UPI ವಹಿವಾಟಿಗೆ GST ತೆರಿಗೆ? ಕೇಂದ್ರ ಸರ್ಕಾರ ಹೇಳಿದ್ದೇನು?

ಇತ್ತೀಚೆಗೆ ವ್ಯಾಪಾರಿಗಳು ಗ್ರಾಹಕರಿಂದ ಪಡೆಯುವ ₹2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕದ ಜೊತೆಗೆ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
UPI
ಯುಪಿಐOnline Desk
Updated on

ನವದೆಹಲಿ: ಇತ್ತೀಚೆಗೆ ವ್ಯಾಪಾರಿಗಳು ₹2,000 ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಪಡೆಯುವ ಎಂಡಿಆರ್ (MDR) ಶುಲ್ಕ ಜಾರಿಯಾಗುತ್ತಿರುವ ನಡುವೆಯೇ, ಯುಪಿಐ ವಹಿವಾಟುಗಳ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಡಿಜಿಟಲ್ ಪಾವತಿ ಬಳಸುವ ಪ್ರತಿಯೊಬ್ಬ ಗ್ರಾಹಕನಲ್ಲೂ ಈ ಸುದ್ದಿ ಆತಂಕ ಮೂಡಿಸಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಯುಪಿಐ ಮೇಲೆ ಯಾವುದೇ ರೀತಿಯ ಹೊಸ ಜಿಎಸ್‌ಟಿ ವಿಧಿಸುತ್ತಿಲ್ಲ ಎಂದು ತಿಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ಜಿಎಸ್‌ಟಿ ವಿಧಿಸುವುದಿಲ್ಲ!

ಯುಪಿಐ ಪಾವತಿಗಳ ಮೇಲೆ ಪ್ರತ್ಯೇಕವಾಗಿ ಯಾವುದೇ ರೀತಿಯ ಜಿಎಸ್‌ಟಿ ವಿಧಿಸಲಾಗುವುದಿಲ್ಲ. ಇದನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (Input Tax Credit - ITC) ನಲ್ಲಿ ಹೊಂದಿಸಲಾಗುವುದು. ಒಂದು ವೇಳೆ ಅನುಷ್ಠಾನದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಜಿಎಸ್‌ಟಿ ಮಂಡಳಿಯು ಅದನ್ನು ಪರಿಶೀಲಿಸಲಿದೆ. ಅದರೊಂದಿಗೆ, ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಎಲ್ಲಾ ಯುಪಿಐ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿರಲಿವೆ. ಹಾಗಾಗಿ, ಗ್ರಾಹಕರು ಸಾಮಾನ್ಯ ದಿನಸಿ ಅಥವಾ ಯಾವುದೇ ಬಿಲ್‌ಗಳನ್ನು ಪಾವತಿಸುವಾಗ ಯಾವುದೇ ಹೆಚ್ಚುವರಿ ಶುಲ್ಕ ನೀಡಬೇಕಾಗಿಲ್ಲ.

ಅಕ್ಟೋಬರ್ 15 ರಿಂದ ಹೊಸ ಎಂಡಿಆರ್ ನಿಯಮ

ಅಕ್ಟೋಬರ್ 15 ರಿಂದ ₹2,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಪಾವತಿಗಳಿಗೆ (Person-to-Merchant - P2M) ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದ್ದು, ಇದು ಪ್ರತಿ ವಹಿವಾಟಿಗೆ ಗರಿಷ್ಠ ₹300 ಮಿತಿಗೆ ಒಳಪಟ್ಟಿರುತ್ತದೆ. ಜೊತೆಗೆ, ರೈಲ್ವೆ, ಟೆಲಿಕಾಂ, ಇಂಧನ ಮತ್ತು ವಿಮೆಯಂತಹ ಕೆಲವು ನಿರ್ದಿಷ್ಟ ವಿಭಾಗಗಳಿಗೆ ₹5 ರ ರಿಯಾಯಿತಿ ದರದ ಎಂಡಿಆರ್ ಅನ್ವಯಿಸುತ್ತದೆ.

UPI
2,000 ಅಲ್ಲ 1 ಲಕ್ಷ ಪೇ ಮಾಡಿದರು ಫ್ರೀ ಫ್ರೀ ಫ್ರೀ! ಹಾಗಾದ್ರೆ, ಅಕ್ಟೋಬರ್ 15 ರಿಂದ ಜಾರಿಯಾಗ್ತಿರೋ ಹೊಸ ನಿಯಮದಲ್ಲಿ ಯಾರಿಗೆ ಶುಲ್ಕ? ಯಾರಿಗೆಲ್ಲಾ ವಿನಾಯಿತಿ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com