Trump ಒತ್ತಾಯಕ್ಕೆ ಮಣಿದ ಭಾರತ?: Harley Davidson ಬೈಕ್‌ ಗಳ ಮೇಲಿನ ಆಮದು ಸುಂಕ ಕಡಿತ!

ಈ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಭಾರತ ಸರ್ಕಾರ ಹಾರ್ಲೇ ಡೇವಿಡ್ ಸನ್ (Harley Davidson) ಬೈಕ್ ಗಳ ಮೇಲಿನ ಸುಂಕ ಕಡಿಮೆ ಮಾಡಿರುವುದು ಇಂಥಹದ್ದೊಂದು ಪ್ರಶ್ನೆಗೆ ಕಾರಣವಾಗಿದೆ.
Trump ಒತ್ತಾಯಕ್ಕೆ ಮಣಿದ ಭಾರತ?: Harley Davidson ಬೈಕ್‌ ಗಳ ಮೇಲಿನ ಆಮದು ಸುಂಕ ಕಡಿತ!
Updated on

ನವದೆಹಲಿ: ಅಮೇರಿಕಾ ಉತ್ಪನ್ನಗಳಿಗೆ ಹೆಚ್ಚಿನ ಆಮದು ಸುಂಕ ವಿಧಿಸುತ್ತಿರುವ ರಾಷ್ಟ್ರಗಳಿಗೆ ಪ್ರತೀಕಾರವಾಗಿ ದುಪ್ಪಟ್ಟು ತೆರಿಗೆ ವಿಧಿಸುವ ಡೊನಾಲ್ಡ್ ಟ್ರಂಪ್ ಆಕ್ರೋಶ ತಣ್ಣಗಾಗಿಸುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಟ್ಟಿದೆಯೆ?

ಈ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಭಾರತ ಸರ್ಕಾರ ಹಾರ್ಲೇ ಡೇವಿಡ್ ಸನ್ (Harley Davidson) ಬೈಕ್ ಗಳ ಮೇಲಿನ ಸುಂಕ ಕಡಿಮೆ ಮಾಡಿರುವುದು ಇಂಥಹದ್ದೊಂದು ಪ್ರಶ್ನೆಗೆ ಕಾರಣವಾಗಿದೆ.

ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ 2 ನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಭಾರತ ಸರ್ಕಾರ ತನ್ನ ಬಜೆಟ್ ನಲ್ಲಿ Harley Davidson ಬೈಕ್ ಗಳ ಆಮದು ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು (ಸೀಮಾ ಸುಂಕ) ಕಡಿತಗೊಳಿಸಿರುವುದನ್ನು Trump Tariff ಬೆದರಿಕೆಯನ್ನು ತಣ್ಣಗಾಗಿಸುವ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ.

Trump ಒತ್ತಾಯಕ್ಕೆ ಮಣಿದ ಭಾರತ?: Harley Davidson ಬೈಕ್‌ ಗಳ ಮೇಲಿನ ಆಮದು ಸುಂಕ ಕಡಿತ!
Donald Trump: ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರೊ, ನಿಮ್ಮನ್ನು ನಾವು ಹಾಗೆಯೇ ನಡೆಸಿಕೊಳ್ಳುತ್ತೇವೆ; ಭಾರತಕ್ಕೆ ತೆರಿಗೆ ಬೆದರಿಕೆ!

1600 ಸಿಸಿ ಮೀರದ ಎಂಜಿನ್ ಸಾಮರ್ಥ್ಯವಿರುವ ಮೋಟಾರ್‌ಸೈಕಲ್‌ಗಳಿಗೆ, ಸಿಬಿಯುಗಳ (ಸಂಪೂರ್ಣವಾಗಿ ನಿರ್ಮಿಸಲಾದ) ಮೇಲಿನ ಸುಂಕವನ್ನು ಶೇ. 50ರಿಂದ ಶೇ.40ಕ್ಕೆ ಇಳಿಸಲಾಗಿದೆ. 1600 ಸಿಸಿ ಮೀರದ ಎಂಜಿನ್ ಸಾಮರ್ಥ್ಯವಿರುವ ದೊಡ್ಡ ಮೋಟಾರ್‌ಸೈಕಲ್‌ಗಳಿಗೆ, ಸುಂಕ ಕಡಿತ ಪ್ರಮಾಣ ಹೆಚ್ಚಿವೆ.

ಕಾರುಗಳು ಮತ್ತು ಇತರ ಮೋಟಾರು ವಾಹನಗಳ ಆಮದಿನ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸಹ ಕಡಿಮೆ ಮಾಡಲಾಗಿದ್ದರೂ, ಅವುಗಳ ಪರಿಣಾಮಕಾರಿ ಸುಂಕ ದರಗಳು ಬದಲಾಗುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.

ಭಾರತದಲ್ಲಿನ ಹೆಚ್ಚಿನ ಸುಂಕಗಳು ಇತ್ತೀಚೆಗೆ ಎರಡನೇ ಬಾರಿಗೆ ಗೆದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅಸಮಾಧಾನಕ್ಕೆ ಕಾರಣವಾಗಿತ್ತು.

Trump ಒತ್ತಾಯಕ್ಕೆ ಮಣಿದ ಭಾರತ?: Harley Davidson ಬೈಕ್‌ ಗಳ ಮೇಲಿನ ಆಮದು ಸುಂಕ ಕಡಿತ!
ಭಾರತದ ಮೇಲೆ ಟ್ರಂಪ್ ಕೋಪ, ಚೀನಾ ಜೊತೆ ಸ್ನೇಹ! ಏನಿದರ ಮರ್ಮ? (News & Views)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com