ವಿಶ್ವದ ಅಗ್ರ 38 ಕಾಫಿಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ 2ನೇ ಸ್ಥಾನ!
ಕಾಪಿ ಅತ್ಯಂತ ರುಚಿಕರವಾದ ಪಾನೀಯವಾಗಿದ್ದು, ತನ್ನ ರುಚಿಯಿಂದಲೇ ಹೆಸರುವಾಸಿಯಾಗಿದೆ. ಪ್ರಪಂಚದಾದ್ಯಂತ ವಿವಿಧ ರೀತಿಯ ಕಾಫಿ ಬೀಜಗಳು ಮತ್ತು ತಯಾರಿಕಾ ಶೈಲಿಗಳು ಇವೆ. ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ವೇದಿಕೆಯಾದ ಟೇಸ್ಟ್‌ಅಟ್ಲಾಸ್ ಇತ್ತೀಚೆಗೆ 'ವಿಶ್ವದ ಟಾಪ್ 38 ಕಾಫಿಗಳು' ಹೊಸ ರೇಟಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ 'ಕ್ಯೂಬನ್ ಎಸ್ಪ್ರೆಸೊ' ನಂ. 1 ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ 'ಸೌತ್ ಇಂಡಿಯನ್ ಕಾಫಿ' ಇದೆ. TasteAtlas ಪ್ರಕಾರ, ಈ ಕಾಫಿಗಳು ವಿಶ್ವದ 10 ಅಗ್ರ ಕಾಫಿಗಳಲ್ಲಿ ಸ್ಥಾನ ಪಡೆದವುಗಳಾಗಿವೆ. ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾಫಿಗಳ ಪಟ್ಟಿ ಇಲ್ಲಿದೆ ನೋಡಿ...
ಡಾರ್ಕ್ ರೋಸ್ಟ್ ಕಾಫಿ ಮತ್ತು ಸಕ್ಕರೆ ಬಳಸಿ ತಯಾರಿಸಲಾದ ಸಿಹಿಯಾದ ಎಸ್ಪ್ರೆಸೊ ಶಾಟ್ ಅನ್ನು 'ಕ್ಯೂಬನ್ ಎಸ್ಪ್ರೆಸೊ' ಒಳಗೊಂಡಿದೆ. ಕಾಫಿ ಕುದಿಸುವಾಗ ಸಕ್ಕರೆ ಸೇರಿಸಲಾಗುತ್ತದೆ. ಇದನ್ನು ಸ್ಟವ್ಟಾಪ್ ಎಸ್ಪ್ರೆಸೊ ತಯಾರಕ ಅಥವಾ ವಿದ್ಯುತ್ ಎಸ್ಪ್ರೆಸೊ ಯಂತ್ರದಲ್ಲಿ ಕುದಿಸಲಾಗುತ್ತದೆ. ಈ ತಯಾರಿಕಾ ಶೈಲಿಯು ಕಾಫಿಯ ಮೇಲೆ ತಿಳಿ-ಕಂದು ಫೋಮ್‌ಗೆ ಕಾರಣವಾಗುತ್ತದೆ.
ಭಾರತೀಯ ಫಿಲ್ಟರ್ ಕಾಫಿಯನ್ನು ಸರಳ ಮತ್ತು ಪರಿಣಾಮಕಾರಿ ಕಾಫಿ ಫಿಲ್ಟರ್ ಯಂತ್ರವನ್ನು ಬಳಸಿ ತಯಾರಿಸಲಾಗುತ್ತದೆ. ಈ ಯಂತ್ರವು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟಿದೆ ಮತ್ತು ಎರಡು ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ಈ ಕಾಫಿ ತಯಾರಿಕೆಯು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ.
ಅನೇಕ ಜನರು ರಾತ್ರಿ ವೇಳೆಯಲ್ಲಿ ಕಾಫಿ ಫಿಲ್ಟರ್ ಅನ್ನು ಮಾಡುತ್ತಾರೆ. ಈ ಮಿಶ್ರಣವನ್ನು ಬೆಚ್ಚಗಿನ ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಲಾಗುತ್ತದೆ. ಈ ಕಾಫಿಯನ್ನು ಸ್ಟೀಲ್ ಅಥವಾ ಹಿತ್ತಾಳೆಯಿಂದ ಮಾಡಿದ ಸಣ್ಣ ಲೋಟಗಳಲ್ಲಿ ನೀಡಲಾಗುತ್ತದೆ. ಕಾಫಿಯನ್ನು ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಸುರಿಯಲಾಗುತ್ತದೆ. ಇದರಿಂದ ಅದು ನೊರೆಯಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ