Toll ಬಳಿ ವಾಸಿಸುವವರಿಗೆ ಬಿಗ್‌ ರಿಲೀಫ್‌! ಕೇವಲ 1500 ರೂ.ಗೆ ವಾರ್ಷಿಕ FASTag Pass, ಯಾರಿಗೆ ಸಿಗಲಿದೆ ಈ ಲಾಭ?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನೂತನ ನಿಯಮಾವಳಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾ ಸಮೀಪ ವಾಸಿಸುವ ನಿವಾಸಿಗಳಿಗೆ ಕೇವಲ 1,500 ರೂಪಾಯಿಗೆ ವಾರ್ಷಿಕ ಲೋಕಲ್‌ ಫಾಸ್ಟ್‌ಟ್ಯಾಗ್ ಪಾಸ್‌ ನೀಡುವ ಐತಿಹಾಸಿಕ ಯೋಜನೆಯನ್ನು ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:
Bengaluru–Mysuru Expressway (NH-275) Toll Gate
ಟೋಲ್ ಗೇಟ್ (ಸಾಂದರ್ಭಿಕ ಚಿತ್ರ)Online Desk
Updated on: 

ನವದೆಹಲಿ: ದಿನನಿತ್ಯ ಆಫೀಸ್ ಅಥವಾ ಊರಿಗೆ ಓಡಾಡುವಾಗ ಟೋಲ್ ಗೇಟ್ ಬಳಿ ಹಣ ಕಟ್ಟಿ ಸುಸ್ತಾಗಿದ್ದೀರಾ? ಹಾಗಾದರೆ ನಿಮಗೊಂದು ಬಿಗ್ ರಿಲೀಫ್ ಸಿಕ್ಕಿದೆ. ಕೇಂದ್ರ ಸರ್ಕಾರದ ಹೊಸ ಅಧಿಸೂಚನೆಯ ಪ್ರಕಾರ ಇನ್ನು ಮುಂದೆ ಟೋಲ್ ಪ್ಲಾಜಾ ಹತ್ತಿರ ವಾಸಿಸುವ ಸ್ಥಳೀಯರಿಗೆ ಕೇವಲ ಅತಿ ಕಡಿಮೆ ಬೆಲೆಗೆ ವಾರ್ಷಿಕ ಪಾಸ್ ಸಿಗಲಿದೆ. ಹಾಗಾದರೆ ಈ ಸೌಲಭ್ಯ ಯಾರಿಗೆ ಸಿಗಲಿದೆ, ಅರ್ಹತೆಗಳೇನು ಮತ್ತು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ:

Local Pass ದರವನ್ನು ಶೇ. 50 ರಷ್ಟು ಕಡಿತ!

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನೂತನ ನಿಯಮಗಳ ಪ್ರಕಾರ, ಟೋಲ್ ಪ್ಲಾಜಾ ಸಮೀಪ ವಾಸಿಸುವ ಸ್ಥಳೀಯ ನಿವಾಸಿಗಳಿಗೆ ಕೇವಲ ₹1,500ಕ್ಕೆ ವಾರ್ಷಿಕ ಫಾಸ್ಟ್‌ಟ್ಯಾಗ್ ಲೋಕಲ್ ಪಾಸ್ ನೀಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅದರಲ್ಲೂ, ಪ್ರಸ್ತುತ ಸ್ಥಳೀಯ ವಾಹನ ಸವಾರರು ವಾರ್ಷಿಕ ಪಾಸ್ ಪಡೆಯಲು ₹3,000 ವರೆಗೆ ಶುಲ್ಕ ಪಾವತಿಸಬೇಕಾಗಿತ್ತು. ಆದರೆ ಈಗ ಈ ದರವನ್ನು ಶೇಕಡಾ 50 ರಷ್ಟು ಕಡಿತಗೊಳಿಸಿ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಏತನ್ಮಧ್ಯೆ, ನಗರಸಭೆ ಅಥವಾ ಪುರಸಭೆ ಗಡಿಯ ಒಳಗಿರುವ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ದರವಾದ ₹3,000ವೇ ಮುಂದುವರೆಯಲಿದೆ.

Bengaluru–Mysuru Expressway (NH-275) Toll Gate
Clean Toilet Picture Challenge: ಕೊಳಕು ಶೌಚಾಲಯ ಕಂಡರೆ ಫೋಟೋ ತೆಗೆಯಿರಿ, ₹1,000 ಬಹುಮಾನ ಗೆಲ್ಲಿ; NHAI ಬಂಪರ್ ಆಫರ್!

ಯಾರಿಗೆ ಸಿಗಲಿದೆ ಈ ಲಾಭ?

  • 20 ಕಿಮೀ ವ್ಯಾಪ್ತಿಯ ನಿವಾಸಿಗಳು: ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ವಾಸಿಸುವ ಸ್ಥಳೀಯ ನಿವಾಸಿಗಳಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ.

  • ವಾಣಿಜ್ಯೇತರ ವಾಹನಗಳು: ಈ ರಿಯಾಯಿತಿ ಕೇವಲ ಖಾಸಗಿ ಮತ್ತು ವಾಣಿಜ್ಯೇತರ ವಾಹನಗಳಿಗೆ ಮಾತ್ರ ಸಿಗಲಿದೆ. ಹಳದಿ ಬೋರ್ಡ್ ವಾಹನಗಳಿಗೆ ಈ ರಿಯಾಯಿತಿ ಸಿಗುವುದಿಲ್ಲ.

  • ಮಾಲೀಕರ ಹೆಸರಲ್ಲೇ ನೋಂದಣಿ: ವಾಹನವು ಟೋಲ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ಮಾಲೀಕರ ಹೆಸರಲ್ಲೇ ನೋಂದಣಿಯಾಗಿರಬೇಕು (ಆರ್‌ಸಿ ಬುಕ್ ಹಾಗೂ ವಿಳಾಸದ ಪುರಾವೆ ಕಡ್ಡಾಯ).

ಒಟ್ಟಾರೆಯಾಗಿ, ಪ್ರಸ್ತುತ ತಿಂಗಳಿಗೆ ಸುಮಾರು ₹340 ರಿಂದ ₹360 ರವರೆಗೆ ಇದ್ದ ಮಾಸಿಕ ಪಾಸ್ ವೆಚ್ಚ ಮತ್ತು ವಾರ್ಷಿಕವಾಗಿ ಸುಮಾರು ₹3,000 ವರೆಗೆ ತಗಲುತ್ತಿದ್ದ ವೆಚ್ಚಕ್ಕೆ ಹೋಲಿಸಿದರೆ, ಈ ಹೊಸ ನಿಯಮವು ಸ್ಥಳೀಯ ವಾಹನ ಸವಾರರಿಗೆ ಶೇಕಡಾ 50 ರಷ್ಟು ಭಾರಿ ರಿಯಾಯಿತಿಯನ್ನು ತಂದುಕೊಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X