E20 ಪೆಟ್ರೋಲ್‌ ಆಯ್ತು, E20 ಡೀಸೆಲ್ ಕಥೆ ಏನು? ಎಥೆನಾಲ್ ಮಿಶ್ರಿತ ಡೀಸೆಲ್ ಬಗ್ಗೆ ಕೇಂದ್ರ ಸರ್ಕಾರದ ಬಿಗ್ ಅಪ್ಡೇಟ್

ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಎಥೆನಾಲ್ ಬಳಕೆಯನ್ನು ಉತ್ತೇಜಿಸುತ್ತಿದ್ದ ಸರ್ಕಾರಕ್ಕೆ ಈಗ ದೊಡ್ಡ ತಾಂತ್ರಿಕ ಸವಾಲೊಂದು ಎದುರಾಗಿದೆ. ಅದುವೇ, ಪೆಟ್ರೋಲ್‌ನಲ್ಲಿ ಎಥೆನಾಲ್ ಯಶಸ್ವಿಯಾಗಿ ಬೆರೆತು ವಾಹನಗಳು ಓಡುತ್ತಿದ್ದರೂ, ಡೀಸೆಲ್‌ ಜೊತೆ ಎಥೆನಾಲ್ ಸೇರಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
Petrol-Diesel
ಪೆಟ್ರೋಲ್-ಡೀಸೆಲ್Online Desk
Updated on

ನವದೆಹಲಿ: ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಎಥೆನಾಲ್ ಬಳಕೆಯನ್ನು ಉತ್ತೇಜಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಈಗ ದೊಡ್ಡ ತಾಂತ್ರಿಕ ಸವಾಲೊಂದು ಎದುರಾಗಿದೆ. ಅದುವೇ, ಪೆಟ್ರೋಲ್‌ನಲ್ಲಿ ಎಥೆನಾಲ್ ಯಶಸ್ವಿಯಾಗಿ ಬೆರೆತು ವಾಹನಗಳು ಓಡುತ್ತಿದ್ದರೂ, ಡೀಸೆಲ್‌ ಜೊತೆ ಎಥೆನಾಲ್ ಸೇರಿಸುವ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಎಥೆನಾಲ್ ಮಿಶ್ರಿತ ಡೀಸೆಲ್ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಸಂಸತ್ತಿನಲ್ಲಿ ತಿಳಿಸಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವ ಸುರೇಶ್ ಗೋಪಿ ಅವರು, ತೈಲ ಮಾರಾಟ ಕಂಪನಿಗಳು ಮತ್ತು ವಾಹನ ತಯಾರಕರು ನಡೆಸಿದ ವೈಜ್ಞಾನಿಕ ಮೌಲ್ಯಮಾಪನದಲ್ಲಿ ಎಥೆನಾಲ್ ಮಿಶ್ರಿತ ಡೀಸೆಲ್ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದರು.

ಮುಂದುವರೆದು, ಡೀಸೆಲ್‌ಗೆ ಎಥೆನಾಲ್ ಸೇರಿಸಿದಾಗ ಅದರ ಫ್ಲ್ಯಾಶ್ ಪಾಯಿಂಟ್ ಗಣನೀಯವಾಗಿ ಕುಸಿತ ಕಂಡಿದೆ. ಇನ್ನು, ಈ ಫ್ಲ್ಯಾಶ್ ಪಾಯಿಂಟ್ ಅಂದ್ರೆ, ಇಂಧನವು ಸಣ್ಣ ಜ್ವಾಲೆಯ ಸಂಪರ್ಕಕ್ಕೆ ಬಂದ ತಕ್ಷಣ ಆವಿಯಾಗಿ ಉರಿಯಲು ಆರಂಭಿಸುವ ಕನಿಷ್ಠ ತಾಪಮಾನವನ್ನು ಫ್ಲ್ಯಾಶ್ ಪಾಯಿಂಟ್ ಎನ್ನಲಾಗುತ್ತದೆ. ಇದು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಆದರೆ, ಡೀಸೆಲ್‌ನ ನಿಗದಿತ ಫ್ಲ್ಯಾಶ್ ಪಾಯಿಂಟ್ ನಿಯಮಗಳನ್ನು ಇದು ತಲುಪದ ಕಾರಣ, ಇಂಧನವನ್ನು ಸಂಗ್ರಹಿಸುವುದು ಮತ್ತು ವಾಹನಗಳಲ್ಲಿ ಬಳಸುವುದು ಸುರಕ್ಷಿತವಲ್ಲ ಎಂದು ವರದಿ ಹೇಳಿದೆ. ಹಾಗಾಗಿಯೇ, ಡೀಸೆಲ್‌ನಲ್ಲಿ ಐಸೋಬ್ಯುಟನಾಲ್ ಮಿಶ್ರಣ ಮಾಡುವ ಯಾವುದೇ ಯೋಜನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ.

Petrol-Diesel
ಡಾರ್ಕ್‌ ಪ್ಯಾಟರ್ನ್‌ ವಿರುದ್ಧ ಸಮರ: ಬುಕ್ ಮೈ ಶೋ ಸೇರಿದಂತೆ 9 ಡಿಜಿಟಲ್‌ ವೇದಿಕೆಗಳ ವಿರುದ್ಧ CCPA ಕಟ್ಟುನಿಟ್ಟಿನ ಕ್ರಮ, ₹20 ಲಕ್ಷ ದಂಡ!

ಪೆಟ್ರೋಲ್ ಕುರಿತು ಸರ್ಕಾರದ ಬಿಗ್ ಅಪ್ಡೇಟ್

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಪ್ರಸ್ತುತ ಇರುವ ಶೇ. 20 ರಷ್ಟು (E20) ಮಿಗಿಲಾಗಿ ಹೆಚ್ಚಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ ಎಂದ ಸರ್ಕಾರ, ವಾಹನ ತಯಾರಕರು, ತೈಲ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ವಿವರವಾದ ತಾಂತ್ರಿಕ ಅಧ್ಯಯನ ನಡೆಸಿದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ. ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ E-20 ಪೆಟ್ರೋಲ್ ವಾಹನಗಳಿಗೆ ಸಂಪೂರ್ಣ ಸುರಕ್ಷಿತವಾಗಿದ್ದು, ವಿಮೆಯ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸರ್ಕಾರದ ಮುಂದಿನ ಪ್ಲಾನ್: ಅಡುಗೆ ಇಂಧನವಾಗಿ ಎಥೆನಾಲ್!

ಡೀಸೆಲ್ ಯೋಜನೆಯಲ್ಲಿ ಹಿನ್ನಡೆಯಾಗಿದ್ದರೂ, ದೇಶದಲ್ಲಿ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಎಥೆನಾಲ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಎಥೆನಾಲ್ ಅನ್ನು ಸ್ವಚ್ಛ ಅಡುಗೆ ಇಂಧನವಾಗಿ ಬಳಸುವ ಸಾಧ್ಯತೆಗಳ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಇದು ಎಲ್‌ಪಿಜಿ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com