

ಸಾಲದ ಹೊರೆಯಿಂದ ಬಳಲುತ್ತಿರುವ ವೊಡಾಫೋನ್ ಐಡಿಯಾ (VIL) ಗೆ ಪ್ರಮುಖ ಪರಿಹಾರವಾಗಿ, ಕೇಂದ್ರ ಸಚಿವ ಸಂಪುಟ ಕಂಪನಿಯ ಹೊಂದಾಣಿಕೆಯ ಒಟ್ಟು ಆದಾಯ (AGR) ಬಾಕಿಗಳ ಪುನಾರಚನೆಗೆ ಅನುಮೋದನೆ ನೀಡಿದೆ. ಈ ನಿರ್ಧಾರವು ಸರಿಸುಮಾರು 18,000 ಕೋಟಿ ರೂಪಾಯಿ ನಿರ್ಣಾಯಕ ಪಾವತಿಯ ಮೇಲೆ ಐದು ವರ್ಷಗಳ ಹೆಚ್ಚುವರಿ ಅವಧಿ ನೀಡುತ್ತದೆ. ಆರಂಭದಲ್ಲಿ ಮಾರ್ಚ್ 31 ರೊಳಗೆ ಪಾವತಿ ಮಾಡಬೇಕಾಗಿತ್ತು.
ವಿನಾಯ್ತಿ ಪ್ರಕಾರ, ಹಣಕಾಸು ವರ್ಷ 2017-18 ಮತ್ತು ಹಣಕಾಸು ವರ್ಷ 2018-19 ಕ್ಕೆ ಸಂಬಂಧಿಸಿದ ಬಾಕಿಗಳನ್ನು ಈಗ ಹಣಕಾಸು ವರ್ಷ 2025-26 ಮತ್ತು ಹಣಕಾಸು ವರ್ಷ 2030-31 ರ ನಡುವೆ 5 ವರ್ಷಗಳ ಅವಧಿಯಲ್ಲಿ ಪಾವತಿಸಬೇಕಾಗುತ್ತದೆ. ಈ ವಿಸ್ತೃತ ಅವಧಿಯಲ್ಲಿ ಯಾವುದೇ ಹೆಚ್ಚುವರಿ ಶುಲ್ಕಗಳು ಅಥವಾ ದಂಡಗಳನ್ನು ವಿಧಿಸಲಾಗುವುದಿಲ್ಲ ಎಂದು ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್( The New Indian Express) ಗೆ ತಿಳಿದುಬಂದಿದೆ.
ಇದಲ್ಲದೆ, ನಿನ್ನೆ ಡಿಸೆಂಬರ್ 31ರ ಹೊತ್ತಿಗೆ ವಿಐಎಲ್‌ನ ಒಟ್ಟು ಎಜಿಆರ್ ಬಾಕಿಗಳನ್ನು 87,695 ಕೋಟಿ ರೂಪಾಯಿಗೆ ಸ್ಥಗಿತಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ. ಈ ಬೃಹತ್ ಮೊತ್ತವನ್ನು 2031-32ರ ಹಣಕಾಸು ವರ್ಷದಲ್ಲಿ ಪ್ರಾರಂಭವಾಗಿ 2040-41ರ ಹಣಕಾಸು ವರ್ಷದಲ್ಲಿ ಕೊನೆಗೊಳ್ಳುವ 10 ವರ್ಷಗಳ ಅವಧಿಯಲ್ಲಿ ಪಾವತಿಗಾಗಿ ಮರು ನಿಗದಿಪಡಿಸಲಾಗಿದೆ.
ಸರ್ಕಾರದ ಈ ಮಧ್ಯೆಪ್ರವೇಶಿಸುವಿಕೆ ಕಳೆದ ಅಕ್ಟೋಬರ್ 27 ಮತ್ತು ನವೆಂಬರ್ 3 ರ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಅನುಸರಿಸುತ್ತದೆ. ಆ ತೀರ್ಪುಗಳಲ್ಲಿ, ಕೇಂದ್ರ ಸರ್ಕಾರವು ಬಾಕಿಗಳನ್ನು ಮರುಪರಿಶೀಲಿಸಲು ಯಾವುದೇ ಕಾನೂನು ಅಡಚಣೆಯಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ವಿಷಯವನ್ನು ಸರ್ಕಾರದ ನೀತಿ ಕ್ಷೇತ್ರದೊಳಗೆ ಇರಿಸಿದೆ. ಟೆಲ್ಕೊದಲ್ಲಿ ಸರ್ಕಾರವು ಹೊಂದಿರುವ ಶೇಕಡಾ 49ರಷ್ಟು ಪಾಲನ್ನು ಮತ್ತು ಅದರ 20 ಕೋಟಿ ಮೊಬೈಲ್ ಗ್ರಾಹಕರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿ ತೋರಿಸಿದೆ.
ವೊಡಾಫೋನ್ ಐಡಿಯಾ ಹೆಚ್ಚುವರಿ 9,450 ಕೋಟಿ ರೂಪಾಯಿ ಬಡ್ಡಿ ಮತ್ತು ಬಾಕಿಗಳ ವಿವಾದಿತ ಘಟಕಗಳಿಗೆ ದಂಡದ ಮೇಲಿನ ಮನ್ನಾವನ್ನು ಕೋರುತ್ತಿರುವಾಗ ದೂರಸಂಪರ್ಕ ಇಲಾಖೆಯ (DoT) ಬೇಡಿಕೆಯನ್ನು ಪ್ರಶ್ನಿಸುತ್ತಲೇ ಇರುವುದರಿಂದ ಪರಿಹಾರ ಪ್ಯಾಕೇಜ್ ಬಂದಿದೆ.
ಅಂತಿಮ ಪಾವತಿಯಲ್ಲಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲು, 2020 ರ ಕಡಿತ ಪರಿಶೀಲನಾ ಮಾರ್ಗಸೂಚಿಗಳು ಮತ್ತು ಲೆಕ್ಕಪರಿಶೋಧನಾ ವರದಿಗಳ ಆಧಾರದ ಮೇಲೆ ಸ್ಥಗಿತಗೊಂಡ ಬಾಕಿಗಳನ್ನು ದೂರಸಂಪರ್ಕ ಇಲಾಖೆ ಮರುಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಸರ್ಕಾರ ನೇಮಿಸಿದ ಸಮಿತಿಯು ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ.
Advertisement