ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಹಾಕ್ತಿದ್ದೀರಾ? IT ನೋಟೀಸ್ ಬರಬಹುದು ಎಚ್ಚರ! ಹಾಗಾದ್ರೆ, ನಿಮ್ಮ ಸೇವಿಂಗ್ಸ್ ಅಕೌಂಟ್‌ಗೆ ಎಷ್ಟು ಹಣ ಹಾಕಬಹುದು?

ನಿಮ್ಮ ಸೇವಿಂಗ್ಸ್ ಅಕೌಂಟ್‌ಗೆ ಎಷ್ಟು ಹಣ ಹಾಕಬಹುದು? ಮಿತಿ ಮೀರಿದರೆ ಐಟಿ ಇಲಾಖೆಯಿಂದ ಬರಲಿದೆ ನೋಟಿಸ್! ಹಾಗಾದ್ರೆ, ಒಂದು ವರ್ಷದಲ್ಲಿ ಖಾತೆಗೆ ಎಷ್ಟು ಹಣ ಹಾಕಬಹುದು? ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ಮುನ್ನ ಈ ನಿಯಮ ತಿಳಿಯಿರಿ:
money
ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಹಾಕ್ತಿದ್ದೀರಾ?
Updated on

Bank Cash Deposit Limit: ನಿಮ್ಮ ಬ್ಯಾಂಕ್ ಖಾತೆಗೆ ನೀವು ಯಾವಾಗ ಬೇಕಾದರೂ ಎಷ್ಟು ಬೇಕಾದರೂ ಹಣ ಜಮೆ ಮಾಡಬಹುದು ಎಂದು ಭಾವಿಸಿದ್ದರೆ ಅದು ತಪ್ಪು. ಸದ್ಯದ ದಿನಗಳಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚುತ್ತಿದ್ದರೂ ನಗದು ರೂಪದಲ್ಲಿ ಹಣವನ್ನು ಖಾತೆಗೆ ಹಾಕುವವರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ನಿಮ್ಮದೇ ಉಳಿತಾಯ ಖಾತೆಗೆ ನೀವು ಜಮೆ ಮಾಡುವ ನಗದು ಹಣಕ್ಕೆ ಒಂದು ಕಟ್ಟುನಿಟ್ಟಾದ ಮಿತಿ ಇದೆ. ಈ ಮಿತಿಯನ್ನು ನೀವು ದಾಟಿದರೆ ನಿಮ್ಮ ಖಾತೆಯ ಮೇಲೆ ಆದಾಯ ತೆರಿಗೆ ಇಲಾಖೆಯ ಕಣ್ಣು ಬೀಳಲಿದ್ದು, ಭಾರಿ ಸಂಕಷ್ಟ ಎದುರಾಗುವ ಸಾಧ್ಯತೆ ಇರುತ್ತದೆ. ಆ ಕುರಿತ ವರದಿ ಇಲ್ಲಿದೆ:

ಹಾಗಾದ್ರೆ, 1 ವರ್ಷದಲ್ಲಿ ಉಳಿತಾಯ ಖಾತೆಗೆ ಎಷ್ಟು ಹಣ ಹಾಕಬಹುದು?

ಒಂದು ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1 ರಿಂದ ಮಾರ್ಚ್ 31) ನಿಮ್ಮ ಉಳಿತಾಯ ಖಾತೆಗೆ ಯಾವುದೇ ದಂಡ ಅಥವಾ ಆದಾಯ ತೆರಿಗೆ ಇಲಾಖೆಯ ಪರಿಶೀಲನೆ ಇಲ್ಲದೆ ಜಮೆ ಮಾಡಬಹುದಾದ ಗರಿಷ್ಠ ನಗದು ಮಿತಿ ₹10 ಲಕ್ಷ ರೂಪಾಯಿಗಳು.

ಅದರಲ್ಲೂ, ನಿಮ್ಮ ಖಾತೆಗೆ ಪ್ಯಾನ್ (PAN) ಲಿಂಕ್ ಆಗದಿದ್ದರೆ, ₹50,000 ಕ್ಕಿಂತ ಹೆಚ್ಚಿನ ಒಂದೇ ವಹಿವಾಟಿಗೆ ಪ್ಯಾನ್ ಕಾರ್ಡ್ ವಿವರ ನೀಡುವುದು ಕಡ್ಡಾಯವಾಗಿದೆ.

money
UPI ಪೇಮೆಂಟ್ ಫೇಲ್ ಆಗಿ ಹಣ ಕಟ್ ಆಯ್ತಾ? ಚಿಂತೆ ಬಿಡಿ, ಹಣ ವಾಪಸ್ ಪಡೆಯೋ ಸುಲಭ ದಾರಿ ಇಲ್ಲಿದೆ!

ಮಿತಿ ಮೀರಿದ್ರೆ ಏನಾಗುತ್ತೆ?

ನೀವು ₹10 ಲಕ್ಷದ ಮಿತಿಯನ್ನು ಮೀರಿದ ತಕ್ಷಣ ನಿಮ್ಮ ಹಣ ಮುಟ್ಟುಗೋಲಾಗುವುದಿಲ್ಲ ಅಥವಾ ನೇರವಾಗಿ ದಂಡ ವಿಧಿಸುವುದಿಲ್ಲ. ಆದರೆ ಕೆಳಗಿನ ಪ್ರಕ್ರಿಯೆಗಳು ನಡೆಯುತ್ತವೆ:

  • ಆದಾಯ ತೆರಿಗೆ ಇಲಾಖೆಗೆ ವರದಿ: ಬ್ಯಾಂಕ್‌ಗಳು ಈ ಹೆಚ್ಚಿನ ಮೌಲ್ಯದ ವಹಿವಾಟಿನ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸುತ್ತವೆ.

  • ಐಟಿ ನೋಟಿಸ್ ಬರುವ ಸಾಧ್ಯತೆ: ನಿಮ್ಮ ವಾರ್ಷಿಕ ಆದಾಯದ ರಿಟರ್ನ್ಸ್ ಮತ್ತು ನಿಮ್ಮ ಖಾತೆಗೆ ಜಮೆಯಾದ ನಗದು ಮೊತ್ತ ತಾಳೆಯಾಗದಿದ್ದರೆ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ನೋಟಿಸ್ ಬರಬಹುದು.

  • ಹಣದ ಮೂಲದ ಪುರಾವೆ: ನೋಟಿಸ್ ಬಂದಾಗ, ನೀವು ಜಮೆ ಮಾಡಿದ ಹಣ ಎಲ್ಲಿಂದ ಬಂತು (ಉದಾಹರಣೆಗೆ: ಆಸ್ತಿ ಮಾರಾಟ, ಕೃಷಿ ಆದಾಯ, ಅಥವಾ ಉಡುಗೊರೆ) ಎಂಬುದಕ್ಕೆ ಸೂಕ್ತವಾದ ದಾಖಲೆ ಅಥವಾ ಪುರಾವೆಗಳನ್ನು ಒದಗಿಸಬೇಕಾಗುತ್ತದೆ.

  • ದಂಡದ ಭೀತಿ: ಒಂದು ವೇಳೆ ನೀವು ಆ ಹಣಕ್ಕೆ ಸರಿಯಾದ ದಾಖಲೆ ನೀಡಲು ವಿಫಲರಾದರೆ ಅಥವಾ ಅದು ಕಪ್ಪು ಹಣ ಎಂದು ಸಾಬೀತಾದರೆ, ತೆರಿಗೆಯೊಂದಿಗೆ ಭಾರಿ ಮೊತ್ತದ ದಂಡವನ್ನು ಕಟ್ಟಬೇಕಾಗಬಹುದು.

money you can deposit in bank account and Income Tax notice

ಗಮನಿಸಿ: ಆನ್‌ಲೈನ್ ಬ್ಯಾಂಕಿಂಗ್ (NEFT, IMPS, UPI) ಮೂಲಕ ಹಣ ವರ್ಗಾವಣೆಯಾದರೆ ಈ ₹10 ಲಕ್ಷದ ನಗದು ಮಿತಿ ಅನ್ವಯಿಸುವುದಿಲ್ಲ. ಆದರೆ ನಿಮ್ಮ ಒಟ್ಟು ವಾರ್ಷಿಕ ಆದಾಯಕ್ಕೆ ತಕ್ಕಂತೆ ನೀವು ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

money
UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com