10ನೇ ತರಗತಿ ಪಾಸಾದವರಿಗೆ ಬಂಪರ್ ಅವಕಾಶ! ಎಕ್ಸಾಮ್ ಇಲ್ಲದೆ ಅಂಚೆ ಇಲಾಖೆಯಲ್ಲಿ ಉದ್ಯೋಗ; 23,000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಅಂಚೆ ಇಲಾಖೆ

ಕೇವಲ SSLC ಪಾಸದವರಿಗೆ ಗುಡ್ ನ್ಯೂಸ್; ಭಾರತೀಯ ಅಂಚೆ ಇಲಾಖೆಯು 23,757ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದ ಉದ್ಯೋಗದ ನಿರೀಕ್ಷೆಯಲ್ಲಿದ್ದ, ಕೇವಲ 10ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.
India Post
ಅಂಚೆ ಇಲಾಖೆಯಲ್ಲಿ ಉದ್ಯೋಗAI Image
Updated on

India Post GDS Recruitment 2026: ಕೇವಲ SSLC ಪಾಸದವರಿಗೆ ಗುಡ್ ನ್ಯೂಸ್; ಯಾಕಂದ್ರೆ, ಭಾರತೀಯ ಅಂಚೆ ಇಲಾಖೆಯು (India Post) ದೇಶಾದ್ಯಂತ 23,757 ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ಭರ್ತಿಗಾಗಿ ಜುಲೈ 2026ರ ಶೆಡ್ಯೂಲ್-II (Schedule-II) ಅಡಿಯಲ್ಲಿ ಬೃಹತ್ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದ ಉದ್ಯೋಗದ ನಿರೀಕ್ಷೆಯಲ್ಲಿದ್ದ, ಕೇವಲ 10ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ. ಹಾಗಾಗಿ, ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ, ಎಕ್ಸಾಮ್ ಫೀಸ್, ಪ್ರಮುಖ ದಿನಾಂಕಗಳು ಸೇರಿದಂತೆ ಎಲ್ಲಾ ಮಾಹಿತಿ ಇಲ್ಲಿದೆ:

ಹುದ್ದೆಯ ವಿವರ:

  • ನೇಮಕಾತಿ ಸಂಸ್ಥೆ: ಇಂಡಿಯಾ ಪೋಸ್ಟ್ (India Post)

  • ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕ್ (GDS)

    • ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM - Branch Postmaster)

    • ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM - Assistant Branch Postmaster)

    • ಡಾಕ್ ಸೇವಕ್ (Dak Sevak)

  • ಒಟ್ಟು ಹುದ್ದೆಗಳು: 23,757 (ಕರ್ನಾಟಕ ವೃತ್ತದಲ್ಲಿ 1,116 ಹುದ್ದೆಗಳು)

ಪ್ರಮುಖ ದಿನಾಂಕಗಳು

  • ಒನ್-ಟೈಮ್ ನೋಂದಣಿ (OTR) ಆರಂಭ: ಆಗಸ್ಟ್ 31, 2026

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 2, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 21, 2026

  • ಅರ್ಜಿ ತಿದ್ದುಪಡಿ ವಿಂಡೋ: ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 24, 2026

ಅರ್ಹತೆ:

  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು.

  • ಭಾಷಾ ಜ್ಞಾನ: ಕರ್ನಾಟಕ ವೃತ್ತಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಕಡ್ಡಾಯ.

  • ಇತರ ಕೌಶಲ್ಯಗಳು: ಕಂಪ್ಯೂಟರ್ ಜ್ಞಾನ, ಸೈಕಲ್ ಸವಾರಿ ಜ್ಞಾನ ಮತ್ತು ಬದುಕಿಗೆ ಪರ್ಯಾಯ ಆದಾಯದ ಮೂಲ ಹೊಂದಿರಬೇಕು.

  • ವಯೋಮಿತಿ: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷಗಳು (OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ನಿಯಮಾನುಸಾರ ಸಡಿಲಿಕೆ ಇರುತ್ತದೆ).

India Post
ಪದವೀಧರರಿಗೆ ಗುಡ್ ನ್ಯೂಸ್; EPFOದಲ್ಲಿ ಸಹಾಯಕ ಕಮಿಷನರ್ ಹುದ್ದೆಗಳಿಗೆ UPSC ಅರ್ಜಿ ಆಹ್ವಾನ
India Post GDS Recruitment 2026

ಅರ್ಜಿ ಶುಲ್ಕ:

  • ಸಾಮಾನ್ಯ, ಒಬಿಸಿ ಮತ್ತು EWS ಪುರುಷ ಅಭ್ಯರ್ಥಿಗಳಿಗೆ ₹100 ಶುಲ್ಕ

  • ಎಸ್‌ಸಿ, ಎಸ್‌ಟಿ, ಅಂಗವಿಕಲರು ಹಾಗೂ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಸಂಬಳ:

  • BPM ಹುದ್ದೆಗಳಿಗೆ: ₹12,000 ರಿಂದ ₹29,380

  • ABPM/ಡಾಕ್ ಸೇವಕ್ ಹುದ್ದೆಗಳಿಗೆ: ₹10,000 ರಿಂದ ₹24,470

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಬದಲಿಗೆ 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇರ ಆಯ್ಕೆ ಮಾಡಲಾಗುತ್ತದೆ.

ಅಧಿಸೂಚನೆ ಲಿಂಕ್: https://indiapost.gov.in/gdsonlineengagement/pdf/descriptive-notification.pdf

ನೇಮಕಾತಿ ಲಿಂಕ್:

https://indiapost.gov.in/gdsonlineengagement

India Post
ಇಂಜಿನಿಯರಿಂಗ್ ಪದವಿಧರರಿಗೆ ಸುವರ್ಣ ಅವಕಾಶ; 3,993 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಭಾರತೀಯ ರೈಲ್ವೆ ಅರ್ಜಿ ಆಹ್ವಾನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com