

ಮುಂಬೈ: ಇರಾನ್ ಯುದ್ಧದ ಪರಿಣಾಮ ಮತ್ತು ಕಚ್ಚಾ ತೈಲ ದರ ಏರಿಕೆ ಬೆನ್ನಲ್ಲೇ ಆಗಸದತ್ತ ಮುಖ ಮಾಡಿದ್ದ ಚಿನ್ನದ ದರ ಇಂದು ಭಾರಿ ಕುಸಿತ ಕಂಡಿದ್ದು, ಒಂದೇ ದಿನ ಬರೊಬ್ಬರಿ 2900ಕ್ಕೂ ಅಧಿಕ ಇಳಿಕೆಯಾಗಿದೆ.
ಹೌದು.. ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಕುಸಿತ ಕಂಡುಬಂದಿದ್ದು, ಹಳದಿ ಲೋಹದ ನೂತನ ದರ ಪಟ್ಟಿಗಳು ಇಂತಿವೆ.
ಚಿನ್ನದ ದರ ಇಂದು ಕೂಡ ಕೊಂಚ ಇಳಿಕೆಯಾಗಿದ್ದು, ಶನಿವಾರ ಕೆಜಿ ಚಿನ್ನದ ಬೆಲೆಯಲ್ಲಿ ಬರೊಬ್ಬರಿ 2940 ರೂ ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 275 ರೂ ಕುಸಿತವಾಗಿದ್ದು, 24 ಕ್ಯಾರಟ್ ಬಂಗಾರದ ಧಾರಣೆ ಗ್ರಾಂಗೆ 294ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 13,380 ಕ್ಕೆ ಕುಸಿತವಾಗಿದ್ದು, ಅಂತೆಯೇ 22 ಕ್ಯಾರೆಟ್ ನ ಚಿನ್ನದ ದರ 10 ಗ್ರಾಂಗೆ 1,33,800ಕ್ಕೆ ಇಳಿಕೆಯಾಗಿದೆ.
ಅಂತೆಯೇ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 14,597 ರೂ ಕುಸಿತವಾಗಿದ್ದು, 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,45,970 ರೂ ಗೆ ಇಳಿಕೆಯಾಗಿದೆ.
18 ಕ್ಯಾರೆಟ್ ಚಿನ್ನದ ದರ ಕೂಡ ಪ್ರತೀ ಗ್ರಾಂಗೆ 225ರೂ ನಷ್ಟು ಕುಸಿದು ಗ್ರಾಂ ಗೆ 10,948 ಗಳಿಗೆ ಇಳಿಕೆಯಾಗಿದ್ದು, ಪ್ರತೀ 10 ಗ್ರಾಂಗೆ 1,09,480ರೂಗೆ ಕುಸಿತವಾಗಿದೆ.
ಬೆಳ್ಳಿ ದರದಲ್ಲೂ ಅಲ್ಪ ಇಳಿಕೆ
ಇನ್ನು ಬೆಳ್ಳಿಯ ಬೆಲೆ ಗ್ರಾಂಗೆ ಅಲ್ಪ ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 10 ರೂ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 245 ರೂಗೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 2,450 ರೂಗೆ ಮತ್ತು 1 Kg ಬೆಳ್ಳಿದರ 10 ಸಾವಿರ ರೂ ಕುಸಿದು 2,45,000 ರೂ ಗೆ ಇಳಿಕೆಯಾಗಿದೆ.
Advertisement