2000 ರೂ. ನೋಟು: ಸಾರ್ವಜನಿಕರ ಬಳಿಯೇ ಇದೆ 7,581 ಕೋಟಿ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಕೋಟಿ ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿದೆ.
Rs.2000 note
2000 ರೂ ಮುಖಬೆಲೆಯ ನೋಟುಗಳು online desk

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಕೋಟಿ ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿದೆ.

2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್ ಬಿಐ (RBI) ಹಿಂಪಡೆದಿದ್ದು, ಸಾರ್ವಜನಿಕರ ಕೈಲಿದ್ದ ನೋಟುಗಳ ಪೈಕಿ ಈ ವರೆಗೂ ಶೇ.97.87 ರಷ್ಟು ನೋಟುಗಳು ಮರಳಿ ಆರ್ ಬಿಐ ವ್ಯಾಪ್ತಿಗೆ ಬಂದಿದೆ. 7,581 ಕೋಟಿ ರೂಪಾಯಿ ಮೌಲ್ಯದ ಮುಖಬೆಲೆಯ ನೋಟುಗಳು ಮಾತ್ರವೇ ಸಾರ್ವಜನಿಕರ ಬಳಿ ಇದೆ ಎಂದು ಆರ್ ಬಿಐ ತಿಳಿಸಿದೆ.

Rs.2000 note
ಶೇ.97.82 ರಷ್ಟು 2000 ಮುಖಬೆಲೆ ನೋಟುಗಳು ಮರಳಿ ಬ್ಯಾಂಕ್ ಗಳಿಗೆ ವಾಪಸ್; 7,755 ಕೋಟಿ ರೂ ಮೌಲ್ಯದ ನೋಟು ಇನ್ನೂ ಸಾರ್ವಜನಿಕರ ಬಳಿ!

2023 ರ ಮೇ.19 ರಂದು ಆರ್ ಬಿಐ 2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಹೇಳಿತ್ತು. ಚಲಾವಣೆಯಲ್ಲಿರುವ 2000 ರೂ.ಗಳ ನೋಟುಗಳ ಒಟ್ಟು ಮೌಲ್ಯವು 2023 ರ ಮೇ 19 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 3.56 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, ಜೂನ್ 28, 2024 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 7,581 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ.

ಠೇವಣಿ ಮತ್ತು/ಅಥವಾ ರೂ 2000 ಬ್ಯಾಂಕ್ ನೋಟುಗಳ ವಿನಿಮಯದ ಸೌಲಭ್ಯವು ಅಕ್ಟೋಬರ್ 7, 2023 ರವರೆಗೆ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com