Gold Rate: ಚಿನ್ನದ ಬೆಲೆ ಮತ್ತೆ ಗಗನಕ್ಕೆ: 95 ಸಾವಿರ ಗಡಿ ದಾಟಿದ ಹಳದಿ ಲೋಹ! ನೂತನ ದರ ಪಟ್ಟಿ

ಚಿನ್ನದ ದರ 10 ಗ್ರಾಂಗೆ 95,090 ರೂ.ಗಳ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ನಂತರ ಮಧ್ಯಾಹ್ನ 1:04 ರ ಹೊತ್ತಿಗೆ ಶೇ. 1.66 ರಷ್ಟು ಇಳಿಕೆಯಾಗಿ 95,000 ರೂ.ಗಳಿಗೆ ಇಳಿಯಿತು.
Gold Rate hike
ಚಿನ್ನದ ದರದಲ್ಲಿ ಏರಿಕೆonline desk
Updated on

ಮುಂಬೈ: ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಏಪ್ರಿಲ್ 16 ಬುಧವಾರದಂದು ಭಾರತದಲ್ಲಿ ಚಿನ್ನದ ಬೆಲೆ ಐತಿಹಾಸಿಕ ಮಟ್ಟಕ್ಕೆ ಏರಿಕೆಯಾಗಿದೆ.

ಹೌದು... ದೇಶೀಯ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 95,000 ರೂ.ಗಳ ಗಡಿಯನ್ನು ದಾಟಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ, ಚಿನ್ನದ ದರ 10 ಗ್ರಾಂಗೆ 95,090 ರೂ.ಗಳ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ನಂತರ ಮಧ್ಯಾಹ್ನ 1:04 ರ ಹೊತ್ತಿಗೆ ಶೇ. 1.66 ರಷ್ಟು ಇಳಿಕೆಯಾಗಿ 95,000 ರೂ.ಗಳಿಗೆ ಇಳಿಯಿತು.

ಬೆಳ್ಳಿ ಕೂಡ ಏರಿಕೆಯ ಪ್ರವೃತ್ತಿಯಲ್ಲೇ ಸಾಗಿದ್ದು, ಪ್ರತಿ ಕಿಲೋಗ್ರಾಂಗೆ 1.56% ರಷ್ಟು ಏರಿಕೆಯಾಗಿ 96,344 ರೂ.ಗಳ ಇಂಟ್ರಾಡೇ ಗರಿಷ್ಠವನ್ನು ತಲುಪಿದ ನಂತರ, ಪ್ರತಿ ಕಿಲೋಗ್ರಾಂಗೆ 96,253 ರೂ.ಗಳಿಗೆ ತಲುಪಿದೆ.

Gold Rate hike
Gold Rate: ಚಿನ್ನದ ದರ ಮತ್ತೆ ಇಳಿಕೆ; ಬೆಂಗಳೂರಿನಲ್ಲಿ ಹಳದಿ ಲೋಹದ ದರ ಪಟ್ಟಿ ಇಂತಿದೆ!

ಚಿನ್ನದ ದರ ಏರಿಕೆ ಮೇಲೆ ಜಾಗತಿಕ ಅಂಶಗಳ ಪರಿಣಾಮ

ಇನ್ನು ಇಂದಿನ ಚಿನ್ನದ ದರ ಏರಿಕೆ ಮೇಲೆ ಜಾಗತಿಕ ಅಂಶಗಳು ಪರಿಣಾಮ ಬೀರಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಮೇಲೆ ಹೇರಿರುವ ಸುಂಕ ಪ್ರಮಾಣದ ಹೆಚ್ಚಿಸಿದ್ದು, ಶೇ.234ರಷ್ಟು ಸುಂಕ ಏರಿಕೆ ಘೋಷಿಸಿದ್ದಾರೆ.

"ದುರ್ಬಲ ಡಾಲರ್, ವ್ಯಾಪಾರ ಯುದ್ಧದ ಉದ್ವಿಗ್ನತೆಗಳು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಯೋಜನೆಗಳಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲಿನ ಕಳವಳಗಳಕಾರಿ ಪರಿಣಾಮ ಬೀರುತ್ತಿವೆ. ಚಿನ್ನದ ಬೆಲೆಗಳು ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿವೆ" ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಸರಕು ಸಂಶೋಧನೆಯ ಹಿರಿಯ ವಿಶ್ಲೇಷಕ ಮಾನವ್ ಮೋದಿ ಹೇಳಿದರು.

ಬೆಂಗಳೂರಿನಲ್ಲಿ ಇಂದಿನ ದರ ಇಂತಿದೆ

ಬುಧವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 95 ರೂ ಏರಿಕೆಯಾಗಿದ್ದು, 24 ಕ್ಯಾರಟ್‌ ಬಂಗಾರದ ಧಾರಣೆ ಗ್ರಾಂಗೆ 99ರೂ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 8,815ಕ್ಕೆ ಏರಿಕೆಯಾಗಿದ್ದು, ಅಂತೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 88,150ಕ್ಕೆ ಏರಿಕೆಯಾಗಿದೆ. 24 ಕ್ಯಾರಟ್‌ ನ ಒಂದು ಗ್ರಾಂ ಚಿನ್ನದ ಬೆಲೆ 9,617 ರೂಗೆ ಏರಿಕೆಯಾಗಿದ್ದು, 24 ಕ್ಯಾರಟ್‌ ನ 10 ಗ್ರಾಂ ಚಿನ್ನದ ಬೆಲೆ 96,170 ರೂ ಗೆ ಏರಿಕೆಯಾಗಿದೆ.

ಬೆಳ್ಳಿ ದರದಲ್ಲೂ ಅಲ್ಪ ಏರಿಕೆ

ಇನ್ನು ಬೆಳ್ಳಿಯ ಬೆಲೆಯಲ್ಲೂ ಗ್ರಾಂಗೆ ಅಲ್ಪ ಏರಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 20 ಪೈಸೆ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 100 ರೂಗೆ ಏರಿಕೆಯಾಗಿದ್ದು, 10 ಗ್ರಾಂ ಬೆಳ್ಳಿ ದರ 1000 ರೂಗೆ ಮತ್ತು 1 Kg ಬೆಳ್ಳಿದರ 100,000 ರೂ ಗೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com