
ನವದೆಹಲಿ: ಭಾರತದ ಆರ್ಥಿಕತೆಯ 2038ರ ವೇಳೆಗೆ ದೈತ್ಯ ಅಮೆರಿಕವನ್ನೇ ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ಹೇಳಿದೆ.
ಅರ್ನ್ಸ್ಟ್ ಆಂಡ್ ಯಂಗ್ (EY) ತನ್ನ ಇತ್ತೀಚಿನ ವರದಿಯಲ್ಲಿ ಈ ಕುರಿತು ವಿಶ್ಲೇಷಣೆ ಮಾಡಿದ್ದು, ಭಾರತದ ಆರ್ಥಿಕತೆಯು ಮುಂಬರುವ ದಶಕದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಲಿದೆ. ಮಾತ್ರವಲ್ಲದೆ ಅಮೆರಿಕವನ್ನು ಹಿಂದಿಕ್ಕಿ 34.2 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ 2ನೇ ಸ್ಥಾನಕ್ಕೇರಲಿದೆ ಎಂದು ಹೇಳಿದೆ.
ಖರೀದಿ ಸಾಮರ್ಥ್ಯದ ಆಧಾರದ ಮೇಲೆ, 2030ರ ವೇಳೆಗೆ ಭಾರತದ ಜಿಡಿಪಿ 20.7 ಟ್ರಿಲಿಯನ್ ಡಾಲರ್‌ಗೆ ತಲುಪಲಿದೆ ಎಂದು ಅಂದಾಜಿಸಿರುವ ಇವೈ ಸಂಸ್ಥೆ, ಇದೇ ಬೆಳವಣಿಗೆಯನ್ನು ಕಾಯ್ದುಕೊಂಡರೆ 2038ರ ಹೊತ್ತಿಗೆ ದೇಶದ ಜಿಡಿಪಿ 34.2 ಟ್ರಿಲಿಯನ್ ಡಾಲರ್‌ಗೆ ಏರಿ, ಚೀನಾದ ನಂತರದ ಸ್ಥಾನವನ್ನು ಪಡೆಯಲಿದೆ.
ಖರೀದಿ ಸಾಮರ್ಥ್ಯದ ಆಧಾರದಲ್ಲಿ ಸದ್ಯ ಭಾರತವು 14.2 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಚೀನಾ ಮತ್ತು ಅಮೆರಿಕದ ನಂತರ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ ವರದಿಯಲ್ಲಿ ಇವೈ ಉಲ್ಲೇಖಿಸಿದೆ.
ಇದಲ್ಲದೆ, ಮಾರುಕಟ್ಟೆ ವಿನಿಮಯ ದರದಲ್ಲಿಯೂ 2028ರ ವೇಳೆಗೆ ಜರ್ಮನಿಯನ್ನು ಭಾರತ ಹಿಂದಿಕ್ಕಲಿದ್ದು, ಭಾರತವು ವಿಶ್ವದ ಮೂರನೇ ಸ್ಥಾನಕ್ಕೇರಲಿದೆ ಎಂದು ಇವೈ ಎಕಾನಮಿ ವಾಚ್'ನ ಆಗಸ್ಟ್ 2025ರ ವರದಿ ವಿವರ ನೀಡಿದೆ.
ಸರಾಸರಿ 28.8 ವರ್ಷಗಳು, ಹೆಚ್ಚಿನ ಉಳಿತಾಯ ಮತ್ತು ಹೂಡಿಕೆಯ ದರಗಳು ಮತ್ತು 2024 ರಲ್ಲಿ ಶೇಕಡಾ 81.3 ರಿಂದ 2030 ರ ವೇಳೆಗೆ 75.8 ಕ್ಕೆ ಇಳಿಯುವ ನಿರೀಕ್ಷೆಯಿರುವ ಸರ್ಕಾರದ ಸಾಲದಿಂದ ಜಿಡಿಪಿ ಅನುಪಾತವು ಕುಸಿಯುತ್ತಿರುವ ಭಾರತವು ಸುಮಾರು 13 ವರ್ಷಗಳಲ್ಲಿ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲು ಇತರ ಪ್ರಮುಖ ಆರ್ಥಿಕತೆಗಳನ್ನು ಮೀರಿಸಲು ಉತ್ತಮ ಸ್ಥಾನದಲ್ಲಿದೆ. ಈಗ, ಅಂದಾಜು 19 4.19 ಟ್ರಿಲಿಯನ್ ಹೊಂದಿರುವ ಭಾರತವು ನಾಮಮಾತ್ರ ಜಿಡಿಪಿ ಜಾಗತಿಕವಾಗಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ.
ಭಾರತ ಮತ್ತು ಅಮೆರಿಕ ದೇಶಗಳ ಸರಾಸರಿ ಬೆಳವಣಿಗೆಯ ದರ ಕ್ರಮವಾಗಿ ಶೇಕಡಾ 6.5 ಮತ್ತು 2.1 ರಷ್ಟಿದ್ದರೆ, 2028 -2030 (ಐಎಂಎಫ್ ಮುನ್ಸೂಚನೆಯ ಪ್ರಕಾರ) ಅವಧಿಯಲ್ಲಿ, ಭಾರತವು ಅಮೆರಿಕ ಆರ್ಥಿಕತೆಯನ್ನು ಪಿಪಿಪಿ (Purchasing Power Parity) ಪರಿಭಾಷೆಯಲ್ಲಿ 2038 ರ ವೇಳೆಗೆ ಮೀರಿಸಬಹುದು ಎಂದು ವರದಿ ತಿಳಿಸಿದೆ.
ಉಳಿತಾಯ, ಹೂಡಿಕೆ, ಹಣಕಾಸು ನೀತಿ.. ಭಾರತದ ಶಕ್ತಿ!
ಹೆಚ್ಚಿನ ಉಳಿತಾಯ ಮತ್ತು ಹೂಡಿಕೆ ದರ, ಕೌಶಲ್ಯಯುತ ಯುವ ಸಮೂಹ, ಸುಸ್ಥಿರ ಹಣಕಾಸು ನೀತಿ ಹಾಗೂ ದೇಶೀಯ ಬೇಡಿಕೆಯ ಮೇಲಿನ ಅವಲಂಬನೆಯೇ ಭಾರತದ ಪ್ರಮುಖ ಶಕ್ತಿಗಳಾಗಿವೆ. ಅಮೆರಿಕವು ಭಾರತೀಯ ಆಮದುಗಳ ಮೇಲೆ ವಿಧಿಸಿರುವ ಹೆಚ್ಚಿನ ಸುಂಕಗಳ ಸವಾಲಿನ ಬಗ್ಗೆಯೂ ವರದಿ ಬೆಳಕು ಚೆಲ್ಲಿದ್ದಿ, ಆಗಸ್ಟ್ 27ರಿಂದ ಜಾರಿಗೆ ಬಂದಿರುವ ಶೇ. 50ರಷ್ಟು ಸುಂಕದಿಂದಾಗಿ ಜವಳಿ, ರತ್ನ ಮತ್ತು ಆಭರಣ, ಸೀಗಡಿ, ಚರ್ಮದ ಉತ್ಪನ್ನಗಳು ಸೇರಿದಂತೆ 48 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯು ವಿಶ್ಲೇಷಿಸಿದೆ.
ಹೀಗಿದ್ದೂ ಸೂಕ್ತ ಪ್ರತಿತಂತ್ರಗಳನ್ನು ರೂಪಿಸುವ ಮೂಲಕ ಭಾರತವು ಈ ಪರಿಣಾಮವನ್ನು ತನ್ನ ಜಿಡಿಪಿಯ ಮೇಲೆ ಕೇವಲ ಶೇ. 0.1ಕ್ಕೆ ಸೀಮಿತಗೊಳಿಸಬಹುದು. ಇದರಿಂದಾಗಿ, ದೇಶದ ನಿರೀಕ್ಷಿತ ಶೇ. 6.5 ಬೆಳವಣಿಗೆ ದರವು ಮಧ್ಯಮಾವಧಿಯಲ್ಲಿ ಶೇ. 6.4ಕ್ಕೆ ಇಳಿಯಬಹುದು ಎಂದು ವರದಿ ಹೇಳಿದೆ.
ಈ ಕುರಿತು ಮಾತನಾಡಿರುವ ಇವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ಡಿ.ಕೆ. ಶ್ರೀವಾಸ್ತವ ಅವರು, 'ಜಾಗತಿಕ ಅನಿಶ್ಚಿತತೆ ಮತ್ತು ವ್ಯಾಪಾರ ಸಂಘರ್ಷಗಳ ನಡುವೆಯೂ ಭಾರತದ ಬೆಳವಣಿಗೆ 'ವಿಕಸಿತ ಭಾರತ'ದ ಗುರಿ ಸಾಧನೆಗೆ ಪೂರಕವಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಭಾರತದ ತುಲನಾತ್ಮಕ ಸಾಮರ್ಥ್ಯಗಳು, ಅದರ ಯುವ ಮತ್ತು ನುರಿತ ಉದ್ಯೋಗಿಗಳು, ದೃಢವಾದ ಉಳಿತಾಯ ಮತ್ತು ಹೂಡಿಕೆ ದರಗಳು ಮತ್ತು ತುಲನಾತ್ಮಕವಾಗಿ ಸುಸ್ಥಿರ ಸಾಲದ ವಿವರವು ಬಾಷ್ಪಶೀಲ ಜಾಗತಿಕ ವಾತಾವರಣದಲ್ಲಿಯೂ ಸಹ ಹೆಚ್ಚಿನ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಮುಂದುವರಿಯುವ ಸಾಮರ್ಥ್ಯಗಳನ್ನು ಬೆಳೆಸುವ ಮೂಲಕ, ಭಾರತವು 2047 ರ ವೇಳೆಗೆ ತನ್ನ ವಿಕಸಿತ ಭಾರತ ಆಕಾಂಕ್ಷೆಗಳಿಗೆ ಹತ್ತಿರವಾಗಲು ಉತ್ತಮ ಸ್ಥಾನದಲ್ಲಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement