

ಮುಂಬೈ: ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರ ವಿರೋಧದ ನಡುವೆಯೇ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಅವರನ್ನು ಮತ್ತೊಂದು ಐದು ವರ್ಷಗಳ ಅವಧಿಗೆ ಮರು ನೇಮಕ ಮಾಡಲು ಟಾಟಾ ಸನ್ಸ್ ಮಂಡಳಿ ಗುರುವಾರ ಅನುಮೋದನೆ ನೀಡಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.
ಇಂದು ಮುಂಬೈನಲ್ಲಿ ನಡೆದ ಟಾಟಾ ಸನ್ಸ್ ಮಂಡಳಿಯ ಸಭೆಯಲ್ಲಿ ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡಲು ಅನುಮೋದನೆ ನೀಡಲಾಯಿತು.
ತಾವು ಮೂರನೇ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಎನ್. ಚಂದ್ರಶೇಖರನ್ ಅವರು ಕಳೆದ ಆಗಸ್ಟ್‌ನಲ್ಲಿ ಘೋಷಿಸಿದ ಒಂದು ತಿಂಗಳಲ್ಲೇ ಈ ಬೆಳವಣಿಗೆ ನಡೆದಿರುವುದು ಬಾರೀ ಕುತೂಹಲಕ್ಕೆ ಕಾರಣವಾಗಿದೆ.
ಐಪಿಒ ಪಟ್ಟಿ ಮಾಡುವ ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೂ ಹೂಡಿಕೆದಾರರ ನಂಬಿಕೆ ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಈ ನಿರ್ಧಾರದ ವೇಳೆ ಮತ ಚಲಾಯಿಸದೆ ಹೊರಗುಳಿದಿದ್ದಾರೆ.
ಚಂದ್ರಶೇಖರನ್ ವಿರುದ್ಧ ಮತ ಚಲಾಯಿಸಿದ ನೋಯೆಲ್ ಟಾಟಾ
ಟಾಟಾ ಸನ್ಸ್‌ನ ಸುಮಾರು ಶೇಕಡಾ 66 ರಷ್ಟು ಪಾಲನ್ನು ನಿಯಂತ್ರಿಸುವ ಟಾಟಾ ಟ್ರಸ್ಟ್ಸ್‌ನ ಅಧ್ಯಕ್ಷರಾದ ನೋಯೆಲ್ ಟಾಟಾ ಅವರು ಚಂದ್ರಶೇಖರನ್ ಅವರ ಮರುನೇಮಕದ ವಿರುದ್ಧ ಮತ ಚಲಾಯಿಸಿದರು, ಆದರೆ ಬಹುಮತದೊಂದಿಗೆ ನಿರ್ಣಯವು ಅಂಗೀಕರಿಸಲ್ಪಟ್ಟಿತು ಎಂದು ಮೂಲಗಳು ತಿಳಿಸಿವೆ.