

ಬೆಂಗಳೂರು: ಸೆನ್ಸೆಕ್ಸ್ ಜಿಗತ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ವಾರ ಸತತವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು 3,220 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮವಾಗಿ ಸತತ ನಾಲ್ಕನೇ ದಿನವೂ ಚಿನ್ನದ ದರದಲ್ಲಿ ಏರಿಕೆ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆ ಒಂದೇ ದಿನದಲ್ಲಿ 3,220 ಹೆಚ್ಚಳವಾಗಿ 1,46,020ಕ್ಕೆ ತಲುಪಿದೆ. ಇನ್ನು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 2,950 ಏರಿಕೆಯಾಗಿದ್ದು, 1,33,850ಕ್ಕೆ ಏರಿಕೆಯಾಗಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ ಗ್ರಾಂಗೆ 322 ಏರಿಕೆಯಾಗಿದೆ. ಇದರಿಂದ ಒಂದು ಗ್ರಾಂ ಚಿನ್ನದ ಬೆಲೆ 14,602ಕ್ಕೆ ತಲುಪಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆಯಲ್ಲಿ 3,220 ಹೆಚ್ಚಳವಾಗಿದ್ದು, ಪ್ರಸ್ತುತ 1,46,020ಕ್ಕೆ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಏರಿಕೆಯಾಗಿದೆ. ಪ್ರತಿ ಗ್ರಾಂಗೆ 295 ಹೆಚ್ಚಳವಾಗಿದ್ದು, ದರ 13,385ಕ್ಕೆ ತಲುಪಿದೆ.
ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ
ಬೆಳ್ಳಿ ಬೆಲೆಯಲ್ಲೂ ಇಂದು ದಿಢೀರ್ ಏರಿಕೆಯಾಗಿದ್ದು ಪ್ರತಿ ಗ್ರಾಂ ಬೆಳ್ಳಿ ಬೆಲೆ 10 ಹೆಚ್ಚಳವಾಗಿ 210ಕ್ಕೆ ತಲುಪಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 10,000 ಏರಿಕೆಯಾಗಿದ್ದು 2.10 ಲಕ್ಷಕ್ಕೆ ತಲುಪಿದೆ.