ಸ್ಪರ್ಧೆಯಲ್ಲಿ ಉಳಿಯಲು ಭಾರತದಲ್ಲಿ ಉತ್ಪಾದನೆ ಮಾಡಬೇಕಾಗಿದೆ: Apple ಸಿಇಒ ಟಿಮ್ ಕುಕ್

ಭಾರತ ನಂಬಲಾಗದಷ್ಟು ಉತ್ತೇಜಕ ಮಾರುಕಟ್ಟೆಯಾಗಿದೆ ಮತ್ತು ಇದು ಆ್ಯಪಲ್ ಗೆ ಪ್ರಮುಖ ಆದ್ಯತೆಯಾಗಿದೆ.
ಟಿಮ್ ಕುಕ್
ಟಿಮ್ ಕುಕ್

ನವದೆಹಲಿ: ಸ್ಪರ್ಧೆಯಲ್ಲಿ ಉಳಿಯಲು ಆ್ಯಪಲ್ ಭಾರತದಲ್ಲಿ ಉತ್ಪಾದನೆ ಮಾಡಬೇಕಾಗಿದೆ ಎಂದು ಸಿಇಒ ಟಿಮ್ ಕುಕ್ ಶುಕ್ರವಾರ ಹೇಳಿದ್ದಾರೆ. ಮಾರ್ಚ್ 2024 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಹೂಡಿಕೆದಾರರ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಅತ್ಯಂತ ಉತ್ತೇಜಕ ಮಾರುಕಟ್ಟೆಯಾಗಿದೆ ಮತ್ತು ಇದು ಆ್ಯಪಲ್ ಗೆ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ. ಕಾರ್ಯಾಚರಣೆಯ ಭಾಗ ಅಥವಾ ಪೂರೈಕೆ ಸರಪಳಿಯ ಭಾಗವಾಗಿ ಭಾರತದಲ್ಲಿ ನಾವು ಉತ್ಪಾದಿಸುತ್ತಿದ್ದೇವೆ. ಪ್ರಾಯೋಗಿಕ ದೃಷ್ಟಿಕೋನದಿಂದ, ಸ್ಪರ್ಧೆಯಲ್ಲಿ ಉಳಿಯಲು ಅಲ್ಲಿ ಉತ್ಪಾದಿಸಬೇಕಾಗಿದೆ ಎಂದು ಕುಕ್ ಹೇಳಿದ್ದಾರೆ.

US ಟೆಕ್ ದೈತ್ಯ ಕಂಪನಿಯು ಒಪ್ಪಂದ ಮೂಲಕ 2017 ರಿಂದ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಕೈಜೋಡಿಸಿದೆ. 2024 ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 14 ಶತಕೋಟಿ ಡಾಲರ್ ಮೌಲ್ಯದ ಐಫೋನ್‌ಗಳನ್ನು ಉತ್ಪಾದಿಸಿದೆ.

ಇದು ಅವರ ಜಾಗತಿಕ ಐಫೋನ್ ಉತ್ಪಾದನೆಯ ಶೇ. 14ರಷ್ಟಿದೆ. ವರದಿಗಳ ಪ್ರಕಾರ, ಆ್ಯಪಲ್ 2025 ರ ವೇಳೆಗೆ ಭಾರತದಲ್ಲಿ ಒಟ್ಟು ಐಫೋನ್ ಉತ್ಪಾದನೆಯ ಶೇ. 25 ರಷ್ಟು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಅವರು ಭಾರತದಲ್ಲಿ iPhone 12 ರಿಂದ ಇತ್ತೀಚಿನ iPhone 15 ವರೆಗಿನ ಐಫೋನ್‌ಗಳ ಉತ್ಪಾದನೆಗೆ ಕೈ ಜೋಡಿಸಿದ್ದಾರೆ.

ಭಾರತದಲ್ಲಿನ ಬೆಳವಣಿಗೆಯ ಬಗ್ಗೆ ಮಾತನಾಡಿದ ಟಿಮ್ ಕುಕ್, ಕಂಪನಿಯು ದೇಶದಲ್ಲಿ ಮಹತ್ವದ ಎರಡಂಕಿಯ ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಿದ್ದಾರೆ. “ಖಂಡಿತವಾಗಿಯೂ ಎರಡಂಕಿಯಷ್ಟು ಬಲವಾಗಿ ಬೆಳೆದಿದ್ದೇವೆ. ಹೀಗಾಗಿ ಅದರ ಬಗ್ಗೆ ತುಂಬಾ ಸಂತೋಷವಾಗಿದೆ. ಇದು ನಮಗೆ ಮಾರ್ಚ್ ತ್ರೈಮಾಸಿಕದಲ್ಲಿ ಹೊಸ ಆದಾಯ ದಾಖಲೆಯಾಗಿದೆ. ಮೊದಲೇ ಹೇಳಿದಂತೆ ಅದನ್ನು ಉತ್ತೇಜಕ ಮಾರುಕಟ್ಟೆಯಾಗಿ ನೋಡುತ್ತೇನೆ ಮತ್ತು ಇದು ನಮಗೆ ಗಮನಾರ್ಹವಾಗಿದೆ ಎಂದು ಹೇಳಿದ್ದಾರೆ.

2023 ರಲ್ಲಿ, Apple ದೆಹಲಿ ಮತ್ತು ಮುಂಬೈನಲ್ಲಿ ಎರಡು ಚಿಲ್ಲರೆ ಅಂಗಡಿಗಳನ್ನು ತೆರೆದಿತ್ತು. ಕಂಪನಿಯು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಪೂರಕ ಪರಿಸರ ನಿರ್ಮಿಸಲಾಗುತ್ತಿದೆ ಎಂದು ಕುಕ್ ತಿಳಿಸಿದ್ದಾರೆ. ಸತತವಾಗಿ ಹನ್ನೆರಡನೇ ವರ್ಷಕ್ಕೆ ನಮ್ಮ ತ್ರೈಮಾಸಿಕ ಲಾಭಾಂಶವನ್ನು ಹೆಚ್ಚಿಸುತ್ತಿದ್ದೇವೆ” ಎಂದು Apple ಸಿಎಫ್‌ಒ ಲುಕಾ ಮೇಸ್ತ್ರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com