ಆಸ್ತಿ ಪತ್ರ ಕಳೆದುಕೊಂಡಿದ್ದೀರಾ? ಚಿಂತೆ ಬಿಡಿ; ಡ್ಯುಪ್ಲಿಕೇಟ್ ಆಸ್ತಿ ಪತ್ರ ಪಡೆಯಲು ಹೀಗೆ ಮಾಡಿ

Property Rights: ನಿಮ್ಮ ಮನೆ ಅಥವಾ ನಿವೇಶನದ ಸೇಲ್ ಡೀಡ್ ಕಳೆದುಹೋಗಿದೆಯೇ? FIR ನಿಂದ ಇ-ಖಾತಾ ವರೆಗೆ: ಕರ್ನಾಟಕದಲ್ಲಿ ಡ್ಯುಪ್ಲಿಕೇಟ್ ಆಸ್ತಿ ಪತ್ರ ಪಡೆಯಲು ಈ ಕೆಲಸಗಳನ್ನು ಮಾಡಿ:
Property Documents
ಆಸ್ತಿ ಪತ್ರOnline Desk
Updated on

Property Rights: ನಿಮ್ಮ ಮನೆ, ನಿವೇಶನದ ಮೂಲ ಸೇಲ್ ಡೀಡ್, ಮದರ್ ಡೀಡ್ ಅಥವಾ ಖಾತಾ ಕಳೆದುಹೋಗಿದೆಯಾ? ಎಷ್ಟೋ ವರ್ಷ ಕಷ್ಟಪಟ್ಟು ಕೊಂಡ ಆಸ್ತಿಯ ಪತ್ರವೇ ಕಳೆದುಹೋದರೆ ಆಸ್ತಿಯೇ ಕೈತಪ್ಪಿ ಹೋಯ್ತು ಅಂತ ತುಂಬಾ ಜನ ಭಯಪಡುತ್ತಾರೆ. ಆದರೆ ಭಯಪಡುವ ಅಗತ್ಯವಿಲ್ಲ!

ಹೌದು, ಪತ್ರ ಕಳೆದುಹೋದ ಮಾತ್ರಕ್ಕೆ ಆಸ್ತಿ ಮೇಲಿನ ನಿಮ್ಮ ಕಾನೂನುಬದ್ಧ ಹಕ್ಕು ಯಾವತ್ತೂ ಹೋಗುವುದಿಲ್ಲ. ಸರ್ಕಾರದ ದಾಖಲೆಯಲ್ಲಿ ನಿಮ್ಮ ಹೆಸರು ಹಾಗೇ ಇರುತ್ತದೆ. ಸರಿಯಾದ ಹಂತದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಿದರೆ, ನೀವು ಕೆಲವೇ ದಿನಗಳಲ್ಲಿ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ಮೂಲ ದಾಖಲೆಗೆ ಸಮಾನವಾದ ಅಧಿಕೃತ ನಕಲು ಪ್ರತಿಯನ್ನು ಪಡೆಯಬಹುದು. ಆ ಕುರಿತ ವರದಿ ಇಲ್ಲಿದೆ:

ಹಂತ 1: ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ

ಆಸ್ತಿ ಪತ್ರ ಕಳೆದುಹೋದ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ FIR ಅಥವಾ ನಷ್ಟದ ದೂರು ದಾಖಲಿಸಿ. ಡಾಕ್ಯುಮೆಂಟ್ ಯಾವಾಗ ಎಲ್ಲಿ ಕಳೆದುಹೋಯಿತು ಎಂಬ ವಿವರ ನೀಡಬೇಕು. ಈ FIR ಪ್ರತಿ ಇಲ್ಲದೆ ಮುಂದಿನ ಯಾವುದೇ ಪ್ರಕ್ರಿಯೆ ಸಾಧ್ಯವಿಲ್ಲ. ಆನ್ ಲೈನ್ ನಲ್ಲಿಯೂ ಕೂಡ ಕಂಪ್ಲೇಂಟ್ ನೀಡಬಹುದು.

ಹಂತ 2: ಪತ್ರಿಕೆಯಲ್ಲಿ ಜಾಹೀರಾತು ನೀಡಿ

ಸ್ಥಳೀಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಯಲ್ಲಿ ಆಸ್ತಿ ಪತ್ರ ಕಳೆದುಹೋದ ಬಗ್ಗೆ ಜಾಹೀರಾತು ನೀಡಬೇಕು. ಆಸ್ತಿಯ ಸರ್ವೆ ನಂಬರ್, ಖಾತಾ ನಂಬರ್, ಮಾಲೀಕರ ಹೆಸರು ಮತ್ತು ಯಾರಿಗಾದರೂ ಸಿಕ್ಕರೆ ಸಂಪರ್ಕಿಸುವಂತೆ ತಿಳಿಸಬೇಕು. ಈ ಜಾಹೀರಾತಿನ ಕಟಿಂಗ್ ಅನ್ನು ಸಹ ಸಲ್ಲಿಸಬೇಕು.

ಹಂತ 3: ಸಬ್ ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿ

FIR ಪ್ರತಿ, ಪತ್ರಿಕೆ ಜಾಹೀರಾತು, ಆಧಾರ್ ಕಾರ್ಡ್, ಎರಡು ಪಾಸ್ಪೋರ್ಟ್ ಫೋಟೋ ಮತ್ತು ಅಫಿಡವಿಟ್ ನೊಂದಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಿ. ಆಸ್ತಿ ಯಾವ ಸಬ್ ರಿಜಿಸ್ಟ್ರಾರ್ ವ್ಯಾಪ್ತಿಯಲ್ಲಿದೆಯೋ ಅಲ್ಲಿಗೆ ಹೋಗಬೇಕು. ಸರ್ಕಾರ ನಿಗದಿಪಡಿಸಿದ ಶುಲ್ಕ ಕಟ್ಟಬೇಕು. ವೆರಿಫಿಕೇಷನ್ ನಂತರ ನಕಲು ಮಾರಾಟ ಪತ್ರ ನೀಡಲಾಗುತ್ತದೆ.

ಹಂತ 4: ಆನ್ ಲೈನ್ ನಲ್ಲಿ ಖಾತಾ ಮತ್ತು ಇ-ಖಾತಾ ಡೌನ್ ಲೋಡ್ ಮಾಡಿ

ಬಿಬಿಎಂಪಿ ಅಥವಾ ಪುರಸಭೆ ವ್ಯಾಪ್ತಿಯ ಆಸ್ತಿ ಇದ್ದರೆ ಸಕಾಲ ಅಥವಾ ಬಿಬಿಎಂಪಿ ವೆಬ್ ಸೈಟ್ ನಲ್ಲಿ ಇ-ಖಾತಾ ಮತ್ತು ಇ-ಆಸ್ತಿ ಪ್ರತಿ ಡೌನ್ ಲೋಡ್ ಮಾಡಬಹುದು. ಗ್ರಾಮೀಣ ಪ್ರದೇಶದ್ದಾಗಿದ್ದರೆ ಭೂಮಿ ಪೋರ್ಟಲ್ ನಲ್ಲಿ ಪಹಣಿ ಆರ್ ಟಿಸಿ ನಕಲು ಪಡೆಯಬಹುದು.

ಹಂತ 5: ಕಾನೂನು ಸಲಹೆ ಪಡೆಯಿರಿ

ಆಸ್ತಿ ಮೇಲೆ ಸಾಲ ಇದ್ದರೆ ಅಥವಾ ಕೋರ್ಟ್ ಕೇಸ್ ಇದ್ದರೆ ವಕೀಲರ ಮೂಲಕ ಸಾರ್ವಜನಿಕ ಸೂಚನೆ ಹೊರಡಿಸುವುದು ಒಳ್ಳೆಯದು. ಇದು ಭವಿಷ್ಯದಲ್ಲಿ ಯಾರಾದರೂ ನಕಲಿ ಡಾಕ್ಯುಮೆಂಟ್ ಬಳಸುವುದನ್ನು ತಡೆಯುತ್ತದೆ.

ಇದರೊಂದಿಗೆ, ಆಸ್ತಿ ಪತ್ರದ ಜೆರಾಕ್ಸ್ ಮತ್ತು ಸ್ಕ್ಯಾನ್ ಕಾಪಿಯನ್ನು ಗೂಗಲ್ ಡ್ರೈವ್ ಅಥವಾ ಇಮೇಲ್ ನಲ್ಲಿ ಸೇವ್ ಮಾಡಿ ಇಡಿ. ಒರಿಜಿನಲ್ ಅನ್ನು ಬ್ಯಾಂಕ್ ಲಾಕರ್ ನಲ್ಲಿ ಇಡುವುದು ಸೇಫ್.

Property Documents
1 ವರ್ಷಕ್ಕೆ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? 2026ರಲ್ಲಿ ಬೆಸ್ಟ್ FD ಬಡ್ಡಿ ನೀಡುವ ಬ್ಯಾಂಕ್‌ಗಳು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com