ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ. ಹೆಚ್ಚಳ, ವಿಮಾನ ಇಂಧನವೂ ದುಬಾರಿ..!

ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಈ ಪರಿಷ್ಕರಣೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಳ ಏರಿಳಿತ ಹಾಗೂ ರೂಪಾಯಿ-ಡಾಲರ್ ವಿನಿಮಯ ದರದಲ್ಲಿನ ಬದಲಾವಣೆಗಳಿಗೆ ಅನುಗುಣವಾಗಿ ಮಾಡಲಾಗಿದೆ.
LPG Cylinder
LPG ಸಿಲಿಂಡರ್Online Desk
Updated on: 

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಾರ್ವಜನಿಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಹಾಗೂ ವಿಮಾನ ಇಂಧನ (ATF) ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿವೆ. ಪರಿಷ್ಕೃತ ದರಗಳು ಅಕ್ಟೋಬರ್ 1, 2026 ರಿಂದಲೇ ಜಾರಿಗೆ ಬಂದಿವೆ.

ಪರಿಷ್ಕೃತ ದರದ ಪ್ರಕಾರ, ಹೋಟೆಲ್ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬಳಸಲಾಗುವ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ರೂ.62.50 ಹೆಚ್ಚಿಸಲಾಗಿದೆ. ಇದರೊಂದಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ರೂ.2,810 ಕ್ಕೆ ತಲುಪಿದೆ.

ಇತ್ತ ವಿಮಾನಯಾನ ಸಂಸ್ಥೆಗಳಿಗೂ ತೈಲ ಕಂಪನಿಗಳು ಶಾಕ್ ನೀಡಿದ್ದು, ವಿಮಾನ ಇಂಧನ (ATF) ದರವನ್ನು ಪ್ರತಿ ಲೀಟರ್‌ಗೆ ರೂ.16 ರಷ್ಟು ಭಾರಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ದೇಶೀಯ ವಿಮಾನ ಇಂಧನ ದರ ರೂ.121 ರಿಂದ ರೂ.137 ಕ್ಕೆ ಜಿಗಿದಿದೆ. ಸತತ ಮೂರನೇ ತಿಂಗಳ ಬೆಲೆ ಏರಿಕೆಯಿಂದಾಗಿ ವಿಮಾನ ಪ್ರಯಾಣ ದರ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಈ ಪರಿಷ್ಕರಣೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಳ ಏರಿಳಿತ ಹಾಗೂ ರೂಪಾಯಿ-ಡಾಲರ್ ವಿನಿಮಯ ದರದಲ್ಲಿನ ಬದಲಾವಣೆಗಳಿಗೆ ಅನುಗುಣವಾಗಿ ಮಾಡಲಾಗಿದೆ.

ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ರೂ.9.50ರಷ್ಟು ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲು ಆಗಸ್ಟ್‌ನಲ್ಲಿ ರೂ.192 ಮತ್ತು ಜುಲೈನಲ್ಲಿ ರೂ.183.50ರಷ್ಟು ದರ ಕಡಿತ ಮಾಡಲಾಗಿತ್ತು.

ಫೆಬ್ರವರಿಯಿಂದ ಜೂನ್‌ವರೆಗೆ 19 ಕೆ.ಜಿ. ಸಿಲಿಂಡರ್ ಬೆಲೆ ರೂ.1,373ರಷ್ಟು ಏರಿಕೆಯಾಗಿದ್ದು, ರೂ.1,740.50ರಿಂದ ದಾಖಲೆಯ ರೂ.3,113.50ಕ್ಕೆ ತಲುಪಿತ್ತು. ಜಾಗತಿಕ ಇಂಧನ ಪೂರೈಕೆಯಲ್ಲಿನ ವ್ಯತ್ಯಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಹೆಚ್ಚಿನ ಬೆಲೆಗಳು ಇದಕ್ಕೆ ಕಾರಣವಾಗಿದ್ದವು.

LPG Cylinder
Indian stock market: ಪಾತಾಳಕ್ಕೆ ಕುಸಿದ ಐಟಿ ಕಂಪನಿ ಷೇರುಗಳು; 52 ವಾರಗಳಲ್ಲೇ ಕನಿಷ್ಠ!

ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಎಟಿಎಫ್ ಬೆಲೆಯನ್ನು ಪ್ರತಿ ಲೀಟರ್‌ಗೆ ರೂ.121ರಿಂದ ರೂ.137ಕ್ಕೆ ಹೆಚ್ಚಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಪ್ರತಿ ಲೀಟರ್‌ಗೆ ರೂ.6.28 ಮತ್ತು ಆಗಸ್ಟ್‌ನಲ್ಲಿ ರೂ.5ರಷ್ಟು ಏರಿಕೆ ಮಾಡಲಾಗಿತ್ತು.

ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದಲ್ಲಿ ಎಟಿಎಫ್ ಪಾಲು ಶೇ.40ರಷ್ಟರವರೆಗೆ ಇರುವುದರಿಂದ ಇಂಧನ ಬೆಲೆಗಳು ವಿಮಾನಯಾನ ಸಂಸ್ಥೆಗಳ ವೆಚ್ಚದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ.

ಎಟಿಎಫ್ ಮತ್ತು ಎಲ್‌ಪಿಜಿ ದರಗಳನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ. ಸ್ಥಳೀಯ ತೆರಿಗೆಗಳು, ವಿಶೇಷವಾಗಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ದರಗಳು ಬದಲಾಗಬಹುದು.

ಇದೇ ವೇಳೆ ಗೃಹ ಬಳಕೆಯ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 14.2 ಕೆ.ಜಿ. ಸಿಲಿಂಡರ್ ದರ ರೂ.942ರಲ್ಲೇ ಮುಂದುವರಿದಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಸಂಬಂಧಿಸಿದ ಪೂರೈಕೆ ವ್ಯತ್ಯಯಗಳ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಜೂನ್‌ವರೆಗೆ ಗೃಹಬಳಕೆಯ ಅಡುಗೆ ಅನಿಲದ ದರವನ್ನು ಪ್ರತಿ ಸಿಲಿಂಡರ್‌ಗೆ ರೂ.89ರಷ್ಟು ಹೆಚ್ಚಿಸಲಾಗಿತ್ತು.

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೇ ತಿಂಗಳಲ್ಲಿ ಎರಡೂ ಇಂಧನಗಳ ಬೆಲೆಯನ್ನು ಪ್ರತಿ ಲೀಟರ್‌ಗೆ ಸುಮಾರು ರೂ.7.50ರಷ್ಟು ಹೆಚ್ಚಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com