ಹೊಸ ವರ್ಷದಿಂದ ಹೊಸ ಚೆಕ್ ಬುಕ್ ಕಡ್ಡಾಯವೇ? ಆರ್‌ಬಿಐ ಸ್ಪಷ್ಟನೆ ಏನು? Cheque Book ನಿಯಮಗಳ ಬದಲಾವಣೆ ಕುರಿತ ವದಂತಿಗೆ RBI ಹೇಳಿದ್ದೇನು?

ಹೊಸ ವರ್ಷದಿಂದ ಹೊಸ ಚೆಕ್ ಬುಕ್ ನಿಯಮಗಳು ಜಾರಿಗೆ ಬರುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಸುದ್ದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತವಾಗಿ ತಳ್ಳಿಹಾಕಿದ್ದು, ಇದು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವ ವದಂತಿ ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
RBI Governor Sanjay Malhotra
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ Online Desk
Updated on: 

ಮುಂಬೈ (ಮಹಾರಾಷ್ಟ್ರ): ಹೊಸ ವರ್ಷದಿಂದ ಹೊಸ ಚೆಕ್‌ಬುಕ್ ನಿಯಮಗಳು ಜಾರಿಗೆ ಬರಲಿವೆ ಎಂಬ ಸಾಮಾಜಿಕ ಜಾಲತಾಣಗಳ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಜನರನ್ನು ತಪ್ಪುದಾರಿಗೆಳೆಯುವ ವದಂತಿಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತವಾಗಿ ಸ್ಪಷ್ಟಪಡಿಸಿದೆ. ತನ್ನ ಅಧಿಕೃತ ಎಕ್ಸ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಣೆ ಹೊರಡಿಸಿರುವ ಆರ್‌ಬಿಐ, ಸದ್ಯ ಚಾಲ್ತಿಯಲ್ಲಿರುವ ಚೆಕ್‌ಬುಕ್‌ಗಳ ನಿಯಮದಲ್ಲಿ ಯಾವುದೇ ಬದಲಾವಣೆ ತರುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ವೈರಲ್ ಆಗಿದ್ದ ವದಂತಿ ಏನು?

ಸಾಮಾಜಿಕ ಮಾಧ್ಯಮಗಳಲ್ಲಿ, "ಪ್ರಸ್ತುತ ಚಾಲ್ತಿಯಲ್ಲಿರುವ ಸಿಟಿಎಸ್ ಚೆಕ್‌ಬುಕ್‌ಗಳ ಮಾನ್ಯತೆ ಡಿಸೆಂಬರ್ 31, 2026 ಕ್ಕೆ ಕೊನೆಗೊಳ್ಳಲಿದೆ. ಜನವರಿ 1, 2027 ರಿಂದ ನೂತನ ಭದ್ರತಾ ವೈಶಿಷ್ಟ್ಯಗಳಿರುವ ಹೊಸ ಚೆಕ್‌ಬುಕ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಮತ್ತು ಹಳೆಯ ಚೆಕ್‌ಗಳ ಮೂಲಕ ₹50,000 ಕ್ಕಿಂತ ಹೆಚ್ಚಿನ ಹಣ ವರ್ಗಾವಣೆ ಸಾಧ್ಯವಿಲ್ಲ" ಎಂಬ ನಕಲಿ ನೋಟಿಸ್ ಭಾರಿ ವೈರಲ್ ಆಗಿತ್ತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್‌ಬಿಐ, ಸದ್ಯಕ್ಕೆ ಸಿಟಿಎಸ್ ಚೆಕ್‌ಬುಕ್‌ಗಳಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ಹೊಸ ಭದ್ರತಾ ಮಾನದಂಡ ಅಥವಾ ಹೊಸ ನಿಯಮಗಳನ್ನು ಪರಿಚಯಿಸುತ್ತಿಲ್ಲ. ಹಾಗಾಗಿ, ಪ್ರಸ್ತುತ ಗ್ರಾಹಕರು ಬಳಸುತ್ತಿರುವ ಹಳೆಯ ಮತ್ತು ಸದ್ಯದ ಎಲ್ಲಾ ಚೆಕ್‌ಬುಕ್‌ಗಳು ಹೊಸ ವರ್ಷದ ನಂತರವೂ (2027) ಎಂದಿನಂತೆ ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ. ಜೊತೆಗೆ, ಇಂತಹ ಆರ್ಥಿಕ ನಿಯಮಗಳ ಬದಲಾವಣೆಯ ಬಗ್ಗೆ ಸಾರ್ವಜನಿಕರು ಕೇವಲ ಆರ್‌ಬಿಐ ಅಧಿಕೃತ ವೆಬ್‌ಸೈಟ್ ಅಥವಾ ಬ್ಯಾಂಕುಗಳು ನೀಡುವ ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬಬೇಕು, ಅನಧಿಕೃತ ಸಂದೇಶಗಳನ್ನು ಫಾರ್ವರ್ಡ್ ಮಾಡಬಾರದು ಎಂದು ವಿನಂತಿಸಿದೆ. ಆದ್ದರಿಂದ ಬ್ಯಾಂಕ್ ಗ್ರಾಹಕರು ಯಾವುದೇ ಗೊಂದಲಕ್ಕೊಳಗಾಗುವ ಅಥವಾ ತರಾತುರಿಯಲ್ಲಿ ಚೆಕ್‌ಬುಕ್ ಬದಲಾಯಿಸುವ ಅಗತ್ಯವಿಲ್ಲ.

RBI Governor Sanjay Malhotra
ಸಾಲಗಾರರಿಗೆ ಶಾಕ್ ಕೊಟ್ಟ ಆರ್‌ಬಿಐ! 4 ವರ್ಷಗಳ ಬಳಿಕ ರೆಪೊ ದರ ಶೇ. 5.5ಕ್ಕೆ ಹೆಚ್ಚಳ: ಹಾಗಾದ್ರೆ, ನಿಮ್ಮ ಮನೆ, ವಾಹನ ಸಾಲದ EMI ಎಷ್ಟು ಹೆಚ್ಚಾಗಲಿದೆ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X