ಮುಂಬೈ: ಕಳೆದ ವಾರಾಂತ್ಯದಲ್ಲಿ ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನವೇ ಚೇತರಿಕೆ ಹಾದಿ ಹಿಡಿದಿದ್ದು, ಸೆನ್ಸೆಕ್ಸ್ 376 ಅಂಕಗಳ ಏರಿಕೆ ಕಂಡಿದೆ.
ಹೌದು.. ಇಂದು ವಾರದ ಮೊದಲ ದಿನ 80,973.75 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ BSE Sensex ದಿನದ ವಹಿವಾಟು ಅಂತ್ಯಕ್ಕೆ 375.61 ಅಂಕಗಳ ಏರಿಕೆಯೊಂದಿಗೆ 81,653.36 ಅಂಕಗಳಿಗೆ ಏರಿತು.
ಅಂತೆಯೇ NSE Nifty ಕೂಡ 24,823.40 ಅಂಕಗಳೊಂದಿಗೆ ದಿನದ ವಹಿವಾಟು ಆರಂಭಿಸಿ 84.25 ಅಂಕಗಳ ಏರಿಕೆಯೊಂದಿಗೆ 24,957.50 ಅಂಕಗಳಿಗೆ ಏರಿಕೆಯಾಯಿತು.
ಕಳೆದ ವಾರ ವಹಿವಾಟಿನ ಅಂತಿಮ ದಿನವಾದ ಶುಕ್ರವಾರ ಸೆನ್ಸೆಕ್ಸ್ 1 ಸಾವಿರಕ್ಕೂ ಅಧಿಕ ಅಂಕಗಳ ನಷ್ಟ ಅನುಭವಸಿದ್ದು ಮಾತ್ರವಲ್ಲದೇ ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟವಾಗಿತ್ತು. ಆದರೆ ಈ ವಾರದ ಆರಂಭದಲ್ಲೇ ಸೆನ್ಸೆಕ್ಸ್ ಚೇತರಿಕೆಯ ಹಾದಿಯತ್ತ ಸಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಂಸ್ಥೆಗಳು ಹೆಚ್ಚು ಲಾಭ ಗಳಿಸಿದವು.
ಅಂತೆಯೇ ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಎನ್‌ಟಿಪಿಸಿ, ಟಾಟಾ ಮೋಟಾರ್ಸ್, ಪವರ್ ಗ್ರಿಡ್ ಮತ್ತು ಟೈಟನ್ ಸಂಸ್ಥೆಗಳು ನಷ್ಟ ಅನುಭವಿಸಿವೆ.
Advertisement