ಆಭರಣ ಕೊಳ್ಳುವವರಿಗೆ ಇಂದೇ ಒಳ್ಳೆ ದಿನ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ₹ 189 ಇಳಿಕೆ ಕಂಡ ಬೆಳ್ಳಿ!

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 7,940 ರೂಪಾಯಿಗೆ ಮಾರಾಟವಾಗುತ್ತಿದೆ.
gold rate
ಪ್ರಾತಿನಿಧಿಕ ಚಿತ್ರonline desk
Updated on

ನವದೆಹಲಿ: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಚಿನ್ನಾಭರಣ ಖರೀದಿಸಿಬೇಕೆನ್ನುವ ಹಲವರ ಕನಸು ಕನಸಾಗಿಯೇ ಉಳಿದಿದೆ. ಈ ಬೆನ್ನಲ್ಲೇ ಇದೀಗ ಚಿನ್ನ ಖರೀದಿಗೆ ಕಾಲ ಕೂಡಿಬಂದಿದೆ. ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಕುಸಿತ ಕಂಡ ಪರಿಣಾಮವಾಗಿ ಇಲ್ಲಿನ ಚಿನಿವಾರಪೇಟೆಯಲ್ಲಿ ಬುಧವಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 345 ರೂ.ಗಳಷ್ಟು ಕಡಿಮೆಯಾಗಿದ್ದು, 85,178 ರೂ.ಗೆ ಮಾರಾಟವಾಗಿದೆ.

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಬುಧವಾರ ಚಿನ್ನದ ಬೆಳೆಯಲ್ಲಿ ಇಳಿಕೆ ಕಂಡುಬಂದಿದೆ. 10 ಗ್ರಾಂ ಚಿನ್ನಕ್ಕೆ 345 ರೂ. ಅಥವಾ ಶೇ 0.4 ರಷ್ಟು ಕಡಿಮೆಯಾಗಿದ್ದು, 85,178 ರೂ.ಗೆ ಮಾರಾಟವಾಗಿದೆ. ಈ ಅವಧಿಯಲ್ಲಿ ಒಟ್ಟು 16,401 ಕೆಜಿ ಚಿನ್ನ ಮಾರಾಟವಾಗಿದೆ.

ದುರ್ಬಲ ಜಾಗತಿಕ ಸೂಚ್ಯಂಕಗಳು ಚಿನ್ನದ ಬೆಲೆ ಕುಸಿತಕ್ಕೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ. ಜಾಗತಿಕವಾಗಿ, ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್‌ಗೆ ಚಿನ್ನದ ದರ ಶೇ 0.18 ರಷ್ಟು ಕಡಿಮೆಯಾಗಿ 2,892.76 ಡಾಲರ್‌ಗೆ ತಲುಪಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 7,940 ರೂಪಾಯಿಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್‌ನ ಅಪರಂಜಿ ಚಿನ್ನದ ಬೆಲೆ 8,667 ರೂಪಾಯಿ ಇದೆ. 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 6,497 ರೂಪಾಯಿ ಇದೆ.

gold rate
ಆಭರಣ ಕೊಳ್ಳುವವರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಬೆಳ್ಳಿ ಬೆಲೆಯಲ್ಲೂ ಇಳಿಕೆ

ಬೆಳ್ಳಿ ಬೆಲೆಯಲ್ಲೂ ಇಳಿಕೆ

ಬುಧವಾರ ಪ್ರತಿ ಕಿಲೋಗ್ರಾಂ ಬೆಳ್ಳಿಗೆ 189 ರೂ. ಕಡಿಮೆಯಾಗಿದ್ದು, 94,379 ರೂ.ಗೆ ಮಾರಾಟವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com