

ಬೆಂಗಳೂರು: ಟೆಸ್ಲಾ ಕಾರು ಪ್ರಿಯರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ವಿದ್ಯುತ್ ಚಾಲಿತ ಕಾರು ತಯಾರಿಕಾ ಕಂಪನಿ 'ಟೆಸ್ಲಾ' ನಮ್ಮ ಬೆಂಗಳೂರಿನಲ್ಲಿ ಶೋ ರೂಂ ಓಪನ್ ಮಾಡುತ್ತಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶೀಘ್ರದಲ್ಲೇ ನಮ್ಮ ಬೆಂಗಳೂರಿನಲ್ಲಿ ಕಾಣುತ್ತೇನೆ ಎಂದು ಬರೆದಿದೆ.
ಟೆಸ್ಲಾ ಭಾರತದಲ್ಲಿ ತೆರೆಯಲಿರುವ ನಾಲ್ಕನೇ ಶೋ ರೂಂ ಆಗಿದೆ. ಈಗಾಗಲೇ ದೆಹಲಿ, ಮುಂಬೈ ಹಾಗೂ ಗುರುಗ್ರಾಮದಲ್ಲಿ ಟೆಸ್ಲಾ ಶೋ ರೂಂ ಇವೆ.
ಗುರುಗ್ರಾಮದ ಡಿಎಲ್ ಎಫ್ ಹಾರಿಜನ್ ಸೆಂಟರ್ ನಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ ಗೆ ಚಾಲನೆ ನೀಡಿರುವುದಾಗಿ 2025ರ ಡಿಸೆಂಬರ್ ನಲ್ಲಿ ಟೆಸ್ಲಾ ತಿಳಿಸಿತ್ತು.
ಇದು ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಬಲಪಡಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ಇದು ಗ್ರಾಹಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಎಂದು ಹೇಳಿಕೆ ನೀಡಿತ್ತು.
Advertisement