
ನವದೆಹಲಿ: ಅಧಿಕೃತ ಮಾಹಿತಿಯ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) 2000 ಮುಖ ಬೆಲೆಯ ಕರೆನ್ಸಿ ಹಿಂತೆಗೆದುಕೊಂಡು ಎರಡು ವರ್ಷ ಕಳೆದರೂ ಇನ್ನೂ 6,266 ಕೋಟಿ ರೂ. ಮೌಲ್ಯದ 2000 ರೂ. ನೋಟುಗಳು ಚಲಾವಣೆಯಲ್ಲಿವೆ.
ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್(RBI) 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.
ಚಲಾವಣೆಯಲ್ಲಿರುವ 2000 ರೂ. ನೋಟುಗಳ ಒಟ್ಟು ಮೌಲ್ಯವು, ಹಿಂತೆಗೆತವನ್ನು ಘೋಷಿಸಿದಾಗ ಮೇ 19, 2023 ರಂದು ವ್ಯವಹಾರದ ಮುಕ್ತಾಯದ ಸಮಯದಲ್ಲಿ 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. ಅದು ಏಪ್ರಿಲ್ 30, 2025 ರಂದು ವ್ಯವಹಾರದ ಮುಕ್ತಾಯದ ಸಮಯದಲ್ಲಿ 6,266 ಕೋಟಿ ರೂ.ಗಳಿಗೆ ಇಳಿದಿದೆ ಎಂದು RBI ಶುಕ್ರವಾರ ತಿಳಿಸಿದೆ.
"ಹೀಗಾಗಿ, ಮೇ 19, 2023 ರಂದು ಚಲಾವಣೆಯಲ್ಲಿರುವ 2000 ರೂ. ನೋಟುಗಳಲ್ಲಿ ಶೇಕಡಾ 98.24 ರಷ್ಟು ಹಿಂತಿರುಗಿವೆ" ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
Advertisement