ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್: 'ವಿವಾದ್ ಸೆ ವಿಶ್ವಾಸ್' ಅಂತಿಮ ದಿನಾಂಕ ವಿಸ್ತರಿಸಿದ Income Tax Department

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಸೋಮವಾರ ವಿವಾದ್ ಸೇ ವಿಶ್ವಾಸ್ ಯೋಜನೆಯಲ್ಲಿ ಭಾಗವಹಿಸುವ ತೆರಿಗೆದಾರರಿಗೆ ಗಡುವಿನ ವಿಸ್ತರಣೆಯನ್ನು ಪ್ರಕಟಿಸಿದೆ.
CBDT extends due date
ಆದಾಯ ತೆರಿಗೆ ಇಲಾಖೆ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಸೋಮವಾರ ವಿವಾದ್ ಸೇ ವಿಶ್ವಾಸ್ ಯೋಜನೆಯಲ್ಲಿ ಭಾಗವಹಿಸುವ ತೆರಿಗೆದಾರರಿಗೆ ಗಡುವಿನ ವಿಸ್ತರಣೆಯನ್ನು ಪ್ರಕಟಿಸಿದೆ.

ಹೌದು.. ತೆರಿಗೆ ಪಾವತಿ ಮೊತ್ತ ನಿಗದಿಗೆ ಇಂದು ಅಂತಿಮ ದಿನಾಂಕವಾಗಿದ್ದು ತೆರಿಗೆ ಪಾವತಿ ವಿಚಾರವಾಗಿ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆ ದೊಡ್ಡ ರಿಲೀಫ್ ನೀಡಿದೆ. ಅದರಂತೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಸೋಮವಾರ ವಿವಾದ್ ಸೇ ವಿಶ್ವಾಸ್ ಯೋಜನೆಯಲ್ಲಿ ಭಾಗವಹಿಸುವ ತೆರಿಗೆದಾರರಿಗೆ ಗಡುವನ್ನು ಜನವರಿ 31, 2025 ರವರೆಗೆ ವಿಸ್ತರಿಸಿದೆ.

ಆರಂಭದಲ್ಲಿ ಡಿಸೆಂಬರ್ 31, 2024 ಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಹೊಸ ಗಡುವು ಜನವರಿ 31, 2025 ಆಗಿದೆ. ಯೋಜನೆಯಲ್ಲಿನ ಸಂಬಂಧಿತ ಕೋಷ್ಟಕದ ಕಾಲಮ್ (3) ರಲ್ಲಿ ನಿರ್ದಿಷ್ಟಪಡಿಸಿದಂತೆ ಪಾವತಿಸಬೇಕಾದ ಮೊತ್ತವನ್ನು ನಿರ್ಧರಿಸಲು ವಿಸ್ತರಣೆಯು ತೆರಿಗೆದಾರರಿಗೆ ಹೆಚ್ಚುವರಿ ಸಮಯವನ್ನು ಅನುಮತಿಸುತ್ತದೆ ಎಂದು CBDT ಹೇಳಿದೆ.

CBDT extends due date
Middle Class ಜನರಿಗೆ ಸಿಹಿ ಸುದ್ದಿ: 15 ಲಕ್ಷ ರೂ ವರೆಗಿನ ಆದಾಯಕ್ಕೆ ತೆರಿಗೆ ಕಡಿತ ಸಾಧ್ಯತೆ- ವರದಿ

ತಮ್ಮ ಬಜೆಟ್ 2024 ರ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವಾದ್ ಸೇ ವಿಶ್ವಾಸ್ ಯೋಜನೆಯನ್ನು ಘೋಷಿಸಿದ್ದರು, ಇದು ಆದಾಯ ತೆರಿಗೆ ಇಲಾಖೆಯೊಂದಿಗೆ ವಿವಾದಗಳನ್ನು ಪರಿಹರಿಸಲು ತೆರಿಗೆದಾರರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಯೋಜನೆಯು ತೆರಿಗೆದಾರರಿಗೆ ನಿರ್ದಿಷ್ಟ ಶೇಕಡಾವಾರು ಮೊತ್ತದೊಂದಿಗೆ ವಿವಾದಿತ ಮೊತ್ತವನ್ನು ಪಾವತಿಸುವ ಮೂಲಕ ತಮ್ಮ ಬಾಕಿ ಇರುವ ತೆರಿಗೆ ಹೊಣೆಗಾರಿಕೆಗಳನ್ನು ಇತ್ಯರ್ಥಪಡಿಸಲು ಅನುವು ಮಾಡಿಕೊಡುತ್ತದೆ.

ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ, 2024 ರ ವಿಭಾಗ 90ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಕೋಷ್ಟಕದ ಕಾಲಮ್ (3) ರ ಪ್ರಕಾರ ಪಾವತಿಸಬೇಕಾದ ಮೊತ್ತವನ್ನು ನಿರ್ಧರಿಸುವ ದಿನಾಂಕವನ್ನು ಡಿಸೆಂಬರ್ 31, 2024 ರಿಂದ ಜನವರಿ 31, 2025 ರವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.

ಅಂತೆಯೇ, 2024ರ ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ, ನಿಯಮಗಳು ಅಥವಾ ಮಾರ್ಗದರ್ಶನ ಟಿಪ್ಪಣಿಯಲ್ಲಿ ಏನೇ ಇದ್ದರೂ, ಜನವರಿ 3, 2025 ರಂದು ಅಥವಾ ಅದಕ್ಕೂ ಮೊದಲು ಘೋಷಣೆಯನ್ನು ಸಲ್ಲಿಸಿದ ಸಂದರ್ಭಗಳಲ್ಲಿ, ಯೋಜನೆಯ 90 ನೇ ವಿಭಾಗದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಕಾಲಮ್ (3) ರ ಪ್ರಕಾರ ಮತ್ತು ಫೆಬ್ರವರಿ 01, 2025 ರಂದು ಅಥವಾ ನಂತರ ಘೋಷಣೆಯನ್ನು ಸಲ್ಲಿಸಿದ ಸಂದರ್ಭಗಳಲ್ಲಿ, ಪಾವತಿಸಬೇಕಾದ ಮೊತ್ತವನ್ನು ಐಡಿ ಟ್ಯಾಬ್‌ನ ಕಾಲಮ್ (4) ರ ಪ್ರಕಾರ ನಿರ್ಧರಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಈ ಯೋಜನೆಯನ್ನು ಆಯ್ಕೆ ಮಾಡುವ ಮೂಲಕ, ತೆರಿಗೆದಾರರು ತಮ್ಮ ವಿವಾದಗಳನ್ನು ಪರಿಣಾಮಕಾರಿಯಾಗಿ ತೀರ್ಮಾನಿಸಬಹುದು ಮತ್ತು ಹೆಚ್ಚುವರಿ ಪೆನಾಲ್ಟಿಗಳಿಂದ ವಿನಾಯಿತಿ ಪಡೆಯಬಹುದು. ವಿಸ್ತೃತ ಯೋಜನೆಯ ಪ್ರಕಾರ, ಪಾವತಿಯ ದಿನಾಂಕದ ಆಧಾರದ ಮೇಲೆ ಪೆನಾಲ್ಟಿ ಶುಲ್ಕಗಳು ಭಿನ್ನವಾಗಿರುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com