ನು ವಶಕ್ಕೆ ಪಡೆದ ಇರಾನ್!

ಕಳೆದ ವಾರವಷ್ಟೇ ಅಮೆರಿಕ ಇಸ್ರೇಲ್ ಮೇಲೆ ಇರಾನ್ ಸಂಭಾವ್ಯ ದಾಳಿ ಕುರಿತು ಎಚ್ಚರಿಕೆ ನೀಡಿತ್ತು. ಅಲ್ಲದೆ ಇಸ್ರೇಲ್ ಗೆ ನೆರವಿನಾರ್ಥವಾಗಿ ಯುದ್ಧ ವಿಮಾನ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವಿಧ್ವಂಸಕಗಳನ್ನು ಸ್ಥಳಾಂತರಿಸಿತ್ತು. ಈ ಬಗ್ಗೆಯೂ ಮಾತನಾಡಿದ ಜೋ ಬೈಡನ್, ಈ ನಿಯೋಜನೆಗಳು ಮತ್ತು ನಮ್ಮ ಸೇವಾ ಸದಸ್ಯರ ಅಸಾಧಾರಣ ಕೌಶಲ್ಯಕ್ಕೆ ಧನ್ಯವಾದಗಳು, ಒಳಬರುವ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಲು ನಾವು ಇಸ್ರೇಲ್‌ಗೆ ಸಹಾಯ ಮಾಡಿದ್ದೇವೆ ಎಂದು ಅವರು ಹೇಳಿದರು. ಅಲ್ಲದೆ ನಾನು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ. ಇಸ್ರೇಲ್ ನ ಭದ್ರತೆಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com