ಆದಿಪುರುಷ ಚಿತ್ರದಲ್ಲಿ ಪ್ರಭಾಸ್
ಸಿನಿಮಾ
ಜೂನ್ 16ಕ್ಕೆ 'ಆದಿಪುರುಷ' ತೆರೆಗೆ, ಮುಂಗಡ ಬುಕ್ಕಿಂಗ್ ಆರಂಭ
ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿಪುರುಷ' ಬಹುಭಾಷಾ ಚಿತ್ರ ಇದೇ ತಿಂಗಳ 6 ರಂದು ಜಗತ್ತಿನಾದ್ಯಂತ 3ಡಿಯಲ್ಲಿ ಬಿಡುಗಡೆಯಾಗುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಚಿತ್ರ ತಯಾರಕರಾದ ಟಿ-ಸೀರೀಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮುಂಗಡ ಬುಕ್ಕಿಂಗ್ ವಿವರಗಳನ್ನು ಹಂಚಿಕೊಂಡಿದೆ.

ಕಾಯುವುದು ಕೊನೆಗೂ ಕೊನೆಗೊಂಡಿದೆ! ಇನ್ನಿಲ್ಲದಂತೆ ಸಿನಿಮೀಯ ಸಾಹಸವನ್ನು ಅನುಭವಿಸಲು ಸಿದ್ಧರಾಗಿ! ಮುಂಗಡ ಬುಕಿಂಗ್ ಪ್ರಾರಂಭಿಸಿ, ಜಾಲತಾಣದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿ, ಜೂನ್ 16 ರಂದು ವಿಶ್ವದಾದ್ಯಂತ ಆದಿಪುರುಷ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಪ್ರೊಡಕ್ಷನ್ ಹೌಸ್ ಟ್ವೀಟ್‌ನಲ್ಲಿ ತಿಳಿಸಿದೆ.
ಓಂ ರಾವುತ್ ನಿರ್ದೇಶನದ ಆದಿಪುರುಷ ಚಿತ್ರದಲ್ಲಿ ದಕ್ಷಿಣ ಸಿನಿ ರಂಗದ ಸೂಪರ್ ಸ್ಟಾರ್, ನಟ ಪ್ರಭಾಸ್, ಬಾಲಿವುಡ್ ನಟಿ ಕೃತಿ ಸನೋನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಸೇರಿ ಹಲವು ನಟ, ನಟಿಯರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ