ಬೆಳ್ಳುಳ್ಳಿ ಬೆಲೆ ಗಗನಕ್ಕೆ: ಪೂರೈಕೆಯಲ್ಲಿ ಶೇ. 50 ರಷ್ಟು ಕುಸಿತ, ಪ್ರತಿ ಕೆಜಿ 350 ರೂ.ಗೆ ಏರಿಕೆ!

ಬೆಳ್ಳುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನಲ್ಲಿ ಪೂರೈಕೆ ಶೇ.50 ರಷ್ಟು ಕುಸಿದಿದ್ದು, ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 350 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂ.ಗೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಳ್ಳುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನಲ್ಲಿ ಪೂರೈಕೆ ಶೇ.50 ರಷ್ಟು ಕುಸಿದಿದ್ದು, ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 350 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂ.ಗೆ ಏರಿಕೆಯಾಗಿದೆ.

ಬೆಂಗಳೂರು ಸಗಟು ಬೆಳ್ಳುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ದೀಪಕ್ ಜೆ ಷಾ ಮಾತನಾಡಿ, ‘ಸಾಮಾನ್ಯವಾಗಿ ಬೆಂಗಳೂರಿಗೆ ದಿನಕ್ಕೆ 3,000 ಚೀಲ ಬೆಳ್ಳುಳ್ಳಿ ಬರುತ್ತಿದ್ದು, ಪ್ರತಿಯೊಂದೂ 40 ಕೆಜಿ ತೂಕವಿರುತ್ತದೆ, ಆದರೆ ಕಳೆದ ಕೆಲವು ದಿನಗಳಿಂದ ಪೂರೈಕೆಯಲ್ಲಿ ಶೇ. 50 ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ದರ ಏರಿಕೆಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಬರಗಾಲದ ಕಾರಣ ಪೂರೈಕೆಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತಿದೆ. ಇದು ಇಡೀ ಕರ್ನಾಟಕಕ್ಕೆ ಸಾಕಾಗುವುದಿಲ್ಲ. ಸಾಮಾನ್ಯವಾಗಿ ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಿಂದ ರಾಜ್ಯಕ್ಕೆ ಬೆಳ್ಳುಳ್ಳಿ ಬರುತ್ತಿದೆ. ಆದರೆ ಈಗ ಮಧ್ಯಪ್ರದೇಶದಿಂದ ಮಾತ್ರ ನಮಗೆ ಪೂರೈಕೆಯಾಗುತ್ತಿದೆ. ಆದರೆ ತಿಂಗಳ ಅಂತ್ಯದ ವೇಳೆಗೆ, ಗುಜರಾತ್ ಮತ್ತು ರಾಜಸ್ಥಾನದಿಂದ ಸಾಮಾನ್ಯ ಪೂರೈಕೆ ಪುನರಾರಂಭವಾಗುತ್ತದೆ ಮತ್ತು ದರಗಳು ಸ್ಥಿರಗೊಳ್ಳುವ ನಿರೀಕ್ಷೆಯಿದೆ" ಎಂದು ಶಾ ಹೇಳಿದರು.

ಕಳೆದ ವರ್ಷ ಬೆಳ್ಳುಳ್ಳಿ ಬೆಳೆಗೆ ಸಂಬಂಧಿಸಿದಂತೆ ರೈತರು ಅನಿಶ್ಚಿತತೆಯನ್ನು ಎದುರಿಸಿದ್ದರು ಮತ್ತು ಮುಂಗಾರು ವಿಫಲವಾದ ಕಾರಣ ಕೃಷಿಗಾಗಿ ಸರ್ಕಾರ ಮತ್ತು ಪಂಚಾಯತ್‌ಗಳಿಂದ ಬೋರ್‌ವೆಲ್ ಮತ್ತು ಟ್ಯಾಂಕರ್ ನೀರನ್ನು ಅವಲಂಬಿಸಿರುತ್ತಾರೆ. "ಆದಾಗ್ಯೂ, ಒಂದು ತಿಂಗಳ ಅವಧಿಯಲ್ಲಿ, ಗುಜರಾತ್ ಮತ್ತು ರಾಜಸ್ಥಾನದಿಂದ ಹೊಸ ಸ್ಟಾಕ್ ಕರ್ನಾಟಕಕ್ಕೆ ಆಗಮಿಸುತ್ತದೆ, ಇದರಿಂದಾಗಿ ಮಾರ್ಚ್ ಮಧ್ಯದ ವೇಳೆಗೆ ದರಗಳು ಕಡಿಮೆಯಾಗುತ್ತವೆ ಎಂದು ಎಎಪಿಎಂಸಿ ವ್ಯಾಪಾರಿ ಹೇಳಿದರು. 

ಇದೇ ಮಾತಿಗೆ ಧ್ವನಿಗೂಡಿಸಿದ ಮಡಿವಾಳ ಸಂತೆ ಸಣ್ಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹಮ್ಮದ್ ಪ್ಯಾರೇಜನ್, ಜನವರಿ ಅಂತ್ಯದವರೆಗೆ 1,200 ಕೆಜಿ ಬೆಳ್ಳುಳ್ಳಿ ಪೂರೈಕೆಯಾಗುತ್ತಿದ್ದು, ಈಗ 300 ಕೆಜಿ ಮಾತ್ರ ಪೂರೈಕೆಯಾಗುತ್ತಿದೆ. "ಒಳ್ಳೆಯದು" ಎಂದು ಪರಿಗಣಿಸಲಾದ ಹಳೆಯ ಬೆಳ್ಳುಳ್ಳಿಯ ಬೆಲೆ ಒಂದು ಕೆಜಿಗೆ 400 ರೂ. ಆದರೆ ಹೊಸ ಬೆಳ್ಳುಳ್ಳಿ ಹಸಿ ಮತ್ತು ರುಚಿಯಲ್ಲಿ ವಿಭಿನ್ನವಾಗಿದ್ದು, ಬೆಲೆ 350 ರೂ ಆಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com