ಮಾವನ ಆಸ್ತಿ ಮೇಲೆ ಅಳಿಯನಿಗೆ ಹಕ್ಕಿದ್ಯಾ? ಕಾನೂನು ಹೇಳೋದು ಏನು?

ಮದುವೆಯಾದ ನಂತರ ಗಂಡನ ಮನೆಗೆ ಹೆಂಡತಿ ಸೊಸೆಯಾಗಿ ಹೋಗೋದು ಮಾಮೂಲಿ. ಈ ವೇಳೆ ಕೆಲವು ಸಂದರ್ಭದಲ್ಲಿ ಸೊಸೆಗೆ ಮಾವನ ಆಸ್ತಿಯಲ್ಲಿ ಹಕ್ಕಿದೆ. ಆದರೆ, ಮನೆ ಅಳಿಯನಾಗಿ ಹೋದವನಿಗೆ ಮಾವನ ಆಸ್ತಿಯಲ್ಲಿ ಹಕ್ಕು ಇದ್ಯಾ? ಇಲ್ಲಿದೆ ಆ ಕುರಿತ ವರದಿ:
Property Rights
ಮಾವನ ಆಸ್ತಿ ಮೇಲೆ ಅಳಿಯನಿಗೆ ಹಕ್ಕಿದ್ಯಾ?
Updated on: 

ಮದುವೆಯ ನಂತರ ಹೆಣ್ಣುಮಕ್ಕಳು ಗಂಡನ ಮನೆ ಸೇರುವುದು ನಮ್ಮ ಸಮಾಜದ ರೂಢಿ. ಈ ಸಂದರ್ಭದಲ್ಲಿ ಕೆಲವು ನಿಯಮಗಳ ಅಡಿಯಲ್ಲಿ ಸೊಸೆಗೆ ಮಾವನ ಆಸ್ತಿಯಲ್ಲಿ ಹಕ್ಕು ಸಿಗುವ ಸಾಧ್ಯತೆಗಳಿರುತ್ತವೆ.! ಆದರೆ ಮನೆ ಅಳಿಯನಾಗಿ ಮಾವನ ಮನೆಯಲ್ಲೇ ನೆಲೆಸಿದರೆ ಆತನಿಗೆ ಮಾವನ ಆಸ್ತಿಯ ಮೇಲೆ ಹಕ್ಕು ಸಿಗುತ್ತಾ? ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಮತ್ತು ನ್ಯಾಯಾಲಯಗಳ ಮಹತ್ವದ ತೀರ್ಪುಗಳು ಯಾವ ಸ್ಪಷ್ಟನೆ ನೀಡಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನೆ ಅಳಿಯನಿಗೆ ಮಾವನ ಆಸ್ತಿಯಲ್ಲಿ ಹಕ್ಕು ಇದ್ಯಾ?

ಮನೆ ಅಳಿಯನಾಗಿ ಹೋದ ಮಾತ್ರಕ್ಕೆ ಮಾವನ ಆಸ್ತಿಯ ಮೇಲೆ ಅಳಿಯನಿಗೆ ಯಾವುದೇ ರೀತಿಯ ಕಾನೂನಾತ್ಮಕ ಹಕ್ಕು ಇರುವುದಿಲ್ಲ ಎಂದು ದೇಶದ ವಿವಿಧ ಉನ್ನತ ನ್ಯಾಯಾಲಯಗಳು (ಹೈಕೋರ್ಟ್‌ಗಳು) ಮಹತ್ವದ ತೀರ್ಪು ನೀಡಿವೆ. ಈ ಮೂಲಕ ಮಗಳ ಗಂಡ ಎಂಬ ಕಾರಣಕ್ಕೋ ಅಥವಾ ಮಾವನ ಮನೆಯಲ್ಲೇ 'ಮನೆ ಅಳಿಯ'ನಾಗಿ ವಾಸವಿದ್ದಾನೆ ಎಂಬ ಕಾರಣಕ್ಕೋ ಆಸ್ತಿಯಲ್ಲಿ ಪಾಲು ಕೇಳಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಅಳಿಯ ಕಾನೂನುಬದ್ಧ ವಾರಸುದಾರನಲ್ಲ!

ಭಾರತೀಯ ಉತ್ತರಾಧಿಕಾರ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಯ ಆಸ್ತಿಗೆ ಆತನ ಪತ್ನಿ, ಮಕ್ಕಳು (ಮಗ ಮತ್ತು ಮಗಳು) ಹಾಗೂ ತಾಯಿ ಮಾತ್ರ ನೇರ ವಾರಸುದಾರರಾಗುತ್ತಾರೆ. ಇದರಲ್ಲಿ ಅಳಿಯನಿಗೆ ಸ್ಥಾನವಿಲ್ಲ. ಅಳಿಯನನ್ನು ಕಾನೂನಿನ ಪ್ರಕಾರ ಕುಟುಂಬದ ಮಗ ಅಥವಾ ಮಗು ಎಂದು ಪರಿಗಣಿಸಲಾಗುವುದಿಲ್ಲ.

ಏನಿದು ಪ್ರಕರಣ?

ಮಧ್ಯಪ್ರದೇಶದ ಭೋಪಾಲ್ ಮೂಲದ ದಿಲೀಪ್ ಮರ್ಮತ್ ಎಂಬುವವರು ತಮ್ಮ ಪತ್ನಿಯ ಮರಣದ ನಂತರವೂ ಮಾವ ನಾರಾಯಣ ವರ್ಮಾ (78 ವರ್ಷ) ಅವರ ಮನೆಯಲ್ಲಿ ವಾಸವಾಗಿದ್ದರು. ಮಾವನಿಗೆ ಆದಾಯದ ಅವಶ್ಯಕತೆ ಇದ್ದು, ಅವರು ಮನೆ ಖಾಲಿ ಮಾಡಲು ಕೇಳಿದಾಗ ಅಳಿಯ ನಿರಾಕರಿಸಿದ್ದನು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, 'ಪೋಷಕರು ಮತ್ತು ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ 2007' ರ ಅಡಿಯಲ್ಲಿ ಅಳಿಯನನ್ನು 30 ದಿನಗಳ ಒಳಗೆ ಮನೆ ಖಾಲಿ ಮಾಡುವಂತೆ ಖಡಕ್ ಆದೇಶ ನೀಡಿತ್ತು.

Property Rights
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಅಡ್ವಾನ್ಸ್ ಕೊಡೋ ಮುನ್ನ ಈ ವಿಷಯ ಗೊತ್ತಿರಲಿ; ಇಲ್ಲಾಂದ್ರೆ ನಷ್ಟ ಖಚಿತ!

ಈ ಹಿಂದೆ ಡೇವಿಸ್ ವರ್ಸಸ್ ಥಾಮಸ್ ಪ್ರಕರಣದಲ್ಲಿಯೂ, ಕೇರಳ ಹೈಕೋರ್ಟ್, "ನಾನು ಮಾವನ ಮನೆ ಕಟ್ಟಲು ಹಣ ಕೊಟ್ಟಿದ್ದೇನೆ ಅಥವಾ ರಿಪೇರಿ ಮಾಡಿಸಿದ್ದೇನೆ, ಹಾಗಾಗಿ ಆಸ್ತಿ ನನ್ನದು" ಎಂದು ಅಳಿಯ ವಾದಿಸುವಂತಿಲ್ಲ. ಸೂಕ್ತ ಆಸ್ತಿ ವರ್ಗಾವಣೆ ದಾಖಲೆಗಳಿಲ್ಲದಿದ್ದರೆ (Property Documents), ಅಳಿಯ ಮಾಡಿದ ಖರ್ಚಿಗೆ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಹಾಗಾದರೆ, ಅಳಿಯನಿಗೆ ಆಸ್ತಿ ಸಿಗಲು ಇರುವ ಏಕೈಕ ದಾರಿ ಯಾವುದು?

ಅಳಿಯನಿಗೆ ನೇರವಾಗಿ ಮಾವನ ಆಸ್ತಿ ಸಿಗದಿದ್ದರೂ, ಕೆಲವು ಸಂದರ್ಭಗಳಲ್ಲಿ ಮಾತ್ರ ಆಸ್ತಿ ಆತನ ಕೈ ಸೇರಬಹುದು. ಅವು,

  • ಮಗಳ ಮೂಲಕ: ಮಾವನ ಆಸ್ತಿಯಲ್ಲಿ ಮಗಳಿಗೆ (ಅಳಿಯನ ಪತ್ನಿಗೆ) ಸಮಾನ ಹಕ್ಕಿರುತ್ತದೆ. ಅಪ್ಪನಿಂದ ಮಗಳಿಗೆ ಬಂದ ಆಸ್ತಿಯ ಮೇಲೆ, ಆಕೆಯ ಮರಣದ ನಂತರ ಆಕೆಯ ಪತಿಯಾಗಿ ಅಳಿಯ ಹಕ್ಕು ಹೊಂದಬಹುದು.

  • ಮಾವನೇ ಉಯಿಲು ಬರೆದರೆ: ಮಾವನು ತನ್ನ ಸ್ವಯಾರ್ಜಿತ ಆಸ್ತಿಯನ್ನು (ತಾನೇ ಸಂಪಾದಿಸಿದ ಆಸ್ತಿ) ತನ್ನ ಇಷ್ಟದಂತೆ ಯಾರಿಗೆ ಬೇಕಾದರೂ ಬರೆಯಬಹುದು. ಒಂದು ವೇಳೆ ಮಾವನೇ ಖುಷಿಯಿಂದ ಅಳಿಯನ ಹೆಸರಿಗೆ 'ಉಯಿಲು' ಅಥವಾ 'ದಾನ ಪತ್ರ' ಬರೆದುಕೊಟ್ಟರೆ ಮಾತ್ರ ಅಳಿಯನಿಗೆ ಆಸ್ತಿ ಸಿಗುತ್ತದೆ.

Property Rights
Home Loan ತಗೊಂಡು ಮನೆ ಕಟ್ಟೋ ಮುನ್ನ ಈ ಸೂತ್ರ ಅನುಸರಿಸಿ; ಲಕ್ಷಾಂತರ ರೂಪಾಯಿ ಸೇವ್ ಆಗೋದು ಪಕ್ಕಾ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com