
ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಜಂಟಿಯಾಗಿ ವಾಣಿಜ್ಯ ನಗರಿ ಮುಂಬೈ ಬಳಿ 7 ಎಕರೆ ಜಮೀನು ಖರೀದಿಸಿದ್ದಾರೆ.
ಸಂಬಂಧದಲ್ಲಿ ಅಳಿಯ ಹಾಗೂ ಮಾವನಾಗಿರುವ ಕೆಎಲ್ ರಾಹುಲ್ ಹಾಗೂ ಸುನೀಲ್ ಶೆಟ್ಟಿ ರೂ. 9.85 ಕೋಟಿಗೆ ಜಮೀನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.
ಥಾಣೆ ಪಶ್ಚಿಮದ ಓವಾಲೆಯಲ್ಲಿರುವ ಒಟ್ಟು 30 ಎಕರೆ 17 ಗುಂಟೆ ಜಮೀನಿನಲ್ಲಿ 7 ಎಕರೆ ಅವಿಭಜಿತ ಭೂಮಿಯನ್ನು ರೂ. 9.85 ಕೋಟಿಗೆ ಖರೀದಿಸಿದ್ದಾರೆ.
ಆಸ್ತಿ ನೋಂದಣಿ ದಾಖಲೆಗಳನ್ನು ಪರಿಶೀಲಿಸಿರುವುದಾಗಿ ಸ್ಕ್ವೇರ್ ಯಾರ್ಡ್ಸ್ ಹೇಳಿದೆ. ವಹಿವಾಟನ್ನು ಮಾರ್ಚ್ 2025 ರಲ್ಲಿ ನೋಂದಾಯಿಸಲಾಗಿದ್ದು, ಏಳು ಎಕರೆ (28,327.95 ಚದರ ಮೀಟರ್) ವ್ಯವಹಾರ ಒಳಗೊಂಡಿದೆ.
ರೂ. 68.96 ಲಕ್ಷ ಮುದ್ರಾಂಕ ಶುಲ್ಕ ಮತ್ತು 30,000 ರೂ. ನೋಂದಾಣಿ ಶುಲ್ಕ ಪಾವತಿ ಮೂಲಕ ವಹಿವಾಟು ನಡೆದಿದೆ ಎಂದು ಸ್ಕ್ವೇರ್ ಯಾರ್ಡ್ಸ್ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
Advertisement