ತಿರುಪತಿ ದೇವಸ್ಥಾನದಲ್ಲಿ ನಟಿ ಕೃತಿ ಸನೂನ್ ಗೆ 'ಆದಿಪುರುಷ' ಚಿತ್ರ ನಿರ್ದೇಶಕ ಚುಂಬನ; ವಿಡಿಯೋ ವೈರಲ್!
ಆದಿಪುರುಷ ಚಿತ್ರ ನಿರ್ದೇಶಕ ಓಂ ರಾವುತ್ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ತಿರುಪತಿ ದೇವಸ್ಥಾನದಲ್ಲಿ ಓಂ ರಾವುತ್ ನಟಿ ಕೃತಿ ಸನನ್‌ಗೆ ಬಿಳ್ಕೋಡುಗೆ ವೇಳೆ ಮುತ್ತು ನೀಡಿದ್ದು, ಈ ಕೃತ್ಯಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Published: 08th June 2023 01:04 PM | Last Updated: 08th June 2023 01:56 PM | A+A A-

ಓಂ ರಾವುತ್-ಕೃತಿ ಸನೂನ್
ಆದಿಪುರುಷ ಚಿತ್ರ ನಿರ್ದೇಶಕ ಓಂ ರಾವುತ್ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ತಿರುಪತಿ ದೇವಸ್ಥಾನದಲ್ಲಿ ಓಂ ರಾವುತ್ ನಟಿ ಕೃತಿ ಸನನ್‌ಗೆ ಬಿಳ್ಕೋಡುಗೆ ವೇಳೆ ಮುತ್ತು ನೀಡಿದ್ದು, ಈ ಕೃತ್ಯಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ, ಚಿತ್ರದ ಟ್ರೈಲರ್ ಅನ್ನು ತಿರುಪತಿಯಲ್ಲಿ ಬಿಡುಗಡೆ ಮಾಡಿದ ನಂತರ, ಚಿತ್ರದ ಸ್ಟಾರ್‌ಕಾಸ್ಟ್ 7 ಮೇ 2023ರಂದು ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿತು. ಚಿತ್ರಕ್ಕೆ ಸಂಬಂಧಿಸಿದವರು ದೇವಸ್ಥಾನದ ಆವರಣದಲ್ಲಿ ಇರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ದರ್ಶನದ ನಂತರ, ಕೃತಿ ಸನೋನ್ ಅಲ್ಲಿಂದ ಹೊರಡಲು ಮುಂದಾದಾಗ ಓಂ ರಾವುತ್ ನಟಿಯನ್ನು ತಬ್ಬಿಕೊಂಡು ಅವಳ ಕೆನ್ನೆಗೆ ಚುಂಬಿಸುತ್ತಾರೆ.
ದೇವಸ್ಥಾನದ ಆವರಣದಲ್ಲಿ ನಡೆದ ‘ಚುಂಬನ’ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಅವರ ಹೇಳಿಕೆಯನ್ನು ಉಲ್ಲೇಖಿಸಿ, “ಇದು ಖಂಡನೀಯ ಕೃತ್ಯ. ಹೋಟೆಲ್ ಕೋಣೆಗೆ ಹೋಗುವ ಮೂಲಕ ನೀವು ಎಲ್ಲವನ್ನೂ ಮಾಡಬಹುದು. ನಿಮ್ಮ ನಡವಳಿಕೆಯು ರಾಮಾಯಣ ಮತ್ತು ಸೀತಾದೇವಿಯನ್ನು ಅವಮಾನಿಸುವಂತಿದೆ ಎಂದು ಹೇಳಿದ್ದಾರೆ.
Pecks & flying kiss are not allowed & it’s basic sense they shouldn’t do this in temple premises. #Bollywood actor #KritiSanon greeted Director #OmRaut with a peck & in return #OmRaut with a flying kiss while leaving after #LordVenkateshwara darshan in #Tirupati. pic.twitter.com/qiGEs6gwyD
— Sowmith Yakkati (@sowmith7) June 7, 2023
ಇದಕ್ಕೂ ಮೊದಲು, ಕೃತಿ ಸನೋನ್ ನಾಸಿಕ್‌ನ ಪಂಚವಟಿಯಲ್ಲಿರುವ ಸೀತಾ ಗುಫಾ ಮತ್ತು ಕಲಾರಾಮ್ ದೇವಾಲಯಕ್ಕೆ ದರ್ಶನಕ್ಕಾಗಿ ಆಗಮಿಸಿದಾಗ, ಅನೇಕ ಜನರು ಆಕ್ಷೇಪಣೆಗಳನ್ನು ಎತ್ತಿದ್ದರು. ಸಿನಿಮಾ ಬಿಡುಗಡೆ ಸಮೀಪಿಸುತ್ತಿದ್ದಂತೆ ಬಾಲಿವುಡ್ ಮಂದಿ ಧಾರ್ಮಿಕರಾಗುತ್ತಾರೆ ಎಂದು ಹಲವರು ಹೇಳುತ್ತಿದ್ದರು. ಇದೇ ವೇಳೆ ಕೆಲವರು ಸಿನಿಮಾ ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸುವುದನ್ನು ನಿಷೇಧಿಸುವ ಬಗ್ಗೆಯೂ ಮಾತನಾಡಿದ್ದರು.
ಗಮನಾರ್ಹವಾಗಿ, ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ಆದಿಪುರುಷ' ಚಿತ್ರವು ಜೂನ್ 16, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಮಾಯಣದ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಭಗವಾನ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಕೃತಿ ಸನೂನ್ ಸೀತೆ ಪಾತ್ರದಲ್ಲಿ ಮತ್ತು ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹನುಮಾನ್ ಜಿಗಾಗಿ ಪ್ರತಿ ಥಿಯೇಟರ್‌ನಲ್ಲಿ ಒಂದು ಸೀಟನ್ನು ಖಾಲಿ ಬಿಡಲು ಆದಿಪುರುಷ ನಿರ್ಮಾಪಕರು ನಿರ್ಧರಿಸಿದ್ದಾರೆ. 'ಆದಿಪುರುಷ' ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.