ಲೋಕಸಭಾ ಚುನಾವಣೆ ಫಲಿತಾಂಶ ಎಫೆಕ್ಟ್: ಸೆನ್ಸೆಕ್ಸ್, ನಿಫ್ಟಿ 4 ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಕುಸಿತ!

ಲೋಕಸಭೆ ಚುನಾವಣೆ ಫಲಿತಾಂಶದ ಇತ್ತೀಚಿನ ಟ್ರೆಂಡ್ ಪ್ರಕಾರ 543 ಸ್ಥಾನಗಳ ಪೈಕಿ 272 ಸ್ಥಾನ ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿಫಲವಾದ ಕಾರಣ ಭಾರತದ ಷೇರು ಮಾರುಕಟ್ಟೆಯು ಭಾರಿ ನಷ್ಟವನ್ನು ಅನುಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ಇತ್ತೀಚಿನ ಟ್ರೆಂಡ್ ಪ್ರಕಾರ 543 ಸ್ಥಾನಗಳ ಪೈಕಿ 272 ಸ್ಥಾನ ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿಫಲವಾದ ಕಾರಣ ಭಾರತದ ಷೇರು ಮಾರುಕಟ್ಟೆಯು ಭಾರಿ ನಷ್ಟವನ್ನು ಅನುಭವಿಸಿದೆ. ಮಂಗಳವಾರ ಒಂದೇ ದಿನ ನಾಲ್ಕು ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಕುಸಿತ ಕಂಡಿದೆ. ಎನ್‌ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ಸಾಧ್ಯತೆಯಿದೆಯಾದರೂ, ಅಂತಿಮ ಸ್ಥಾನಗಳ ಸಂಖ್ಯೆಯು ಮಾರುಕಟ್ಟೆಯ ಅಂದಾಜುಗಳು ಮತ್ತು ಚುನಾವಣೋತ್ತರ ಫಲಿತಾಂಶಗಳಿಗಿಂತ ಕಡಿಮೆಯಾಗಿದೆ.

ಸಾಂದರ್ಭಿಕ ಚಿತ್ರ
Loksabha Polls 2024: ಚಂದ್ರಬಾಬು ನಾಯ್ಡು ಕಿಂಗ್ ಮೇಕರ್; BJPಯಿಂದ ಬಿಗ್ ಆಫರ್!

ಬಿಎಸ್‌ಇ ಸೆನ್ಸೆಕ್ಸ್ 4,390 ಅಂಕಗಳ ಅಥವಾ ಶೇ. 5.74% ರಷ್ಟು ಭಾರಿ ನಷ್ಟದೊಂದಿಗೆ 72,079.05 ಅಂಕಗಳಲ್ಲಿ ಮಂಗಳವಾರ ವಹಿವಾಟನ್ನು ಕೊನೆಗೊಳಿಸಿದರೆ, ನಿಫ್ಟಿ 1,379 ಅಂಕಗಳು ಅಥವಾ 5.93% ನಷ್ಟು ಕಡಿತದೊಂದಿಗೆ 21,884.50 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 6,100 ಅಂಕಗಳನ್ನು ಮತ್ತು ನಿಫ್ಟಿ 1,600 ಅಂಕಗಳನ್ನು ಕಳೆದುಕೊಂಡಿತು.

ಮಾರಾಟದ ಒತ್ತಡವು ಎಷ್ಟು ತೀವ್ರವಾಗಿತ್ತು ಎಂದರೆ ಅದು 2004 ರ ಚುನಾವಣಾ ಫಲಿತಾಂಶದ ದಿನವನ್ನು ನೆನಪಿಗೆ ತಂದಿತು. ಅಚ್ಚರಿ ರೀತಿಯಲ್ಲಿ NDA ಸಂಖ್ಯೆಗಳು ಕಡಿಮೆಯಾದ ನಂತರ ಸೆನ್ಸೆಕ್ಸ್ ಶೇ. 15 ರಷ್ಟು ಕುಸಿತ ಕಂಡಿತು. ಮಾರುಕಟ್ಟೆ ವ್ಯವಹಾರ ಅಂತ್ಯಗೊಂಡಾಗ ಹೂಡಿಕೆದಾರರು 31 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ, ಏಕೆಂದರೆ ಎಲ್ಲಾ ಬಿಎಸ್‌ಇ ಸಂಯೋಜಿತ ಕಂಪನಿಗಳ ಮಾರುಕಟ್ಟೆ ಬಂಡವಾಳವು 426 ಲಕ್ಷ ಕೋಟಿ ರೂಪಾಯಿಗಳಿಂದ 395 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿದೆ.

ಸಾಂದರ್ಭಿಕ ಚಿತ್ರ
ಲೋಕಸಭೆ ಚುನಾವಣೆ 2024 ಮತ ಎಣಿಕೆ; ವಹಿವಾಟು ಆರಂಭಕ್ಕೆ ಷೇರುಪೇಟೆ ಕುಸಿತ

ಸಾರ್ವತ್ರಿಕ ಚುನಾವಣೆಯ ಅನಿರೀಕ್ಷಿತ ಫಲಿತಾಂಶವು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟದ ಭಯದ ಅಲೆಯನ್ನು ಹುಟ್ಟುಹಾಕಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು. ಇದರ ಹೊರತಾಗಿಯೂ ಎನ್ ಡಿಎ ಅಧಿಕಾರಕ್ಕೆ ಬರುವ ಸ್ಥಿರತೆಯ ನಿರೀಕ್ಷೆಯನ್ನು ಮಾರುಕಟ್ಟೆಯು ಕಾಯ್ದುಕೊಳ್ಳುತ್ತದೆ, ಇದರಿಂದಾಗಿ ಮಧ್ಯಮ-ಅವಧಿಯಲ್ಲಿ ಗಣನೀಯವಾದ ಕುಸಿತವನ್ನು ತಗ್ಗಿಸುತ್ತದೆ. ಇದು ಸಾಮಾಜಿಕ ಅರ್ಥಶಾಸ್ತ್ರದ ಮೇಲೆ ಕೇಂದ್ರೀಕರಿಸುವ ರಾಜಕೀಯ ನೀತಿಯಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗಬಹುದು. ಇದು ಗ್ರಾಮೀಣ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.

ಆಡಳಿತ ಪಕ್ಷವು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವುದರಿಂದ ಇಂದು ಭಾರತೀಯ ಷೇರುಗಳು ಕುಸಿದಿವೆ ಎಂದು ಪೇಸ್ 360 ಸಹ ಸಂಸ್ಥಾಪಕ ಮತ್ತು ಮುಖ್ಯ ಜಾಗತಿಕ ತಂತ್ರಜ್ಞ ಅಮಿತ್ ಗೋಯೆಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com