Indian Stock Market: 3 ದಿನಗಳ ಸತತ ಏರಿಕೆ ಬಳಿಕ ಮೊದಲ ಬಾರಿಗೆ ಕುಸಿತವಾದ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರು!

ಕಳೆದ ಮೂರು ದಿನಗಳ ಕಾಲ ಸತತ ಏರಿಕೆ ಕಂಡಿದ್ದು, ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರು ಬೆಲೆ ಇಂದು ಕುಸಿತ ದಾಖಲಿಸಿದೆ.
Hindustan Copper ltd Share Price
ಹಿಂದೂಸ್ತಾನ್ ಕಾಪರ್ ಲಿಮಿಟೆಡ್
Updated on

ಮುಂಬೈ: ಸತತ ಮೂರು ದಿನಗಳ ಕಾಲ ಏರಿಕೆ ಕಂಡಿದ್ದ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರಿನ ಮೌಲ್ಯ ಮೊದಲ ಬಾರಿಗೆ ಗುರುವಾರ ಕುಸಿತ ದಾಖಲಿಸಿದೆ.

ಹೌದು.. ಕಳೆದ ಮೂರು ದಿನಗಳ ಕಾಲ ಸತತ ಏರಿಕೆ ಕಂಡಿದ್ದು, ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರು ಬೆಲೆ ಇಂದು ಕುಸಿತ ದಾಖಲಿಸಿದೆ. ಗುರುವಾರ ಮಾರುಕಟ್ಟೆ ಆರಂಭದಲ್ಲೇ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರು ಮೌಲ್ಯ ಶೇ. 4.68ರಷ್ಟು ಕುಸಿತವಾಗಿದ್ದು, 16.85 ರೂ ಬೆಲೆಯಷ್ಟು ಇಳಿಕೆಯಾಗಿ 342.80ರೂ ಗೆ ಕುಸಿತವಾಗಿದೆ.

NSE ನಿಫ್ಟಿ 50 ಸೂಚ್ಯಂಕದಲ್ಲಿ 0.66% ಮುಂಗಡಕ್ಕೆ ಹೋಲಿಸಿದರೆ, ಬೆಳಿಗ್ಗೆ 11:00 ರ ಹೊತ್ತಿಗೆ ಇದು 4.32% ಕುಸಿತದೊಂದಿಗೆ ಪ್ರತಿ 344.15 ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ.

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ನ ಏಕೀಕೃತ ನಿವ್ವಳ ಲಾಭವು ವರ್ಷಕ್ಕೆ ಹೋಲಿಸಿದರೆ ಶೇ. 84 ರಷ್ಟು ಹೆಚ್ಚಾಗಿ 186 ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿಯಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಹಿಂದೂಸ್ತಾನ್ ಕಾಪರ್‌ನ ಏಕೀಕೃತ ನಿವ್ವಳ ಲಾಭವು ರೂ. 102 ಕೋಟಿಗಳಷ್ಟಿತ್ತು ಎಂದು ವರದಿಯಾಗಿದೆ.

ತಾಮ್ರ ಉತ್ಪಾದಕ ಸಂಸ್ಥೆಯಾಗಿರುವ ಈ ಸಂಸ್ಛೆಯ ಒಟ್ಟು ಲಾಭವು ವರ್ಷಕ್ಕೆ ಶೇ. 38.6 ರಷ್ಟು ಹೆಚ್ಚಾಗಿ 718 ಕೋಟಿ ರೂ.ಗಳಿಗೆ ತಲುಪಿದ್ದು, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ರೂ. 518 ಕೋಟಿಗಳಷ್ಟಿತ್ತು ಎಂದು ಹಿಂದೂಸ್ತಾನ್ ಕಾಪರ್ ಮಂಗಳವಾರ ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

Hindustan Copper ltd Share Price
Indian Stock Market: ಸತತ 2ನೇ ದಿನವೂ ಏರಿಕೆ; 84 ಸಾವಿರ ದತ್ತ ಗಡಿ ದಾಟಿದ Sensex

ಹಿಂದೂಸ್ತಾನ್ ಕಾಪರ್‌ನ ವಿಲೀನಗೊಂಡ ಕಾರ್ಯಾಚರಣಾ ಲಾಭವು ವರ್ಷಕ್ಕೆ ಶೇ. 85.8 ರಷ್ಟು ಹೆಚ್ಚಾಗಿ 152 ಕೋಟಿಗಳಿಂದ ರೂ. 282 ಕೋಟಿಗಳಿಗೆ ತಲುಪಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಹಿಂದುಸ್ತಾನ್ ಕಾಪರ್ ಲಾಭವು 39.3% ರಷ್ಟು ಹೆಚ್ಚಾಗಿ ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 29.3% ರಷ್ಟಿತ್ತು.

ಸಂಸ್ಥೆಯ ಷೇರುಗಳು 12 ತಿಂಗಳಲ್ಲಿ 27.70% ಮತ್ತು ವರ್ಷದಿಂದ ಇಲ್ಲಿಯವರೆಗಿನ ಆಧಾರದ ಮೇಲೆ 38.8% ರಷ್ಟು ಏರಿಕೆ ಕಂಡಿವೆ. ದಿನದ ಇದುವರೆಗಿನ ಒಟ್ಟು ವಹಿವಾಟಿನ ಪ್ರಮಾಣವು 30 ದಿನಗಳ ಸರಾಸರಿಗಿಂತ 1.3 ಪಟ್ಟು ಹೆಚ್ಚಾಗಿದೆ. ಸಾಪೇಕ್ಷ ಶಕ್ತಿ ಸೂಚ್ಯಂಕ 54.29 ರಷ್ಟಿತ್ತು. ಅಕ್ಟೋಬರ್ 9 ರಂದು, ಹಿಂದೂಸ್ತಾನ್ ಕಾಪರ್ ಷೇರಿನ ಬೆಲೆ ಜೂನ್ 4, 2024 ರ ನಂತರದ ಅತ್ಯುನ್ನತ ಮಟ್ಟವನ್ನು ತಲುಪಿತು. ಆ ದಿನ ಷೇರಿನ ಬೆಲೆ 6.81% ರಷ್ಟು ಏರಿಕೆಯಾಗಿದೆ.

ತಾಮ್ರಕ್ಕೆ ಬೇಡಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಾಮ್ರದ ಬೆಲೆ ಏರಿಕೆಯು ಅಕ್ಟೋಬರ್‌ನಲ್ಲಿ ಷೇರು ಬೆಲೆಯಲ್ಲಿನ ಏರಿಕೆಗೆ ಪ್ರಮುಖ ಕಾರಣವಾಗಿದೆ. ಲಂಡನ್ ಮೆಟಲ್ ಎಕ್ಸ್‌ಚೇಂಜ್‌ನಲ್ಲಿ ತಾಮ್ರದ ಫ್ಯೂಚರ್‌ಗಳು ಪ್ರತಿ ಟನ್‌ಗೆ $11,200 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ.

ಹಿಂದೂಸ್ತಾನ್ ಕಾಪರ್ ಭಾರತದಲ್ಲಿ ಸಂಸ್ಕರಿಸಿದ ತಾಮ್ರದ ಏಕೈಕ ಉತ್ಪಾದಕ ಸಂಸ್ಥೆಯಾಗಿದ್ದು, ಭಾರತದಲ್ಲಿ ತಾಮ್ರ ಅದಿರಿನ ಎಲ್ಲಾ ಕಾರ್ಯಾಚರಣಾ ಗಣಿಗಾರಿಕೆ ಗುತ್ತಿಗೆಗಳನ್ನು ಈ ಕಂಪನಿಯು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com