ಪರೀಕ್ಷೆಯೇ ಇಲ್ಲದೆ SBIನಲ್ಲಿ ಭರ್ಜರಿ ಕೆಲಸ; 207 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಸಂಬಳ ಬರೋಬ್ಬರಿ 97 ಲಕ್ಷ ರೂ.!

SBI Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವೆಲ್ತ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಖಾಲಿ ಇರುವ 207 ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
State Bank of India
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭರ್ಜರಿ ಕೆಲಸAI Image
Updated on: 

SBI Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ವೆಲ್ತ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಖಾಲಿ ಇರುವ 207 ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ (SCO) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಪ್ಪಂದದ ಆಧಾರದ ಮೇಲೆ ನಡೆಯುವ ಈ ನೇಮಕಾತಿಯಲ್ಲಿ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ವಾರ್ಷಿಕ ಗರಿಷ್ಠ 97 ಲಕ್ಷ ರೂಪಾಯಿವರೆಗೆ ಭರ್ಜರಿ ವೇತನದ ಪ್ಯಾಕೇಜ್ ನೀಡಲಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಒಟ್ಟು ಹುದ್ದೆಗಳು: 207

    • ವೈಸ್ ಪ್ರೆಸಿಡೆಂಟ್ (ವೆಲ್ತ್): 91 ಹುದ್ದೆಗಳು (ಗರಿಷ್ಠ ವೇತನ ವಾರ್ಷಿಕ ₹97 ಲಕ್ಷ)

    • ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (ವೆಲ್ತ್): 73 ಹುದ್ದೆಗಳು

    • ರಿಲೇಶನ್‌ಶಿಪ್ ಮ್ಯಾನೇಜರ್ (ಟೀಮ್ ಲೀಡ್): 24 ಹುದ್ದೆಗಳು

    • ಇನ್ವೆಸ್ಟ್‌ಮೆಂಟ್ ಸ್ಪೆಷಲಿಸ್ಟ್: 09 ಹುದ್ದೆಗಳು

    • ರೀಜನಲ್ ಹೆಡ್: 05 ಹುದ್ದೆಗಳು

    • ಇನ್ವೆಸ್ಟ್‌ಮೆಂಟ್ ಆಫೀಸರ್: 04 ಹುದ್ದೆಗಳು

    • ಜೋನಲ್ ಹೆಡ್ (ರಿಟೇಲ್): 01 ಹುದ್ದೆ

  • ನೇಮಕಾತಿ ಮಾದರಿ: ಈ ನೇಮಕಾತಿಯು ಒಪ್ಪಂದದ ಆಧಾರದ ಮೇಲೆ ನಡೆಯಲಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 4 ಸೆಪ್ಟೆಂಬರ್ 2026

  • ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 05 ಅಕ್ಟೋಬರ್ 2026

ಅರ್ಹತೆ:

  • ವಿದ್ಯಾರ್ಹತೆ:

    • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (ಗ್ರಾಜುಯೇಷನ್) ಅಥವಾ ಸಂಬಂಧಿತ ಸ್ನಾತಕೋತ್ತರ ಪದವಿ (ಪಿಜಿ)/ಸಿಎ/ಸಿಎಫ್‌ಎ ಮುಗಿಸಿರಬೇಕು.

    • ಹುದ್ದೆಗಳಿಗೆ ಅನುಗುಣವಾಗಿ 3 ರಿಂದ 15 ವರ್ಷಗಳ ಬ್ಯಾಂಕಿಂಗ್ ಅಥವಾ ಹಣಕಾಸು ವಲಯದ ವೃತ್ತಿಪರ ಅನುಭವ ಕಡ್ಡಾಯವಾಗಿದೆ.

  • ವಯೋಮಿತಿ:

    • ಕನಿಷ್ಠ 23 ವರ್ಷದಿಂದ ಗರಿಷ್ಠ 50 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು (ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ ಬದಲಾಗುತ್ತದೆ)

State Bank of India
ಪದವೀಧರರಿಗೆ ₹1.10 ಲಕ್ಷ ಸಂಬಳದ ಸರ್ಕಾರಿ ಉದ್ಯೋಗಾವಕಾಶ: ಯುನೈಟೆಡ್ ಇಂಡಿಯಾದಲ್ಲಿ 225 ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಎಸ್‌ಬಿಐ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಆದ SBI ಕರಿಯರ್ಸ್ ಪೋರ್ಟಲ್ ಮೂಲಕ ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ, ತಮ್ಮ ರೆಸ್ಯೂಮ್ ಮತ್ತು ಅಗತ್ಯ ಅನುಭವದ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

  • ಅರ್ಜಿ ಶುಲ್ಕ:

    ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳಿಗೆ ₹750 ಇರಲಿದ್ದು, ಎಸ್‌ಸಿ, ಎಸ್‌ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಹುದ್ದೆಗಳ ಕಾರ್ಯಾವಧಿ:

ನೇಮಕಾತಿಯನ್ನು ನಿಗದಿತ 5 ವರ್ಷಗಳ ಅವಧಿಗೆ ಮಾತ್ರ ನೇಮಕ ಮಾಡಲಾಗುತ್ತದೆ. ಜೊತೆಗೆ, ಈ ಒಪ್ಪಂದವನ್ನು ಮುಂದೆ ನವೀಕರಿಸಲು ಅವಕಾಶವಿರುವುದಿಲ್ಲ. ಇದರೊಂದಿಗೆ, ಕೆಲ ಹುದ್ದೆಗಳಿಗೆ ಹುದ್ದೆಯ ಸ್ವರೂಪ ಮತ್ತು ಬ್ಯಾಂಕಿನ ನಿಯಮಗಳಿಗೆ ಅನುಗುಣವಾಗಿ ಒಪ್ಪಂದದ ಅವಧಿ ಬದಲಾಗುತ್ತದೆ.

ಸಂಬಳ:

  • ಹುದ್ದೆಗಳಿಗೆ ಅನುಗುಣವಾಗಿ ವಾರ್ಷಿಕ ವೇತನ ₹27.10 ಲಕ್ಷದಿಂದ ₹97 ಲಕ್ಷದವರೆಗೆ ಇರಲಿದೆ. 

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ನೇರ ಸಂದರ್ಶನದ (ಇಂಟರ್ವ್ಯೂ) ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಲಿಂಕ್:

https://sbi.bank.in/web/careers/current-openings

State Bank of India
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದೀರಾ? ಬೆಂಗಳೂರಿನಲ್ಲಿದೆ ಉತ್ತಮ ಉದ್ಯೋಗಾವಕಾಶ; ₹70,000 ಸಂಬಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com