

UPSC Recruitment 2026: ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (UPSC) ಗ್ರೂಪ್ ಎ ಮತ್ತು ಗ್ರೂಪ್ ಬಿ ದರ್ಜೆಯ ಸುಮಾರು 480 ಇಂಜಿನಿಯರಿಂಗ್ ಸರ್ವೀಸ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ESE 2027 ಅಧಿಸೂಚನೆಯನ್ನು ಪ್ರಕಟಿಸಿದೆ. ಭಾರತ ಸರ್ಕಾರದ ವಿವಿಧ ತಾಂತ್ರಿಕ ಮತ್ತು ಮೂಲಸೌಕರ್ಯ ಇಲಾಖೆಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಇಂಜಿನಿಯರಿಂಗ್ ಪದವೀಧರರಿಗೆ ಇದು ಸುವರ್ಣ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಒಟ್ಟು ಹುದ್ದೆಗಳು: 480
ಸಿವಿಲ್ ಇಂಜಿನಿಯರಿಂಗ್ (Civil Engineering) - 219 ಹುದ್ದೆಗಳು
ಮೆಕಾನಿಕಲ್ ಇಂಜಿನಿಯರಿಂಗ್ (Mechanical Engineering) - 91 ಹುದ್ದೆಗಳು
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (Electrical Engineering) - 77 ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್ (Electronics & Telecommunication) - 93 ಹುದ್ದೆಗಳು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 16, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 6, 2026 (ಸಂಜೆ 6:00 ಗಂಟೆಯವರೆಗೆ)
ಪೂರ್ವಭಾವಿ ಪರೀಕ್ಷೆ (Prelims) ದಿನಾಂಕ: ಜನವರಿ 31, 2027
ಮುಖ್ಯ ಪರೀಕ್ಷೆ (Mains) ದಿನಾಂಕ: ಜೂನ್ 18, 2027
ಅರ್ಹತೆ:
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಪಟ್ಟ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ (B.E / B.Tech) ಪೂರ್ಣಗೊಳಿಸಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. (ನಿಯಮಾವಳಿಗಳ ಪ್ರಕಾರ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ)
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ₹200
ಮಹಿಳಾ, ಎಸ್‌ಸಿ, ಎಸ್‌ಟಿ ಮತ್ತು PwBD ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇರುವುದಿಲ್ಲ (ವಿನಾಯಿತಿ ಇದೆ)
ಅರ್ಜಿ ಸಲ್ಲಿಕೆ ವಿಧಾನ:
UPSC Online Portalಗೆ ಹೋಗಿ
Universal Registration (URN) ರಚಿಸಿ, Common Application Form (CAF) ಭರ್ತಿ ಮಾಡಬೇಕು.
ಸಾಮಾನ್ಯ ಫೋಟೋದ ಜೊತೆಗೆ ಲೈವ್ ಫೋಟೋಗ್ರಾಫ್ ಅಪ್‌ಲೋಡ್ ಮಾಡುವುದು ಕಡ್ಡಾಯ.
ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯಲ್ಲಿ ಒಂದರ ಕೆಳಗೆ ಒಂದರಂತೆ 3 ಬಾರಿ ಸಹಿ ಮಾಡಿ ಅಪ್‌ಲೋಡ್ ಮಾಡಬೇಕು.
ಅಂತಿಮ ಸಲ್ಲಿಕೆಯ ನಂತರ ಅರ್ಜಿಯನ್ನು ಹಿಂಪಡೆಯಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಹಂತ 1: ಪ್ರಿಲಿಮಿನರಿ ಪರೀಕ್ಷೆ (Preliminary Exam - Objective Type)
ಹಂತ 2: ಮುಖ್ಯ ಪರೀಕ್ಷೆ (Main Exam - Conventional Type)
ಹಂತ 3: ವ್ಯಕ್ತಿತ್ವ ಪರೀಕ್ಷೆ / ಸಂದರ್ಶನ (Personality Test / Interview)
ಅರ್ಜಿ ಸಲ್ಲಿಕೆ ಪೋರ್ಟಲ್:
UPSC Online Portal (upsconline.nic.in)