ಪದವೀಧರರಿಗೆ ₹1.10 ಲಕ್ಷ ಸಂಬಳದ ಸರ್ಕಾರಿ ಉದ್ಯೋಗಾವಕಾಶ: ಯುನೈಟೆಡ್ ಇಂಡಿಯಾದಲ್ಲಿ 225 ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

UIICL AO Recruitment 2026: ಭಾರತ ಸರ್ಕಾರದ ಸ್ವಾಮ್ಯದ ಪ್ರಮುಖ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಸಂಸ್ಥೆಯಾದ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಒಟ್ಟು 225 ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
United India Insurance Career Aspirations
ಯುನೈಟೆಡ್ ಇಂಡಿಯಾದಲ್ಲಿ 225 ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನAI Image
Updated on

UIICL AO Recruitment 2026: ಭಾರತ ಸರ್ಕಾರದ ಸ್ವಾಮ್ಯದ ಪ್ರಮುಖ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಸಂಸ್ಥೆಯಾದ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (UIIC) ಒಟ್ಟು 225 ಆಡಳಿತಾಧಿಕಾರಿ (Administrative Officer - Scale I) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಹಾಗಾಗಿ, ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಸೆಪ್ಟೆಂಬರ್ 28, 2026 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅದರಂತೆ, ನೇಮಕಾತಿ ಕುರಿತ ಸಂಪೂರ್ಣ ವಿವರ ಇಲ್ಲಿದೆ:

ಹುದ್ದೆಗಳ ವಿವರ:

  • ಒಟ್ಟು 225 ಹುದ್ದೆಗಳಳು

    • ಆಡಳಿತಾಧಿಕಾರಿ - ಜನರಲಿಸ್ಟ್ (AO - Generalist): 200 ಹುದ್ದೆಗಳು

    • ಆಡಳಿತಾಧಿಕಾರಿ - ಹಿಂದಿ ಅಧಿಕಾರಿ (AO - Hindi Officer): 25 ಹುದ್ದೆಗಳು

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 28, 2026

  • ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಅಕ್ಟೋಬರ್ 22, 2026

  • ಮುಖ್ಯ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ನವೆಂಬರ್ 30, 2026

ಅರ್ಹತೆ:

  • ಶೈಕ್ಷಣಿಕ ಅರ್ಹತೆ:

    • ಜನರಲಿಸ್ಟ್ (Generalist): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಕನಿಷ್ಠ ಶೇ. 60 ರಷ್ಟು ಅಂಕಗಳೊಂದಿಗೆ (SC / ST ಅಭ್ಯರ್ಥಿಗಳಿಗೆ ಶೇ. 55) ಪದವಿ ಅಥವಾ ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು.

    • ಹಿಂದಿ ಆಫೀಸರ್ (Hindi Officer): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ/ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

  • ವಯೋಮಿತಿ:

    • ಜೂನ್ 30, 2026 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. (ಸರ್ಕಾರಿ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ).

ಅರ್ಜಿ ಶುಲ್ಕ:

  • ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್: ₹1,000

  • ಎಸ್‌ಸಿ / ಎಸ್‌ಟಿ / ಅಂಗವಿಕಲ: ₹250

United India Insurance Career Aspirations
ಇಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್; 1748 ಹುದ್ದೆಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ SSC; ಭರ್ಜರಿ ಸಂಬಳ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮೂಲ ವೇತನ ₹82,485 ಇರಲಿದ್ದು, ಭತ್ಯೆಗಳೂ ಸೇರಿದಂತೆ ಮೆಟ್ರೋಪಾಲಿಟನ್ ನಗರಗಳಲ್ಲಿ ಅಂದಾಜು ಮಾಸಿಕ ಒಟ್ಟು ವೇತನ (Gross Salary) ಸುಮಾರು ₹1,10,000 ಕ್ಕೂ ಅಧಿಕ ಇರಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು UIIC ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ 'Recruitment' ವಿಭಾಗದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇರವಾಗಿ IBPS ಪೋರ್ಟಲ್ ಲಿಂಕ್ ಮೂಲಕವೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ

ಅರ್ಜಿ ಸಲ್ಲಿಸಲು ಹಾಗೂ ಅಧಿಕೃತ ಅಧಿಸೂಚನೆಯ ಲಿಂಕ್:

https://uiic.co.in/web/careers/recruitment

United India Insurance Career Aspirations
ಇಂಜಿನಿಯರಿಂಗ್ ಪದವೀಧರರಿಗೆ ಬಂಪರ್ ಆಫರ್: BEL ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 1.40 ಲಕ್ಷದವರೆಗೆ ಸಂಬಳ; ಅರ್ಜಿ ಸಲ್ಲಿಕೆ ಹೇಗೆ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com