‘ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ.. 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ': Gita Gopinath

ಭಾರತದ ಆರ್ಥಿಕತೆಯ (Indian Economy ) ಬೆಳವಣಿಗೆಯೂ ನಿರೀಕ್ಷೆಯನ್ನೂ ಮೀರುತ್ತಿದ್ದು, 2027 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆಯಿದೆ. ಇದು ವಿವಿಧ ಅಂಶಗಳಿಂದ ಪ್ರೇರಿತವಾಗಿದ್ದು, ಖಾಸಗಿ ಉದ್ಯಮಗಳು ಚೇತರಿಸಿಕೊಳ್ಳುತ್ತಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
Gita Gopinath
ಗೀತಾ ಗೋಪಿನಾಥ್
Updated on

ವಾಷಿಂಗ್ಟನ್: ಭಾರತದ ಆರ್ಥಿಕ ಪ್ರಗತಿದರ ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದ್ದು, 2027ರ ವೇಳೆಗೇ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ.ಗೀತಾ ಗೋಪಿನಾಥ್ (Gita Gopinath) ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆರ್ಥಿಕತೆಯ (Indian Economy ) ಬೆಳವಣಿಗೆಯೂ ನಿರೀಕ್ಷೆಯನ್ನೂ ಮೀರುತ್ತಿದ್ದು, 2027 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆಯಿದೆ. ಇದು ವಿವಿಧ ಅಂಶಗಳಿಂದ ಪ್ರೇರಿತವಾಗಿದ್ದು, ಖಾಸಗಿ ಉದ್ಯಮಗಳು ಚೇತರಿಸಿಕೊಳ್ಳುತ್ತಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಐಎಂಎಫ್ ನ ಗೀತಾ ಗೋಪಿನಾಥ್ ಹೇಳಿದ್ದಾರೆ.

Gita Gopinath
ದಾಖಲೆ ಬರೆದ Sensex; 2 ವಾರಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ಏರಿಕೆ, ಯಾರಿಗೆ ಲಾಭ-ಯಾರಿಗೆ ನಷ್ಟ?

ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಗೀತಾ ಗೋಪಿನಾಥ್, 'ಭಾರತದ ಆರ್ಥಿಕ ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿದ್ದು, ಭಾರತದ ಬೆಳವಣಿಗೆಯು ಕಳೆದ ಹಣಕಾಸು ವರ್ಷದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಸಾಗಿದೆ. ಅದೇ ರೀತಿಯ ಪರಿಣಾಮಗಳು ಮುಂದಿನ ಹಲವು ವರ್ಷಗಳವರೆಗೆ ಸಾಗಲಿದೆ. ಈ ವರ್ಷದ ಮುನ್ಸೂಚನೆಯೂ ಪರಿಣಾಮ ಬೀರುತ್ತಿವೆ. ಮತ್ತೊಂದು ಅಂಶವೆಂದರೆ ಖಾಸಗಿ ಉದ್ಯಮಗಳು ಚೇತರಿಸಿಕೊಳ್ಳುತ್ತಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಎಫ್ಎಂಸಿಜಿ ಮತ್ತು ದ್ವಿಚಕ್ರ ವಾಹನ ಮಾರಾಟದ ಹೊಸ ಅಂಕಿ ಅಂಶಗಳು ಮತ್ತು ಅನುಕೂಲಕರವಾಗಿ ಮಾನ್ಸೂನ್ ಮಳೆ ಸುರಿದಿರುವ ಆಧಾರದ ಮೇಲೆ, 2024-25ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7% ಕ್ಕೆ ಐಎಂಎಫ್ ನಿರೀಕ್ಷಿಸಿದೆ. ಇದು ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರ ನೀಡಿದ 6.5% ಅಂದಾಜಿಗಿಂತ ಹೆಚ್ಚಿನ ಅಂಕಿ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ.

ಅಂತೆಯೇ ಕಳೆದ ವರ್ಷ ಖಾಸಗಿ ಕ್ಷೇತ್ರದ ಬೆಳವಣಿಗೆಯನ್ನು ಗಮಿನಿಸಿದರೆ, ಸುಮಾರು 4% ರಷ್ಟಿತ್ತು. ಗ್ರಾಮೀಣ ಬಳಕೆಯ ಚೇತರಿಕೆಯಿಂದ ಅದು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ನೀವು ದ್ವಿಚಕ್ರ ವಾಹನ ಮಾರಾಟ ಪ್ರಗತಿ ನೋಡಿದರೆ ಆಟೋಮೊಬೈಲ್ ಕ್ಷೇತ್ರವೂ ಉತ್ತಮವಾಗಿದೆ. ಉತ್ತಮ ಮಾನ್ಸೂನ್ ಮಳೆ ಬಿದ್ದರೆ ಉತ್ತಮ ಫಸಲನ್ನು ನೋಡಬಹುದು ಎಂದು ನಾವು ನಿರೀಕ್ಷಿಸುತ್ತೇವೆ.

ಕೃಷಿ ಆದಾಯವು ಹೆಚ್ಚುತ್ತಿರುವುದರಿಂದ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚೇತರಿಕೆಯನ್ನು ನೋಡಬಹುದು. 2024-25ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7% ಕ್ಕೆ ಹೆಚ್ಚಿಸಲಾಗಿದೆ ಎಂದು ಗೀತಾ ಗೋಪಿನಾಥ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com