ಬಿಗ್ ಬಾಸ್ ಖ್ಯಾತಿಯ ನಟಿ ಐಶ್ವರ್ಯಾ ಸಿಂಧೋಗಿಗೆ ಅಶ್ಲೀಲ ಕಮೆಂಟ್; ಸಂಜಯನಗರ ಠಾಣೆಯಲ್ಲಿ ದೂರು ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಗೆ, ಅದರಲ್ಲೂ ವಿಶೇಷವಾಗಿ ಮಹಿಳಾ ನಟಿಯರಿಗೆ ಕಿರುಕುಳ ನೀಡುವುದು ಹೆಚ್ಚಾಗುತ್ತಿದೆ. ಇದೀಗ ಬಿಗ್‌ ಬಾಸ್ ಖ್ಯಾತಿಯ ಖ್ಯಾತ ನಟಿ ಐಶ್ವರ್ಯಾ ಸಿಂಧೋಗಿ ಅವರಿಗೂ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ.
Actress Aishwarya Sindhogi
ನಟಿ ಐಶ್ವರ್ಯಾ ಸಿಂಧೋಗಿOnline Desk
Updated on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಗೆ ಅದ್ರಲ್ಲೂ, ವಿಶೇಷವಾಗಿ ಮಹಿಳಾ ನಟಿಯರನ್ನ ಗುರಿಯಾಗಿಸಿಕೊಂಡು ಅಶ್ಲೀಲ ಕಾಮೆಂಟ್ಗಳ್ಳನು ಮಾಡಲಾಗುತ್ತಿದೆ. ಅದರಂತೆ, ಈ ಹಿಂದೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೂ ಅಶ್ಲೀಲ ಕಮೆಂಟ್ ಮಾಡಿದ್ದ ಪುಂಡರು ಕಂಬಿ ಎಣಿಸುತ್ತಿದ್ದಾರೆ. ಇದನ್ನು ನೋಡಿ ಕೂಡ ಪುಂಡರಿಗೆ ಬುದ್ದಿ ಬಂದಂತೆ ಕಾಣಿಸುತ್ತಿಲ್ಲ! ಅದರಂತೆ, ಇದೀಗ ಬಿಗ್‌ ಬಾಸ್ ಖ್ಯಾತಿಯ ಖ್ಯಾತ ನಟಿ ಐಶ್ವರ್ಯಾ ಸಿಂಧೋಗಿ ಅವರಿಗೂ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ನಟಿ ಐಶ್ವರ್ಯಾ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯದಲ್ಲಿ ಅಪ್‌ಲೋಡ್ ಮಾಡುವ ಪೋಸ್ಟ್‌ಗಳಿಗೆ ಕಳೆದ 2 ತಿಂಗಳಿಂದ ಸತತವಾಗಿ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದ್ರಲ್ಲೂ, ಈ ಕೆಲಸಗಳನ್ನೂ ತಮಗೆ ಪರಿಚಯೇ ಮಾಡುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದೂರು ದಾಖಲಿಸಲಾಗಿದೆ.

Actress Aishwarya Sindhogi
'ಅತಿಕಾಯ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಸ್ವಾತಿಷ್ಟ ರೀ-ಎಂಟ್ರಿ; ನಿರೂಪ್‌ಗೆ ಜೋಡಿಯಾದ ಒಂದು ಸರಳ ಪ್ರೇಮಕಥೆ ಬೆಡಗಿ

ಏತನ್ಮಧ್ಯೆ, ಐಶ್ವರ್ಯಾ ಸಿಂಧೋಗಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಇದೆ ಮೊದಲ ಬಾರಿಗೇನಲ್ಲ. ಈ ಹಿಂದೆ 2022 ರಲ್ಲಿಯೂ ಇದೇ ರೀತಿಯ ಕಿರುಕುಳಕ್ಕೆ ಐಶ್ವರ್ಯಾ ಸಿಂಧೋಗಿ ಗುರಿಯಾಗಿದ್ದರು ಎಂದು ಹೇಳಲಾಗಿದೆ. ಆಗಲೂ ಕರೆಗಳ ಮೂಲಕ ಕಿರುಕುಳ, ಹಿಂಬಾಲಿಸುವುದು ಹಾಗೂ ವಿವಿಧ ರೀತಿಯ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿ ಇದೇ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆ ಪ್ರಕರಣದ ಬಳಿಕ ಕೆಲಕಾಲ ಕಿರುಕುಳ ನಿಂತಿದ್ದರೂ, ಇದೀಗ ಮತ್ತೆ ಅದೇ ರೀತಿಯ ಘಟನೆಗಳು ಮರುಕಳಿಸಿರುವುದಾಗಿ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಅದರಂತೆ, ನಟಿಯ ಮನವಿಯ ಮೇರೆಗೆ ಸಂಜಯನಗರ ಪೊಲೀಸರು ಸದ್ಯ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

Actress Aishwarya Sindhogi
ಅಪಘಾತದ ನಂತರ ಪಟಾಕಿ ಪಾರ್ವತಿ ಭರ್ಜರಿ ಕಮ್ ಬ್ಯಾಕ್; ನಾಗಬಂಧಂ ಯಶಸ್ಸಿನಲ್ಲಿ ನಭಾ ನಟೇಶ್

ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ ಕ್ವೀನ್ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕಮೆಂಟ್‌ಗಳ ಮೂಲಕ ನಿಂದಿಸಲಾಗಿತ್ತು. ಜೊತೆಗೆ ರುಕ್ಮಿಣಿ ವಸಂತ್ ಅವರ ಚಿತ್ರವನ್ನು ಸಹ ಕಿಡಿಗೇಡಿಗಳು AI ಮೂಲಕ ಅಶ್ಲೀಲ ಫೋಟೋ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆ ವೇಳೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸಿ, ಅಶ್ಲೀಲ ಕಮೆಂಟ್ ಮಾಡಿದ್ದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com