ಡಿಪ್ಲೊಮಾ ಪದವೀಧರರಿಗೆ ಸುವರ್ಣಾವಕಾಶ: ಜವಳಿ ಇಲಾಖೆಯಲ್ಲಿ 27 ಹುದ್ದೆಗಳ ಭರ್ತಿಗೆ KEA ಅಧಿಸೂಚನೆ

ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಖಾಲಿ ಇರುವ 27 ಜವಳಿ ತನಿಖಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:
KEA Announces 27 Textile Inspector Vacancies in Karnataka Handloom and Textile Department
ಜವಳಿ ಇಲಾಖೆಯಲ್ಲಿ 27 ಹುದ್ದೆಗಳ ಭರ್ತಿಗೆ KEA ಅಧಿಸೂಚನೆAI Image
Updated on: 

ಬೆಂಗಳೂರು: ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ಒಟ್ಟು 27 ಜವಳಿ ತನಿಖಾಧಿಕಾರಿ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆ ವಿವರ:

  • ನೇಮಕಾತಿ ಪ್ರಾಧಿಕಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)

  • ಇಲಾಖೆ: ಕೈಮಗ್ಗ ಮತ್ತು ಜವಳಿ ಇಲಾಖೆ

  • ಹುದ್ದೆಯ ಹೆಸರು: ಜವಳಿ ತನಿಖಾಧಿಕಾರಿ - ಗ್ರೂಪ್-ಸಿ ಒಟ್ಟು

  • ಹುದ್ದೆಗಳು: 27

    • ಉಳಿಕೆ ಮೂಲ ವೃಂದ (RPC): 22 ಹುದ್ದೆಗಳು

    • ಕಲ್ಯಾಣ-ಕರ್ನಾಟಕ ವೃಂದ (KK): 05 ಹುದ್ದೆಗಳು

  • ಉದ್ಯೋಗದ ಸ್ಥಳ: ಕರ್ನಾಟಕ ರಾಜ್ಯ

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಪ್ರಾರಂಭ: ನವೆಂಬರ್ 18, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 16, 2026

  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಡಿಸೆಂಬರ್ 17, 2026

ಅರ್ಹತೆ:

  • ವಿದ್ಯಾರ್ಹತೆ: ಜವಳಿ ತಂತ್ರಜ್ಞಾನ, ಕೈಮಗ್ಗ ತಂತ್ರಜ್ಞಾನ ಅಥವಾ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು.

  • ವಯೋಮಿತಿ: ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 40 ವರ್ಷ, 2A/2B/3A/3B ಅಭ್ಯರ್ಥಿಗಳಿಗೆ 43 ವರ್ಷ ಮತ್ತು SC/ST/Cat-1 ಅಭ್ಯರ್ಥಿಗಳಿಗೆ 45 ವರ್ಷ ನಿಗದಿಪಡಿಸಲಾಗಿದೆ.

ವೇತನ ಶ್ರೇಣಿ: ರೂ. 54,175 – 99,400/-

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಆಫ್‌ಲೈನ್-ಓಎಂಆರ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ:

  • ಕನ್ನಡ ಭಾಷಾ ಪರೀಕ್ಷೆ: ಅರ್ಹತಾ ಪರೀಕ್ಷೆಯಾಗಿರುತ್ತದೆ (SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಓದಿದವರಿಗೆ ವಿನಾಯಿತಿ ಇರುತ್ತದೆ).

  • ಪತ್ರಿಕೆ-1 (ಸಾಮಾನ್ಯ ಜ್ಞಾನ): 100 ಪ್ರಶ್ನೆಗಳು, 100 ಅಂಕಗಳು (ಅವಧಿ: 2 ಗಂಟೆ).

  • ಪತ್ರಿಕೆ-2 (ನಿರ್ದಿಷ್ಟ ಪತ್ರಿಕೆ - ವಿಷಯಾಧಾರಿತ): 100 ಪ್ರಶ್ನೆಗಳು, 100 ಅಂಕಗಳು (ಅವಧಿ: 2 ಗಂಟೆ).

  • ಋಣಾತ್ಮಕ ಮೌಲ್ಯಮಾಪನ: ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.

KEA Announces 27 Textile Inspector Vacancies in Karnataka Handloom and Textile Department
ಬ್ಯಾಂಕ್ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್: ಬರೋಡಾ ಬ್ಯಾಂಕಿನಲ್ಲಿ 837 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಲಿಂಕ್:

https://cetonline.karnataka.gov.in/kea/

  • ಅರ್ಜಿ ಶುಲ್ಕ: ಸಾಮಾನ್ಯ ಮತ್ತು 2A/2B/3A/3B ಅಭ್ಯರ್ಥಿಗಳಿಗೆ ₹750, SC/ST/Cat-1 ಅಭ್ಯರ್ಥಿಗಳಿಗೆ ₹500 ಮತ್ತು ಮಾಜಿ ಸೈನಿಕರಿಗೆ ₹250.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X