ದಾಖಲೆ ಬರೆದ Sensex; 2 ವಾರಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ಏರಿಕೆ, ಯಾರಿಗೆ ಲಾಭ-ಯಾರಿಗೆ ನಷ್ಟ?

ಶುಕ್ರವಾರ ಭಾರತೀಯ ಷೇರು ಸೂಚ್ಯಂಕ ದಿನದ ವಹಿವಾಟಿನ ಅಂತ್ಯದ ವೇಳೆಗೆ 1,330 ಅಂಕಗಳ ಏರಿಕೆ ಕಂಡಿದ್ದು, ಆ ಮೂಲಕ ತನ್ನ ಗಳಿಕೆಯನ್ನು ಸೆನ್ಸೆಕ್ಸ್ 80,416.57ಕ್ಕೆ ಏರಿಸಿಕೊಂಡಿದ್ದು, ಇದು ಸೆನ್ಸೆಕ್ಸ್ ನ 2 ವಾರಗಳ ಹಿಂದಿನ ಗರಿಷ್ಠ ಮಟ್ಟ ಎಂದು ಹೇಳಲಾಗಿದೆ.
Indian Stock Market
ಭಾರತೀಯ ಷೇರುಮಾರುಕಟ್ಟೆ
Updated on

ಮುಂಬೈ: ಹಿಂಡನ್ ಬರ್ಗ್ ವರದಿ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ತಲ್ಲಣವಾಗುತ್ತದೆ ಎಂಬ ಊಹಾಪೋಹಗಳು ಇದೀಗ ತಲೆಕೆಳಗಾಗಿದ್ದು, ಸೆನ್ಸೆಕ್ಸ್ ಶುಕ್ರವಾರ ದಾಖಲೆಯ ಅಂಶ ಏರಿಕೆ ಕಾಣುವ ಮೂಲಕ 2 ವಾರಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಹೌದು.. ಶುಕ್ರವಾರ ಭಾರತೀಯ ಷೇರು ಸೂಚ್ಯಂಕ ದಿನದ ವಹಿವಾಟಿನ ಅಂತ್ಯದ ವೇಳೆಗೆ 1,330 ಅಂಕಗಳ ಏರಿಕೆ ಕಂಡಿದ್ದು, ಆ ಮೂಲಕ ತನ್ನ ಗಳಿಕೆಯನ್ನು ಸೆನ್ಸೆಕ್ಸ್ 80,416.57ಕ್ಕೆ ಏರಿಸಿಕೊಂಡಿದ್ದು, ಇದು ಸೆನ್ಸೆಕ್ಸ್ ನ 2 ವಾರಗಳ ಹಿಂದಿನ ಗರಿಷ್ಠ ಮಟ್ಟ ಎಂದು ಹೇಳಲಾಗಿದೆ.

ಅಂತೆಯೇ ನಿಫ್ಟಿ ಕೂಡ ಬರೊಬ್ಬರಿ 397 ಅಂಕಗಳ ಏರಿಕೆ ಕಾಣುವ ಮೂಲಕ ತನ್ನ ಗಳಿಕೆಯನ್ನು 24,500 ಅಂಶಗಳಿಗೆ ಏರಿಕೆ ಮಾಡಿಕೊಂಡಿದೆ.

Indian Stock Market
ಷೇರುಮಾರುಕಟ್ಟೆ ಕುಸಿದಾಗ ಹೂಡಿಕೆದಾರನು ಏನು ಮಾಡಬೇಕು? (ಹಣಕ್ಲಾಸು)

ಅಮೆರಿಕದಲ್ಲಿ ಹಬ್ಬಿದ್ದ ಆರ್ಥಿಕ ಹಿಂಜರಿತದ ಆತಂಕ ಕ್ರಮೇಣ ತಗ್ಗಿದ್ದು ಇದು ಷೇರುಮಾರುಕಟ್ಟೆ ಮೇಲೆ ಸಕಾರಾತ್ಮಕ ವಹಿವಾಟಿಗೆ ಕಾರಣ ಎನ್ನಲಾಗಿದೆ. ಅಂತೆಯೇ ಭಾರತದಲ್ಲಿ ಐಟಿ ವಲಯದ ಷೇರುಗಳ ಖರೀದಿ ಭರಾಟೆ ಜೋರಾಗಿರುವುದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಪಟ್ಟಿದ್ದಾರೆ.

7 ಲಕ್ಷ ಕೋಟಿ ಲಾಭ

ಬಿಎಸ್ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಶೇ 2ರಷ್ಟು ಏರಿಕೆಯಾಗಿದ್ದರಿಂದ, ಮಾರುಕಟ್ಟೆಯಲ್ಲಿನ ಲಾಭಾಂಶವು ಹೆಚ್ಚಾಗಿದೆ. ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು 444.3 ಲಕ್ಷ ಕೋಟಿ ರೂಪಾಯಿಗಳಿಂದ ಸುಮಾರು 451.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು ಒಂದೇ ಸೆಷನ್‌ನಲ್ಲಿ 7 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಸುವಂತೆ ಮಾಡಿದೆ.

ಯಾರಿಗೆ ಲಾಭ-ಯಾರಿಗೆ ನಷ್ಟ?

ಟೆಕ್ ಮಹೀಂದ್ರಾ, ಕೋಲ್‌ಗೆಟ್ ಪಾಮೋಲಿವ್ (ಇಂಡಿಯಾ), ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ, ಇನ್ಫೋ ಎಡ್ಜ್ (ಇಂಡಿಯಾ) ಮತ್ತು ಟ್ರೆಂಟ್ ಸೇರಿದಂತೆ 200ಕ್ಕೂ ಹೆಚ್ಚು ಕಂಪನಿಗಳ ಷೇರುಗಳು ಬಿಎಸ್ಇಯಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ.‌ ಈ ಕಂಪನಿಗಳು ಅತ್ಯಧಿಕ ಲಾಭ ಗಳಿಸಿದ ಷೇರುಗಳಾಗಿವೆ.

ಅಂತೆಯೇ ಸನ್ ಫಾರ್ಮಾ ಸಂಸ್ಥೆಯ ಷೇರು ಮೌಲ್ಯದಲ್ಲಿ ಅಲ್ಪ ಪ್ರಮಾಣದ ಕುಸಿತವಾಗಿದ್ದು, ಸಂಸ್ಥೆಯ ಷೇರು ಮೌಲ್ಯ 0.03 ರಷ್ಟು ಕುಸಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com